ಇನ್ನುಮುಂದೆ ವಿದ್ಯುತ್ ಸಂಪರ್ಕಕ್ಕೆ ಹಣ ಕಟ್ಟಬೇಕಿಲ್ಲ!
*ನವದೆಹಲಿಯಲ್ಲಿ ಪ್ರಧಾನಿ ಮೋದಿ ಮಾತು*
ನವದೆಹಲಿ: ಈ ಮೊದಲು 18 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. ಈಗಾಗಲೇ 15 ಸಾವಿರ ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿದೆ. 3ಸಾವಿರ ಗ್ರಾಮಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಬೇಕಿದೆ. ಇನ್ನೂ 4 ಕೋಟಿ ಮನೆಗಳಲ್ಲಿ ವಿದ್ಯುತ್ ಇಲ್ಲ. ಇನ್ನು ಮುಂದೆ ವಿದ್ಯುತ್ ಸಂಪರ್ಕ ನೀಡಲು ಯಾವುದೇ ಹಣ ಪಡೆಯಲ್ಲ. ಅಲ್ಲದೆ ಅಧಿಕಾರಿಗಳೇ ಮನೆಮನೆಗಳಿಗೆ ತೆರಳಿ ವಿದ್ಯುತ್ ಸಂಪರ್ಕ ನೀಡಲಿದ್ದಾರೆ. ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸೌಭಾಗ್ಯ ಯೋಜನೆಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮಾತನಾಡಿದರು. ವಿದ್ಯುತ್ ಪೂರೈಕೆಗಾಗಿ 16 ಸಾವಿರ ಕೋಟಿ ವ್ಯಯಿಸುತ್ತಿದ್ದೇವೆ. ದೇಶದಲ್ಲಿ ವಿದ್ಯುತ್ ಉತ್ಪಾದನೆ ಕೊರತೆ ಇಲ್ಲ. ಬೇಡಿಕೆಗಿಂತ ಹೆಚ್ಚಿನ ವಿದ್ಯತ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ 3 ವರ್ಷದಲ್ಲಿ 93 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲಾಗಿದೆ. 3 ವರ್ಷದಲ್ಲಿ 5 ಪಟ್ಟು ಕಲ್ಲಿದ್ದಲು ಉತ್ಪಾದನೆ ಆಗಿದೆ. ಸೌರ ವಿದ್ಯುತ್ ಉತ್ಪಾದನೆಯಲ್ಲೂಐ ದು ಪಟ್ಟು ಹೆಚ್ಚಳವಾಗಿದೆ. ಪ್ರತಿ ವರ್ಷ ಶೇಕಡಾ 12 ರಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ. ಪಾರದರ್ಶಕವಾಗಿ ಕಲ್ಲಿದ್ದಲು ಗಣಿ ಹರಾಜು ಮಾಡಿದ್ದೇವೆ. ಹೊಸ ಕಲ್ಲಿದ್ದಲು ನೀತಿಯಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ ಎಂದು ಮೋದಿ ಹೇಳಿದರು.
ಒಂದು ದೇಶ, ಒಂದು ಪವರ್ ಗ್ರಿಡ್, ಒಂದು ಬೆಲೆ ತಂದಿದ್ದೇವೆ. ಈ ಎಲ್ಲಾ ಯೋಜನೆಗಳು ಬಡವರಿಗಾಗಿಯೇ ಜಾರಿ ಮಾಡಲಾಗಿದೆ ಎಂದ ಅವರು ನಾನು ದೀಪದಬುಡ್ಡಿಯ ಬೆಳಕಿನಲ್ಲಿ ಓದುತ್ತಿದ್ದೆ . ದೀಪದ ಬುಡ್ಡಿಯ ಬೆಳಕಿನಲ್ಲಿ ಓದಿದರೆ ಕಣ್ಣಿನ ದೃಷ್ಟಿ ಹಾಳಾಗುತ್ತದೆ ಅನ್ನುತ್ತಿದ್ದರು ಎಂದು ಪ್ರಧಾನಿ ಮೋದಿ ತಮ್ಮ ವಿದ್ಯಾರ್ಥಿ ಜೀವನ ನೆನಪಿಸಿಕೊಂಡರು.