ಗಣರಾಜ್ಯೋತ್ಸವಃ ಡಾ.ಅಂಬೇಡ್ಕರ್ ಫೋಟೊ ತೆಗೆಸಿದ ಆರೋಪ ಶಿಸ್ತುಕ್ರಮ ಆಗ್ರಹ
ಗಣರಾಜ್ಯೋತ್ಸವಃ ಡಾ.ಅಂಬೇಡ್ಕರ್ ಫೋಟೊ ತೆಗೆಸಿದ ಆರೋಪ ಶಿಸ್ತುಕ್ರಮ ಆಗ್ರಹ
ಗಂಗಾವತಿಃ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಲು ಕಾರಣರಾದ ನ್ಯಾಯಧೀಶರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಹೈಕೊರ್ಟ್ ಶಿಸ್ತುಕ್ರಮ ಕೈಗೊಳ್ಳಬೇಕೆಂದು ದಲಿತಪರ ಸಂಘಟನೆಗಳ ಒಕ್ಕೂಟ ಮತ್ತು ಸಿಪಿಐಎಂಎಲ್ ಪ್ರಗತಿಪರ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಧೀಶರಿಗೆ ವಿಪಕ್ಷ ನಾಯಕರಿಗೆ ಮನವಿ ಸಲ್ಲಿಸಿದರು.
ಹಿರಿಯ ದಲಿತ ಮುಖಂಡ ಕುಂಟೋಜಿ ಮರಿಯಪ್ಪ, ನ್ಯಾಯವಾದಿ ಹುಸೇನಪ್ಪ ಹಂಚನಾಳ ಮಾತನಾಡಿ, ಡಾ.ಅಂಬೇಡ್ಕರ್ ಬರೆದ ಸಂವಿಧಾನ ಓದಿ ನ್ಯಾಯಾಧೀಶರಾದವರು, ಅಂಬೇಡ್ಕರ್ ಫೋಟೊ ಇದ್ದರೆ ನಾನು ಧ್ವಜಾರೋಹಣ ಮಾಡುವುದಿಲ್ಲ ಎಂದು ಸಾರ್ವಜನಿಕ ವಾಗಿ ಮಾತನಾಡಿರುವದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವೀರೊಧಿಯಾಗಿದೆ.
ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರ ವಿಟ್ಟು ಪೂಜೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವಿಷಯ ಗೊತ್ತಿದ್ದರೂ ಓರ್ವ ನ್ಯಾಯಧೀಶರಾಗಿ ಅವಮಾನ ಮಾಡಿರುವದು ಶೋಭೆ ತರುವಂತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಇಂತಹವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿ ಎಂದು ಮನವಿ ಮಾಡಿದರು.
ಪ್ರತಿಭಟನೆ ವೇಳೆ ವಿವಿಧ ಸಂಘಟನೆಯ ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು.