ಪ್ರಮುಖ ಸುದ್ದಿಸಂಸ್ಕೃತಿ
ಆನೇಗೊಂದಿಗೆ ಪೇಜಾವರಶ್ರೀ ಭೇಟಿ : ನವ ವೃಂದಾವನ ಪುನರ್ ನಿರ್ಮಾಣ ಕಾರ್ಯ ಆರಂಭ
ಕೊಪ್ಪಳ : ನಿಧಿ ಶೋಧನೆಗಾಗಿ ದುಷ್ಕರ್ಮಿಗಳು ಗಂಗಾವತಿ ತಾಲೂಕಿನ ಆನೇಗೊಂದಿಯ
ವ್ಯಾಸರಾಯರ ವೃಂದಾವನ ಧ್ವಂಸ ಹಿನ್ನಲೆಯಲ್ಲಿ ಪೇಜಾವರಶ್ರೀಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಕೃತ್ಯದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣದ ಬಗ್ಗೆ ತೀರ್ಮಾನಿಸಲಾಗಿದೆ.
ಶ್ರೀಗಳ ಭೇಟಿ ಬಳಿಕ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗಿದ್ದು ಬೆಳಿಗ್ಗೆಯಿಂದಲೇ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣದ ಕಾಮಗಾರಿ ಶುರುವಾಗಿದೆ.
ಸೋಸಲೆಯ ವ್ಯಾವರಾಜ ಮಠದ ಶ್ರೀ ವಿದ್ಯಾಮನೋಹರ ತೀರ್ಥರ ನೇತೃತ್ವದಲ್ಲಿ ನವ ವೃಂದಾವನ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.