ಕಾವ್ಯ

ತೆರೆದಿದೆ ಮನದ ಕದ ಕನ್ನಡ ಗಜಲ್ 

ಸಂಶಯದಲ್ಲೂ ಉಂಟು ಪ್ರೀತಿ

ಇಬ್ಬನಿ ಬಿಂದು ಹೊಳೆದಾಗ ಶೃಂಗಾರ ಎಳೆ ಬಿಸಿಲೆ ಬೆಳ್ಳಿಯ ಮದ ಅವಳೆಂದರೆ ಹಾಗೆ/
ಕರಗುಬಲ್ಲಳು ಹಬ್ಬುಬಲ್ಲಳು ನರನಾಡಿಯ ಕಣ ಕಣದಲ್ಲಿ ಮುದ ಅವಳೆಂದರೆ ಹಾಗೆ//

ಎಷ್ಟೆಂದು ಹೇಳಲಿ ಅಷ್ಟಿಷ್ಟಲ್ಲ ನೋಡಿದ ಕೂಡಲೇ ಇಷ್ಟವಾದಳು ತುಂಬಾ ತುಂಬಾ/
ಆಗಿನಿಂದ ಪ್ರಯತ್ನ ಅರ್ಥವಾಗಲೊಲ್ಲಳು ತೆರೆದಿದೆ ಮನದ ಕದ ಅವಳೆಂದರೆ ಹಾಗೆ//

ಸುಳ್ಳೇ ನಮ್ಮನೆ ದೇವರು ಎಂದರೂ ಒಮ್ಮೆ ಎನಿಸುವಳು ಸತ್ಯ ಹರೀಶ್ಚಂದ್ರನ ತುಂಡು/
ಬುದ್ಧಿವಂತನನ್ನು ಮೂರ್ಖನನ್ನಾಗಿಸುವ ಜಾಣೆ ಬೆರಗು ವಾದ ಅವಳೆಂದರೆ ಹಾಗೆ//

ಪಟ್ಟರೂ ಸ್ವಲ್ಪ ಸಂಶಯ ಅಲ್ಲಿಯೂ ಉಂಟು ಪ್ರೀತಿಯ ಹಿತದ ಕೆಲವು ಹಿಡಿತ/
ಎಲ್ಲರ ಹಾಗಲ್ಲ ಬಗೆ ಬಗೆಯ ಹೂಗಳ ಒಂದೇ ಗುಚ್ಛದ ಅಂದ ಅವಳೆಂದರೆ ಹಾಗೆ//

ಜಾಸ್ತಿ ಮಾತು ಮತ್ತಷ್ಟು ಮೌನ ಒಮ್ಮೆ ಪುಕ್ಕಲು ಮತ್ತೆ ನಿಬ್ಬೆರಗಾಗುವ ಧೈರ್ಯ/
ಅಡಗಿದೆ ಏನೆಲ್ಲಾ ಒಬ್ಬಳಲ್ಲಿಯೇ ಎಲ್ಲವೂ ಚೆಂದ ಪದಗಳ ನಾದ ಅವಳೆಂದರೆ ಹಾಗೆ//

ಬಸವರಾಜ ಕಾಸೆ

Related Articles

Leave a Reply

Your email address will not be published. Required fields are marked *

Back to top button