ಪ್ರಮುಖ ಸುದ್ದಿ
ಸಂಸದ ‘ಪ್ರತಾಪ ಸಿಂಹ’ ಮನುಷ್ಯನಾ? ಪ್ರಾಣಿನಾ? – ಬಹುಭಾಷಾ ನಟ ಪ್ರಕಾಶ್ ರೈ ವಾಗ್ಬಾಣ
ಮಂಗಳೂರು: ನನ್ನ ಹೆಸರು ಪ್ರಕಾಶ ರೈ ಅಥವಾ ಪ್ರಕಾಶ್ ರಾಜ್ ಎಂದು ಪ್ರಶ್ನಿಸುತ್ತಾರೆ. ನನ್ನ ಹೆಸರು ಪ್ರಕಾಶ್ ರೈ, ಸಿನೆಮಾ ಕ್ಷೇತ್ರದಲ್ಲಿ ಪ್ರಕಾಶ್ ರಾಜ್. ನನ್ನ ಮೂಲ ಕರಾವಳಿ, ನನ್ನ ತಾಯಿ ತವರು ಗದಗ. ನಾನು ಕರಾವಳಿಯ ಕೂಸು. ಆದರೆ, ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಸಿಂಹ ಇದೆ. ಹಾಗಾದರೆ ಪ್ರತಾಪ ಸಿಂಹ ಮನುಷ್ಯನಾ? ಪ್ರಾಣಿನಾ?. ಆಹಾರಾ ತಿನ್ನುತ್ತಾರಾ ಅಥವಾ ಕಾಡಿನಲ್ಲಿ ಬೇಟೆಯಾಡಿ ತಿನ್ನುತ್ತಾರಾ? ಅಂತ ಕೇಳಬೇಕಾಗುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಕೆಲವರಿಗೆ ನಾನು ಖಳನಟ, ಇನ್ನೂ ಹಲವರಿಗೆ ಒಳ್ಳೆಯವನು. ಕರಾವಳಿ ಉತ್ಸವ ಉದ್ಘಾಟನೆ ಮಾಡಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರು ಅವರ ಭಾಷೆಯಲ್ಲಿ ಮಾತನಾಡಲಿ, ನಾವು ನಮ್ಮ ಭಾಷೆಯಲ್ಲಿ ಮಾತನಾಡೋಣ ಎಂದು ಹೇಳಿದರು.