ಚಂದ್ರಯಾನದಿಂದ ಬಂದ ಮೊದಲ ಚಿತ್ರವೆಂದು ವ್ಯಂಗ್ಯವಾಗಿ ಛಾಯಾವಾಲಾ ಚಿತ್ರ ಪೋಸ್ಟ್ ಮಾಡಿದ ಪ್ರಕಾಶ್ ರೈಃ ವ್ಯಾಪಕ ಖಂಡನೆ
ಪ್ರಕಾಶ್ ರೈ ವಿರುದ್ಧ ಕಿಡಿಕಾರಿದ ಹಲವರು..ದೇಶಕ್ಕೆ ರೈ ಅವಮಾನಃ ಜನಾಕ್ರೋಶ
![](https://vinayavani.com/wp-content/uploads/2023/08/IMG_20230821_103110.jpg)
ಚಂದ್ರಯಾನದಿಂದ ಬಂದ ಮೊದಲ ಚಿತ್ರವೆಂದು ವ್ಯಂಗ್ಯವಾಗಿ ಛಾಯಾವಾಲಾ ಚಿತ್ರ ಪೋಸ್ಟ್ ಮಾಡಿದ ಪ್ರಕಾಶ್ ರೈ
ಪ್ರಕಾಶ್ ರೈ ವಿರುದ್ಧ ಕಿಡಿಕಾರಿದ ಹಲವರು..ದೇಶಕ್ಕೆ ರೈ ಅವಮಾನ ಜನಾಕ್ರೋಶ
ವಿವಿ ಡೆಸ್ಕ್ಃ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ – 3 ಕೈಗೊಂಡಿದ್ದು, ಇನ್ನೇನು ಇದೇ ಆ.23 ರಂದು ಇಳಿಯಲಿದೆ ಎಂಬ ಮಾಹಿತಿ ಇಸ್ರೋದವರು ನೀಡುತ್ತಿದ್ದಂತೆ, ಅಲ್ಲದೆ ಈಗಾಗಲೇ ಚಂದ್ರನ ಕಕ್ಷೆ ಸೇರಿದೆ ಎನ್ನಲಾದ ನೌಕೆ ಚಿತ್ರವೊಂದನ್ನು ಕ್ಲಿಕ್ಕಿಸಿ ಕಳುಹಿಸಿದ ಫೋಟೊ ಸಂಭ್ರಮದಿಂದ ಇಸ್ರೋ ಹಂಚಿಕೊಂಡಿತ್ತು.
ಆ ಚಿತ್ರ ಕುರಿತು ನಟ, ಪ್ರಗತಿಪರ ಚಿಂತಕ ಪ್ರಕಾಶ್ ರೈ ಛಾಯೇವಾಲಾನ ವ್ಯಂಗ್ಯ ಭರಿತ ಚಿತ್ರವೊಂದನ್ನು ಟ್ವಿಟ್ ರನಲ್ಲಿ ಹಾಕಿ ಚಂದ್ರಯಾನದಿಂದ ಬಂದ ಮೊದಲ ಚಿತ್ರವೆಂದು ಬರೆದು ಕೊಂಡಿರುವದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟ್ವಿಟ್ನಲ್ಲಿ ಪ್ರಕಾಶ್ ರೈ ವಿರುದ್ಧ ಹಲವರು ಕೆಂಡಕಾರಿದ್ದಾರೆ. ಇನ್ನೇನು ಎರಡು ದಿನದಲ್ಲಿ ಚಂದ್ರಾಯಾನ -3 ಚಂದ್ರನ ಅಂಗಳ ಸ್ಪರ್ಶಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದ ಶುಭಗಳಿಗೆಯಲಿ. ನಟ ಪ್ರಕಾಶ್ ರೈ ಹಂಚಿಕೊಂಡ ವ್ಯಂಗ್ಯಚಿತ್ರ ಹಲವರಿಗೆ ಬೇಸರ ತರಿಸುವಂತೆ ಮಾಡಿದ್ದು ಟೀಕೆಗೆ ಗುರಿಯಾಗಿದೆ ಎನ್ನಬಹುದು.
ದೇಶ ಭಕ್ತಿ,ದೇಶದ ಏಳ್ಗೆ ಸಹಿಸದ ಒಂಚೂರು ದೇಶದ ಬಗ್ಗೆ ಅಭಿಮಾನವಿಲ್ಲದ ರೈ ಈ ರೀತಿ ಪೋಸ್ಟ್ ಮಾಡಿದ್ದಾರೆ ಇದು ದೇಶದ್ರೋಹಕ್ಕೆ ಸಮಾನ ಪ್ರಕಾಶ ರೈ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆಧರದಿ ಕಾನೂನು ಕ್ರಮಕೈಗೊಳ್ಳಬೇಕೆಂದು ಹಲವರು ಆಗ್ರಹಿಸುತ್ತಿರುವದು ಸಾಮಾಜಿಕ ಜಾಲ ತಾಣದಲ್ಲಿ ಕಾಣಬಹುದು.
ದೇಶದ ಹೆಮ್ಮೆ ಇಸ್ರೋ ಸಂಸ್ಥೆ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ವೈಜ್ಞಾನಿಕವಾಗಿ ಯೇ ವಿಜ್ಞಾನ ಮುಂದುವರೆದು ಮಂಗಳನ ಅಂಗಳ ಮೇಲ್ಮೈ ತಲುಪಲಿರುವದು ಹೆಮ್ಮೆಯ ವಿಷಯ ಹಂಚಿಕೊಳ್ಳುವದು ಬಿಟ್ಟು ದ್ವೇಷದ ಬೀಜ ಬಿತ್ತುವಲ್ಲಿ ನಿರತರಾಗಿರುವದು ದೇಶದಾದ್ಯಂತ ಟೀಕೆ, ಖಂಡನೆಗೆ ಒಳಗಾಗಿದೆ. ಜನಾಕ್ರೋಶ ವ್ಯಕ್ತವಾಗುತ್ತಿದೆ.