ಸಂಕಟ ಸ್ಥಿತಿಯಲ್ಲಿ ಬಿಜೆಪಿ ಹಣ ಲೂಟಿ ಮಾಡುತ್ತಿದೆ ಖರ್ಗೆ ಗಂಭೀರ ಆರೋಪ
ಸಂಕಟ ಸ್ಥಿತಿಯಲ್ಲಿ ಬಿಜೆಪಿ ಹಣ ಲೂಟಿ ಮಾಡುತ್ತಿದೆ ಖರ್ಗೆ ಗಂಭೀರ ಆರೋಪ
ಕಲಬುರ್ಗಿಃ ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲದೆ ಇಲ್ಲಿನ ಇಎಸ್ಐ ಆಸ್ಪತ್ರೆಯ ಡ್ಯೂಟಿ ಡಾಕ್ಟರ್ ರೂಂಗಳಲ್ಲಿ ಹೆಗ್ಗಣಗಳು ಓಡಾಡುತ್ತಿವೆ ಎಂದು ಮಾಜಿ ಸಚಿವ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಇಎಸ್ಐ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಇಂತಹ ಸಂಕಟ ಸಂದರ್ಭದಲ್ಲೂ ಬಿಜೆಪಿ ಹಣ ಲೂಟಿ ಮಾಡುವ ಹುನ್ನಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು.
ಅಲ್ಲದೆ ಕಲಬುರ್ಗಿಯಲ್ಲಿರುವ ಕೊರೊನಾ ಟೆಸ್ಟಿಂಗ್ ಲ್ಯಾಬ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊರೊನಾ ಲ್ಯಾಬ್ ಸ್ಥಾಪಿಸುವ ಮೂಲಕ ಅನುಕೂಲ ಕಲ್ಪಿಸಿದ್ದೇವೆ ಎಂಬುದು ಬರಿ ಹೇಳಿಕೆಗೆ ಮಾತ್ರ ಸೀಮಿತ ಎಂದ ಅವರು, ಕೇರಳ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗರು ಪ್ರಶ್ನೆ ಮಾಡಬಹುದಂತೆ, ನಾವು ಇಲ್ಲಿ ಪ್ರಶ್ನೆ ಮಾಡಿದರೆ ರಾಜಕೀಯ ಎನ್ನುವ ಬಿಜೆಪಿಗೆ ಎರಡು ನಾಲಿಗೆ ಇದ್ದಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.