ಪ್ರಮುಖ ಸುದ್ದಿ
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನೆಗೆ ಕನ್ನ ಹಾಕಿದ ಖದೀಮರು!
ವಿಜಯಪುರ: ನಗರದ ಗ್ಯಾಂಗ್ ಬಾವಡಿ ಬಡಾವಣೆಯಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪುಷ್ಪಾ ಅಂಬಿಗೇರ್ ಅವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಯಾರೂ ಇಲ್ಲದ ಸಮಯದಲ್ಲಿ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ 10ಗ್ರಾಂ ಚಿನ್ನ, 12 ಸಾವಿರ ರೂಪಾಯಿ ನಗದು ಹಾಗೂ 40ಸಾವಿರ ಮೌಲ್ಯದ ಎಲ್ ಇಡಿ ಕದ್ದು ಪರಾರಿಯಾಗಿದ್ದಾರೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನೆಗ ಕಳ್ಳರು ಕನ್ನ ಹಾಕಿದು ಜನರಲ್ಲಿ ಆತಂಕ ಮೂಡಿಸಿದೆ. ಅಂತೆಯೇ ಪೊಲೀಸ್ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜನ ಮಾತನಾಡಿಕೊಳ್ಳಂತಾಗಿದೆ. ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.