ಕುರುಬ ಸಮಾಜದ ಮತಗಳು ಭಿನ್ನವಾಗಲಿವೆಯೇ.?
ಬೆಂಗಳೂರಃ ಪ್ರಸ್ತುತ ಉಪ ಚುನಾವಣೆಯಲ್ಲಿ ಜಾತಿ ರಾಜಕಾರಣಕ್ಕೆ ಈಗೊಂದು ಟ್ವಿಸ್ಟ್ ದೊರೆತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ಕುರುಬ ಸಮುದಾಯದ ಅಸ್ತ್ರ ಪ್ರಯೋಗವನ್ನು ಬಿಜೆಪಿ ಮಾಡುತ್ತಿದೆ. ಸಿಎಂ ಯಡಿಯೂರಪ್ಪ ಸಚಿವ ಸಂಪುಟದಲ್ಲಿ 5 ಜನ ಕುರುಬ ಸಮುದಾಯದವರು ಮಂತ್ರಿಯಾಗಲಿದ್ದಾರೆ. ಹೀಗಾಗಿ ಸಮುದಾಯ ಮತದಾರರು ಆಶೀರ್ವಾದ ಮಾಡಬೇಕಿದೆ ಎಂದು ಸುದ್ದಿ ಹರಡಿಸಲಾಗಿದೆ.
ನಿರ್ಣಾಯಕವಾಗಿರುವ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದ್ದು, ಕುರುಬ ಸಮಾಜದ ಮತದಾರರನ್ನು ತಮ್ಮತ್ತ ಸೆಳೆಯುತ್ತಿದೆ. ಐದು ಜನ ಮಂತ್ರಿಯಾಗುವ ಮೂಲಕ ಕುರುಬ ಸಮಾಜದ ಇತಿಹಾಸ ನಿರ್ಮಾಣವಾಗಲಿದೆ,
ಈಗಾಗಲೇ ಕುರುಬ ಸಮುದಾಯದವರಾದ ಈಶ್ವರಪ್ಪ ಮಂತ್ರಿಯಾಗಿದ್ದಾರೆ. ರಾಣೆಬೆನ್ನೂರು, ಹುಣಸೂರು, ಹೊಸಕೋಟೆ, ಕೆ.ಆರ್.ಪುರಂನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಇನ್ನೂ ನಾಲ್ವರು ಮಂತ್ರಿಯಾಗುತ್ತಾರೆ..ಎಂಟಿಬಿ ನಾಗರಾಜ , ವಿಶ್ವನಾಥ್, ಬೈರತಿ ಬಸವರಾಜು, ಶಂಕರ್ ಮಂತ್ರಿಯಾಗುತ್ತಾರೆ ಎಂಬ ಭಿತ್ತಿಪತ್ರವನ್ನು ಹಂಚುವ ಮೂಲಕ ಬಿಜೆಪಿ ಮುಖಂಡರು ಸಾಮಾಜಿಕ ತಾಣಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ನವರಿಗೆ ಸಮುದಾಯದ ಅಸ್ತ್ರ ಪ್ರಯೋಗಿಸಿ ಅವರನ್ನು ಕಟ್ಟಿಹಾಕುವ ಯತ್ನ ಮಾಡಲಾಗುತ್ತಿದೆ. ಹಾಗಾದರೆ ಬಿಜೆಪಿಯ ಜಾತಿ ಅಸ್ತ್ರದಿಂದ ಸಿದ್ದರಾಮಯ್ಯನವರ ತಂತ್ರಗಾರಿಕೆಗೆ ಬ್ರೇಕ್ ಹಾಕಲು ಸಾಧ್ಯವೇ? ಅಥವಾ ಕುರುಬ ಸಮುದಾಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಸ್ತ್ರ ಫಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.