ಪ್ರಮುಖ ಸುದ್ದಿ
ಸಿಟಿ ರವಿ ಮನೆಗೆ ಕಟೀಲ್ ಭೇಟಿ ಕುತೂಹಲ ಮೂಡಿಸಿದ ಭೇಟಿ
ಸಿಟಿ ರವಿ ಮನೆಗೆ ಕಟೀಲ್ ಭೇಟಿ ಕುತೂಹಲ ಮೂಡಿಸಿದ ಭೇಟಿ
ಚಿಕ್ಕಮಗಳೂರಃ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಾಕಷ್ಟು ಕೂಗು ಕೇಳಿ ಬರುತ್ತಿರುವ ಹಿನ್ನೆಲೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮನೆಗೆ ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ್ ಭೇಟಿ ನೀಡಿರುವದು ಕುತೂಹಲ ಕೆರಳಿಸಿದೆ.
ಜಿಲ್ಲೆಯ ಬಸವನಹಳ್ಳಿ ಗ್ರಾಮದ ಸಿ.ಟಿ.ರವಿ ಅವರ ಮನೆಯಲ್ಲಿ ರವಿ ಅವರೊಂದಿಗೆ ಸಿಎಂ ಬದಲಾವಣೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಈಗಾಗಲೇ ರಾಜ್ಯಧ್ಯಕ್ಷ ಕಟೀಲು ಅವರು ಬಂದು ಅರ್ಧ ತಾಸು ಕಳೆದಿದ್ದು, ಯಾವುದೇ ಹೇಳಿಕೆ ಹೊರ ಬಂದಿಲ್ಲ. ಬಹುತೇಕ ಸಿಎಂ ಬದಲಾವಣೆಗೆ ಸಂಬಂಧಿದಂತೆ ಚರ್ಚೆ ನಡೆದಿದೆ ಎನ್ನಲಾಗಿದೆ. ಹೈಕಮಾಂಡ್ ಏನಾದರೂ ರವಿ ಅವರಿಗೆ ಫಿಲ್ಡಿಗಿಳಿಯಲು ಸೂಚನೆ ನೀಡಿದ್ದಾರಾ.? ಈ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.