ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ನೇಮಕ, ಈ ನೇಮಕದಿಂದ ಸಚಿವ ಸ್ಥಾನಕ್ಕಿದೆಯೇ ಕಂಟಕ.?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ನೇಮಕ, ಈ ನೇಮಕದಿಂದ ಸಚಿವ ಸ್ಥಾನಕ್ಕಿದೆಯೇ ಕಂಟಕ.?
ಬೆಂಗಳೂರಃ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನಾ ಚತುರ, ಸಚಿವ ಸಿಟಿ ರವಿ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಸಿಟಿ ರವಿ ಅವರು, ರಾಜ್ಯವಲ್ಲದೆ ರಾಷ್ಟ್ರೀಯ ರಾಜಕೀಯಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ.
ಆದರೆ ಬಿಜೆಪಿ ಪಕ್ಷದ ಸೂತ್ರದಂತೆ ಒಬ್ಬರಿಗೆ ಒಂದೇ ಹುದ್ದೆ ನಿಯಮದಂತೆ ಸಿಟಿ ರವಿ ಅವರು ರಾಜ್ಯ ಪ್ರವಾಸೋದ್ಯಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವದು ಅನಿವಾರ್ಯವಾದರೂ ಅಚ್ವರಿ ಪಡುವಂತಿಲ್ಲ.
ಹೀಗಾಗಿ ಸಿಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಿಸಿರುವ ಹಿಂದಿನ ಲೆಕ್ಕಾಚಾರವೇನು.? ಎಂಬುದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ನೇಮಕ
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ರಾಜ್ಯದ ಯುವ ಬೆಂಕಿ ಚಂಡು ಸಂಸದ ತೇಜಸ್ವಿ ಸೂರ್ಯ ನೇಮಕಗೊಂಡಿದ್ದು, ಬಿಜೆಪಿ ಪಕ್ಷದ ಜವಬ್ದಾರಿಯಲ್ಲಿ ರಾಜ್ಯದ ಪ್ರಮುಖ ಸಂಘಟನಾ ಚತುರರು ಪಾಲು ಪಡೆದಿರುವದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ.