ಪ್ರಮುಖ ಸುದ್ದಿHomeಅಂಕಣಕಥೆಜನಮನಮಹಿಳಾ ವಾಣಿವಿನಯ ವಿಶೇಷ

ಗಂಭೀರ ಕಾಯಿಲೆಗಳಿದ್ದರೂ ಓದಿ ಮೊದಲು IRS, ನಂತರ IAS ಅಧಿಕಾರಿಯಾದ ಪ್ರತಿಭಾ ವರ್ಮ

ಉತ್ತರಪ್ರದೇಶ: ಜೀವನದಲ್ಲಿ ಎದುರಾಗುವ ಆಕಸ್ಮಿಕ ಸಮಸ್ಯೆಗಳಿಗೆ ಹೆದರದೇ ಗುರಿಯೆಡೆಗೆ ನಡೆಯಬೇಕು, ಆಗ ಮಾತ್ರ ಸಾಧನೆಯ ಶಿಖರ ಏರಬಹುದು ಎಂಬುದಕ್ಕೆ ಐಎಎಸ್ ಪ್ರತಿಭಾ ವರ್ಮ ಸ್ಟೋರಿಯೇ ಸಾಕ್ಷಿ.

ಮೂಲತಃ ವರ್ಮಾ ಉತ್ತರ ಪ್ರದೇಶ ರಾಜ್ಯದ ಸುಲ್ತಾನ್‌ಪುರ್‌ ಪಟ್ಟಣದವರು. 2019 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಲ್ ಇಂಡಿಯಾ 3ನೇ ರ‍್ಯಾಂಕ್ ಪಡೆಯುವುದರೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದವರು. ಕೇಳಲು ಸುಲಭ ಎನಿಸಬಹುದು. ಆದರೆ ಇವರ ಯುಪಿಎಸ್‌ಸಿ ಪರಿಶ್ರಮದ ಜರ್ನಿ ಕೇಳಿದ ಯಾರಿಗೆ ಆದರೂ ಆಶ್ಚರ್ಯ ಆಗುವುದರಲ್ಲಿ ಸಂಶಯವಿಲ್ಲ. ಕಾರಣ ಅವರು ಈ ಪರೀಕ್ಷೆಗೆ ತಯಾರಿ ನಡೆಸುವಾಗಲೇ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮೊದಲು ಇಂಜಿನಿಯರ್‌ ಆಗಿದ್ದ ಇವರು ನಂತರ ಐಆರ್‌ಎಸ್‌ ಅಧಿಕಾರಿಯಾದರು. ನಂತರದಲ್ಲಿಯೇ ಐಎಎಸ್‌ ಆದರು.

ಹಿಂದಿ ಮಾಧ್ಯಮದಲ್ಲಿ ಶಾಲಾ ಶಿಕ್ಷಣ ಓದಿದ್ದು. ಆದರೂ ಸಹ ಅವರ ಗುರಿಯಿಂದ ವಿಚಲಿತರಾಗದವರು ಅವರು. ತಮ್ಮ 10ನೇ ತರಗತಿ ಶಿಕ್ಷಣವನ್ನು ಉತ್ತರ ಪ್ರದೇಶ ಬೋರ್ಡ್‌ನಿಂದಲೂ, 12ನೇ ತರಗತಿ ಶಿಕ್ಷಣವನ್ನು ಸಿಬಿಎಸ್‌ಇ ಬೋರ್ಡ್‌ನಿಂದಲೂ ಪಡೆದರು. ನಂತರ ಇವರು ದೆಹಲಿಗೆ ಬಂದು ಬಿ.ಟೆಕ್ ಅನ್ನು ಐಐಟಿ ದೆಹಲಿ’ಯಲ್ಲಿ ಪೂರ್ಣಗೊಳಿಸಿದರು.

2014 ರಲ್ಲಿ ಬಿ.ಟೆಕ್‌ ಪಾಸ್ ಮಾಡುತ್ತಿದ್ದಂತೆ ಪ್ರತಿಭಾ ವರ್ಮ ದೊಡ್ಡ ಟೆಲಿಕಾಂ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಪಡೆದಿದ್ದರು. ಅಲ್ಲಿ ಎರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ನಂತರ, ಉದ್ಯೋಗ ಬಿಡಲು ನಿರ್ಧರಿಸಿದರು. ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಆರಂಭಿಸಿದರು.

ತಮ್ಮ ಮೊದಲ ಪ್ರಯತ್ನದಲ್ಲಿ ಫೇಲ್‌ ಆಗಿದ್ದರು. ಎರಡನೇ ಪ್ರಯತ್ನದಲ್ಲಿ 489th ರ್ಯಾಂಕ್ ಪಡೆಯುವುದರೊಂದಿಗೆ ಭಾರತೀಯ ರೆವಿನ್ಯೂ ಸೇವೆಗೆ ಆಯ್ಕೆಯಾಗಿದ್ದರು. ಆದರೆ ಐಎಎಸ್‌ ಅಧಿಕಾರಿಯಾಗುವುದು ಇವರ ಗುರಿಯಾಗಿತ್ತು.

ಐಆರ್‌ಎಸ್‌ ಸೇವೆಗೆ ತೃಪ್ತಿ ಪಡದ ಪ್ರತಿಭಾ ವರ್ಮ ರವರು ತಮ್ಮ ತಯಾರಿ ಮುಂದುವರೆಸಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ 2019 ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಅಖಿಲ ಭಾರತ 3ನೇ ಯಾಂಕ್ ಪಡೆಯುವುದರೊಂದಿಗೆ ಐಎಎಸ್‌ ಅಧಿಕಾರಿಯಾಗಿದ್ದರು.

ಯುಪಿಎಸ್‌ಸಿ ಪರೀಕ್ಷೆ ತಯಾರಿ ವೇಳೆ ಪ್ರತಿಭಾ ವರ್ಮ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರು ಈ ಯಾವುದಕ್ಕೂ ಜಗ್ಗದ ಮಹಿಳೆ ಇವರು. 2018 ರಲ್ಲಿ ಡೆಗ್ಯೂ ಸಮಸ್ಯೆ ಇತ್ತು. 2019 ರಲ್ಲಿ ಥೈರಾಯ್ಡ್‌ ಸಮಸ್ಯೆ ಇತ್ತು. ಈ ಆರೋಗ್ಯ ಸಮಸ್ಯೆಗಳ ನಡುವೆ ಇವರು ಯುಪಿಎಸ್‌ಸಿಗೆ ತಯಾರಿ ನಡೆಸುವುದು ಸುಲಭವಾಗಿರಲಿಲ್ಲ. ಯೋಗ, ಧ್ಯಾನ ಮಾಡುವುದರೊಂದಿಗೆ, ವಿಶೇಷ ಕಾಳಜಿ ವಹಿಸಿ, ಸಮತೋಲನ ಆಹಾರ ಸೇವನೆಯೊಂದಿಗೆ ಆರೋಗ್ಯವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಈ ಪರಿಶ್ರಮಗಳೊಂದಿಗೆ ಇವರು ಯುಪಿಎಸ್‌ಸಿ AIR 3ನೇ ಸ್ಥಾನ ತೆಗೆದುಕೊಳ್ಳಲು ಸಾಧ್ಯವಾಯಿತು.

Related Articles

Leave a Reply

Your email address will not be published. Required fields are marked *

Back to top button