ಪ್ರಮುಖ ಸುದ್ದಿ
ಸಿಡಿಲಾಘತಕ್ಕೆ ಬಲಿಯಾದ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಿಯಾಂಕ್
ತಲಾ 5 ಲಕ್ಷ ಪರಿಹಾರ ಚಕ್ ವಿತರಣೆ
ಕಲಬುರ್ಗಿಃ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದ ಮಂಗಲಗಿ ಗ್ರಾಮದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ ಮೂವರ ಕುಟುಂಬದ ಸದಸ್ಯರಿಗೆ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಭೇಟಿ ಮಾಡಿ ಸಾಂತ್ವಾನ ಹೇಳಿದರು.
ಇದೇ ಸಂದರ್ಭದಲ್ಲಿ ಮೃತರ ಕುಟುಂಬ ವರ್ಗದವರಿಗೆ ತಲಾ ರೂ 5 ಲಕ್ಷ ಪರಿಹಾರದ ಚೆಕ್ ಗಳನ್ನು ವಿತರಿಸಿದರು.
ಮೃತರ ಕುಟುಂಬ ವರ್ಗದವರಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡುವಂತೆ ಸ್ಥಳದಲ್ಲಿ ಇದ್ದ ಚಿತ್ತಾಪುರ ತಹಸೀಲ್ದಾರ ಅವರಿಗೆ ಸನ್ಮಾನ್ಯ ಸಚಿವರು ಸೂಚಿಸಿದರು.
ಶಫಿಕಾ ಬೇಗಂ, ಅಲ್ಫಿಯಾ ಬೇಗಂ ಹಾಗೂ ಅಬೇದಾಬಿ ಈ ಮೂವರು ಇತ್ತೀಚಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರು.