ಪ್ರಮುಖ ಸುದ್ದಿಬಸವಭಕ್ತಿ

ಶಿವನಾಮ ಸ್ಮರಣೆಯಿಂದ ಜೀವನ ಸಾರ್ಥಕತೆ-ಲಕ್ಷ್ಮೀದೇವಿ

ಸಿದ್ಧಾರೂಢ ಮಠದಲ್ಲಿ ಜ್ಞಾನ ದಾಸೋಹ ಆರಂಭ

ಯಾದಗಿರಿ, ಶಹಾಪುರಃ ಪ್ರಕೃತಿಯ ವಿವಿಧ ಮಜಲನ್ನು ಬಳಸಿಕೊಂಡು ಬೆಳೆಯುವ ಈ ಶರೀರವು ಪ್ರೀತಿಯಿಂದ ರಾಮನಾಮ ಜಪ ತಪದೊಂದಿಗೆ ಬದುಕು ಕಟ್ಟಿಕೊಂಡಲ್ಲಿ ಜೀವನ ಸಫಲವಾದಂತೆ ಇಲ್ಲವಾದರೆ ವಿಫಲತೆಯೇ ಹೆಚ್ಚು ಎಂದು ಕಲಬುರ್ಗಿಯ ಸಿದ್ಧಾರೂಢ ಮಠದ ಲಕ್ಷ್ಮೀದೇವಿ ತಿಳಿಸಿದರು.

ತಾಲೂಕಿನ ಭೀಮರಾಯನ ಗುಡಿಯ ಸಾಧಕ ಸಿದ್ಧಾಶ್ರಮ ಸಿದ್ಧಾರೂಢ ಮಠದಲ್ಲಿ ವಿಶ್ವಶಾಂತಿಗಾಗಿ 34 ವರ್ಷದ ಜ್ಞಾನ ದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಗರನಾಡು ವಿವಿಧ ಮತ, ಪಂಥ ಮತ್ತು ಧರ್ಮಗಳ ನೆಲೆಯಾಗಿದ್ದು, ಸಾಧು ಸಂತರು, ಸೂಫಿ ಶರಣರ ಜನ್ಮಿಸಿದ ಪುಣ್ಯ ಭೂಮಿಯಾಗಿದೆ. ಹಲವು ವೈವಿಧ್ಯತೆಯೊಳಗೆ ಐಕ್ಯತೆಯನ್ನು ಕಾಪಾಡಿಕೊಂಡು ಮುನ್ನಡೆದಿದೆ.

ಪ್ರಸ್ತುತ ವಿಜ್ಞಾನ ಯುಗದ ಕೃತಕ ನಾಗರಿತೆ ಸ್ವಾರ್ಥ ದಾಹ ಅಧಿಕಾರ ಲಾಲಸೆ, ಮೋಸ ವಂಚನೆ, ಅನ್ಯಾಯ ಅನಾಚಾರಗಳು ಅಹಂಕಾರದ ಮಹಾಪೂರ ದುರ್ಗಣಗಳೆ ಅತಿಯಾಗಿ ಅಶಾಂತಿಯ ಬಿರುಗಾಳಿ ಹಬ್ಬಿದೆ. ಮಾನವರಲ್ಲಿ ಸುಖ ಶಾಂತಿ ಸಮಾಧಾನ ಇಲ್ಲದೆ ದುಃಖಿಗಳಾಗಿ ದುರ್ಬಲ ಸ್ಥಿತಿಗೆ ತಲುಪುವಂತಾಗಿದೆ.

ಇಂತಹ ಸಂಧಿಗ್ಧ ಸ್ಥೀತಿಯಲ್ಲಿ ಮಹಾಪುರುಷರ ಸಂತರ ಶಿವ ಶರಣರ ಜೀವನ ಸಂದೇಶಗಳು ಮನುಕುಲ್ಲಕ್ಕೆ ದಾರಿದೀಪವಾಗಿವೆ. ಎಲ್ಲರು ಸಂತರ ಶರಣರ ಸಂದೇಶಗಳನ್ನು ತಿಳಿದುಕೊಂಡು ಬದುಕು ಕಟ್ಟಿಕೊಂಡಲ್ಲಿ ಜೀವನ ಪಾವನವಾಗಲಿದೆ ಎಂದರು.

ಶ್ರೀಮಠದ ಜ್ಞಾನೇಶ್ವರಿ ದೇವಿ ಮಾತನಾಡಿ, ಒತ್ತಡದ ಜೀವನದಲ್ಲಿ ಮನುಕುಲಕ್ಕೆ ಒಂದಿಷ್ಟು ತಿಳುವಳಿಕೆ ನೀಡುವ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ವಿಶ್ವ ಶಾಂತಿಗಾಗಿ ದಿನವೂ ಶರಣರ ಪ್ರತಿಯೊಂದು ವಿಷಯದ ಆಧಾರದ ಮೇಲೆ ಜ್ಞಾನ ದಾಸೋಹ ಹಮ್ಮಿಕೊಂಡಿದ್ದು, ಸಕಲರು ಭಾಗವಹಿಸುವ ಮೂಲಕ ಬದುಕಿನ ಒತ್ತಡದಿಂದ ಒಂದಿಷ್ಟು ಸಂತುಷ್ಟಿಯಡೆಗೆ ಹೆಜ್ಜೆ ಹಾಕಬೇಕು ಎಂದರು. ಬುಧವಾರ ಜ್ಞಾನ ದಾಸೋಹದ ವಿಷಯ ನೀನ್ಯಾಕೋ ನಿನ್ನ ಹಂಗ್ಯಾಕೋ ಎಂಬ ವಿಷಯ ಕುರಿತು ಶಂಕರಾನಂದ ಸ್ವಾಮೀಜಿ, ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ಮತ್ತು ಗೋಪಾಲ ಶಾಸ್ತ್ರೀಗಳು ಮಾತನಾಡಿದರು. ಸೋಲಾಪುರದ ಸಿದ್ಧಾರೂಢ ಮಠದ ಮಾತಾ ಅರುಣಾ ತಾಯಿಯವರಯ ಪ್ರಾರ್ಥಿಸಿದರು. ಮಹೇಶ ಪತ್ತಾರ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button