ಮಗು ಸಾವಿನ ಸುದ್ದಿ ಕೇಳಿ ಮೃತಪಟ್ಟ ಅಜ್ಜಿ ಮತ್ತು ಚಿಕ್ಕಮ್ಮ
ಯಾದಗಿರಿಃ ವಾಂತಿ ಭೇದಿಯಿಂದ ಮೂರು ವರ್ಷದ ಮಗು ಪ್ರದೀಪ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿರುವ ಸುದ್ದಿ ಕೇಳುತ್ತಿದ್ದಂತೆ ಮಗುವಿನ ಅಜ್ಜಿ ಮತ್ತು ಚಿಕ್ಕಮ್ಮ ಆಘಾತಗೊಂಡು ಸಾವನ್ನಪ್ಪಿದನು ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಕೋಡಾಲ್ ಗ್ರಾಮದಲ್ಲಿ ನಡೆದಿದೆ.
ಒಂದೇ ಮನೆಯಲ್ಲಿ ಮೂವರು ಮೃತಪಟ್ಟಿರುವ ಕಾರಣ ಕೋಡಾಲ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದರೆ. ಮಗ ಪ್ರದೀಪ್ (೩), ಚಿಕ್ಕಮ್ಮ ಭಾಗ್ಯಮ್ಮ (೨೧) ಹಾಗೂ ಅಜ್ಜಿ ಶಾಂತಮ್ಮ (೪೫) ಮೃತ ದುರ್ದೈವಿಗಳಾಗಿದ್ದಾರೆ.
ಇಂದು ಬೆಳಗ್ಗೆ ಮೂರು ವರ್ಷದ ಪ್ರದೀಪ್ ಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಸಮೀಪದ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಆದಾಗ್ಯ ಶೀಘ್ರ ಗುಣಮುಖ ಕಾಣದೆಂದು, ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲು ತೆರಳುತ್ತಿರುವ ಮಾರ್ಗ ಮಧ್ಯ ಪ್ರದೀಪ ಸಾವನಪ್ಪಿದ್ದಾನೆ ಎನ್ನಲಾಗಿದೆ.
ಮಗು ಮೃತ ಪಟ್ಟಿದೆ ಎಂಬ ಸುದ್ದಿ ಸಿಡಿಲು ಬಡಿದಂತಾದ ಅಜ್ಜಿ ಶಾಂತಮ್ಮ ಹಾಗೂ ಚಿಕ್ಕಮ್ಮ ಭಾಗ್ಯಮ್ಮಳಿಗೆ ರಕ್ತದೊತ್ತಡ ಹೆಚ್ಚಾಗಿ ತಾಯಿ ಮಗಳು ಸಾವನ್ನಪ್ಪಿಸ್ದಾರೆ.
ಒಟ್ಟಿನಲ್ಲಿ ಒಂದೇ ಮನೆಯ ಮೂವರು ದಾರುಣ ಸಾವನಪ್ಪಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.