ಪ್ರಮುಖ ಸುದ್ದಿ
ಇಂಗ್ಲೀಷ್ ಬೇಕು ರಾಷ್ಟ್ರೀಯ ಭಾಷೆ ಹಿಂದಿ ಬೇಡ್ವಾ.? -ಜೋಷಿ
ಧಾರವಾಡಃ ಇಂಗ್ಲೀಷ ಬೇಕು ಎನ್ನುವವರು ರಾಷ್ಟ್ರೀಯ ಭಾಷೆ ಹಿಂದಿ ಬೇಡವೆಂದು ಏಕೆ ವಿರೋಧಿಸುತ್ತಿದ್ದಾರೆ.? ಎಂದು ಸಂಸದ ಪ್ರಹ್ಲಾದ ಜೋಷಿ ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಹಿಂದಿ ಕಲಿಯಬೇಕು. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಅಮೀತ್ ಶಾ ಎಲರೂ ಹಿಂದಿ ಕಲಿಯಬೇಕು ಎಂದು ಹೇಳಿದ್ದಾರಷ್ಟೆ ಅದರ್ಥ ಕನ್ನಡವನ್ನು ನಿರ್ಲಕ್ಷಿಸಿ ಎಂದಲ್ಲ.
ಇಂಗ್ಲೀಷ ಕಲಿಯಲು ಸಿದ್ಧರಿರುವವರು ಹಿಂದಿ ಕಲಿಯಲು ವಿರೋಧಿಸುವದು ಯಾಕೆ.? ಎಂಬುದು ಗೊತ್ತಾಗುತ್ತಿಲ್ಲ.
ಮೆಟ್ರೋದಲ್ಲಿ ಇಂಗ್ಲೀಷ್ ಬೋರ್ಡ್ ನಡೆಯುತ್ತದೆ ಹಿಂದಿ ಅಕ್ಷರದಿ ಬರೆದ ನಾಮಫಲಕ ತೆಗೆಯಿರಿ ಎಂದರೆ ಇದ್ಯಾವ ನ್ಯಾಯವೆಂದು ಅವರು ಪ್ರಶ್ನೆ ಮಾಡಿದ್ದಾರೆ.