ಶಾಸಕ ಜಮೀರ್-ಸಂಜನಾಳ ನಂಟೇನು.? ಪ್ರಶಾಂತ ಸಂಬರಿಗಿ ಪ್ರಶ್ನೆ
ಶಾಸಕ ಜಮೀರಖಾನ್ ಏನ್ ಹೇಳ್ತೀರಾ.? ಸಂಜನಾಳ ಜೊತೆ ಶ್ರೀಲಂಕಾಗೆ ಹೋಗಿದ್ರಾ.? ನೀವೇನಾ ಜಮೀರಖಾನ್.?
ವಿವಿ ಡೆಸ್ಕ್ಃ ಚಂದನವನದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಇದೀಗ ನಟಿ ಸಂಜನಾ ಜೊತೆ ಶಾಸಕ ಜಮೀರ್ ಖಾನ ಶ್ರೀಲಂಕಾಕ್ಕೆ ತೆರಳಿದ್ದರು.
ಕೋಲಂಬೋದ ಕ್ಯಾಸಿನೋ ಒಂದರಲ್ಲಿ ಇಬ್ಬರು ಭಾಗಿಯಾಗಿದ್ದರು ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ ಆ ವೇಳೇ ಶಾಸಕ ಜಮೀರ್ ಖಾನ್ ಅಪಾರ ಹಣ ಕಳೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಶಾಸಕ ಜಮೀರ್ ಗೂ ನಟಿ ಸಂಜನಾಳ ನಂಟೇನು.? ಎಂದ ಪ್ರಶಾಂತ ಪ್ರಶ್ನಿಸಿದ್ದಾರೆ.
ಈ ಕುರಿತು ಎಲ್ಲಡೆ ಸುದ್ದಿ ಹಬ್ಬಿದ್ದು, ಈ ಪ್ರಶ್ನೆಗೆ ಶಾಸಕ ಜಮೀರ ಖಾನ್ ಅವರು ಯಾವುದೇ ಪ್ರತಿಕ್ರಿಯೆ ನೀಡದಿರುವದು ಸೋಜಿಗವಾಗಿದೆ.
ಆದರೆ ಪ್ರಶಾಂತ ಸಂಬರಗಿ ಹೇಳಿಕೆ ಪ್ರಕಾರ, 2019 ರ ಜೂನ್ 8 ರಂದು ನಟಿ ಸಂಜನಾ ಮತ್ತು ಶಾಸಕ ಜಮಿರ್ ಖಾನ್ ಇಬ್ಬರು ಕೊಲಂಬೋಗೆ ಭೇಟಿ ನೀಡಿ, ಕ್ಯಾಸಿನೋದಲ್ಲಿ ಭಾಗಿಯಾಗಿದ್ದರು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.
ಈ ಕುರಿತು ಮಾತನಾಡಬೇಕಿರುವದು ಶಾಸಕ ಜಮೀರದ ಖಾನ್ ಮತ್ತು ನಟಿ ಸಂಜನಾ, ಮುಖ್ಯವಾಗಿ ಶಾಸಕರು ಈ ಕುರಿತು ಪ್ರತಿಕ್ರಿಯೆ ನೀಡಬೇಕಿದೆ. ಇದುವರೆಗೂ ಶಾಸಕರು ಈ ಕುರಿತು ತುಟಿ ಬಿಚ್ಚುತ್ತಿಲ್ಲವೇಕೇ.? ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.