ಪ್ರಮುಖ ಸುದ್ದಿ

ಯಾದಗಿರಿಃ ‘ಪ್ರೀತಿಯ ಮೋಸ’ ಕಿರು ಚಿತ್ರದ ಟೈಟಲ್ ಬಿಡುಗಡೆ

ಕಿರು ಚಿತ್ರದ ಟೈಟಲ್ ಬಿಡುಗಡೆ

ಯಾದಗಿರಿ: ತಾಲೂಕಿನ ಬಾಚವಾರ ಗ್ರಾಮದ ಎಸ್.ಎಸ್.ರವಿ ಬಾಚವಾರ ನಿರ್ದೇಶನದ ಪ್ರೀತಿಯ ಮೋಸ (ಲೋಕಲ್ ಹುಡುಗನ ಲವ್ ಕಹಾನಿ) ಕಿರುಚಿತ್ರದ ಟೈಟಲ್ ಬಿಡುಗಡೆ ನೆರವೇರಿತು.

ನಗರದ ಅತಿಥಿ ಗೃಹದಲ್ಲಿ ಸರಳ ಸಮಾರಂಭದಲ್ಲಿ ರಣಧೀರ ಪಡೆ ಜಿಲ್ಲಾಧ್ಯಕ್ಷ ಡಿ.ಭಾಸ್ಕರ ಅಲ್ಲಿಪೂರ ಟೈಟಲ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಯುವ ಪ್ರತಿಭೆಯನ್ನು ಸಿನಿ ಲೋಕಕ್ಕೆ ಪರಿಚಯಿಸಲು ನಮ್ಮೆಲ್ಲರ ಸಹಕಾರ ಅಗತ್ಯವಿದ್ದು, ನಾವೆಲ್ಲಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚಿತ್ರ ನಿರ್ದೇಶನ ಸಾಮಾನ್ಯ ಮಾತಲ್ಲ ಸಾಕಷ್ಟು ಪರಿಣಿತರೂ ಕೆಲವೊಮ್ಮೆ ಎಡವುದು ಸಹಜ. ಗ್ರಾಮೀಣ ಭಾಗದ ಯುವಕರು ಕಿರುಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು ಇದಕ್ಕೆ ತಾವು ಸದಾ ಸಹಕರಿಸುವುದಾಗಿ ತಿಳಿಸಿದರು.

ಕಿರುಚಿತ್ರ ನಿರ್ದೇಶಕ ಎಸ್.ಎಸ್.ರವಿ ಬಾಚವಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರೀತಿಯ ಬೆನ್ನತ್ತಿ ಯುವಕರು ಜೀವನದಲ್ಲಿ ಯಶಸ್ಸು ಸಾಧಿಸಲಾಗದೇ ವಿಫಲವಾದಾಗ ಪ್ರಿಯತಮೆ ಪ್ರಿಯಕರನನ್ನು ಬಿಟ್ಟು ಇನ್ನೊಬ್ಬನನ್ನು ಓಲೈಸುವ ಕಥೆಯಿದ್ದು ಒಟ್ಟಾರೆ ಜೀವನದಲ್ಲಿ ಯಶಸ್ಸು ಮುಖ್ಯ ಪ್ರೀತಿ ಒಂದು ಅಂಶ ಎನ್ನುವುದನ್ನು ಯುವ ಪೀಳಿಗೆಗೆ ಸಾರುವ ಉದ್ದೇಶ ಚಿತ್ರದಲ್ಲಿದೆ ಎಂದು ವಿವರಿಸಿದರು.

ಸುಮಾರು ಒಂದು ತಿಂಗಳಕಾಲ ಯಾದಗಿರಿ ಜಿಲ್ಲೆಯಲ್ಲಿಯೇ ಕಿರುಚಿತ್ರ ಚಿತ್ರೀಕರಣ ನಡೆಯಲಿದ್ದು, ಬಿಡುಗಡೆಗೆ ಮೂರು ತಿಂಗಳ ಸಮಯ ಬೇಕಿದ್ದು, ೭ಯುವಕರು ಮತ್ತು ೩ ಯುವತಿಯರು ನಟಿಸಲಿದ್ದಾರೆ ಎಂದರು.

ಈ ವೇಳೆ ಬೆಂಜಿಮನ್, ಎಜಿಗೇಲ್ ಯಡ್ಡಳ್ಳಿ, ಕೀರ್ತಿ ಕುಮಾರ, ಅಶೋಕ ನಾಯಕ ಬಾಚವಾರ್ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button