ಮುಡಬೂಳ ಚಕ್ ಪೋಸ್ಟ್ಗೆ SP ಭೇಟಿ ಪರಿಶೀಲನೆ, ಕಠಿಣ ಕ್ರಮಕ್ಕೆ ಸೂಚನೆ
ಮುಡಬೂಳ ಚಕ್ ಪೋಸ್ಟ್ಗೆ SP ಭೇಟಿ ಪರಿಶೀಲನೆ, ಕಠಿಣ ಕ್ರಮಕ್ಕೆ ಸೂಚನೆ
ಶಹಾಪುರಃ ಲಾಕ್ ಡೌನ್ ಮೇ.3 ರವರೆಗೆ ಮುಂದುವರೆದ ಹಿನ್ನೆಲೆ ಇಂದು ತಾಲೂಕಿನ ಮುಡಬೂಳ ಕ್ರಾಸ್ ಹತ್ತಿರ ಸ್ಥಾಪಿಸಲಾದ ಚಕ್ ಪೋಸ್ಟ್ ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೆ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಇಂದು ಲಾಕ್ ಡೌನ್ ಮೇ.3 ರವರೆಗೂ ಕೇಂದ್ರ ಸರ್ಕಾರ ಮುಂದುವರೆಸಿದೆ, ಬೆನ್ನಲ್ಲೆ ರಾಜ್ಯದ ಮುಖ್ಯಮಂತ್ರಿಗಳು ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ಈ ಚಕ್ ಪೋಸ್ಟ್ ಅತಿಮುಖ್ಯವಾಗಿ ಪರಿಗಣಿಸಿದ್ದು, ವಾಹನ ತಪಾಸಣೆಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳದಲ್ಲಿಯೇ ಹಾಜರಿದ್ದ ಭೀಮರಾಯನ ಗುಡಿ ಪಿಎಸ್ಐ ರಾಜಕುಮಾರ ಅವರಿಗೆ ಸೂಚನೆ ನೀಡಿದರು.
ಅನಾವಶ್ಯಕ ವಾಹನಗಳನ್ನು ಒಳಗಡೆ ಬಿಡಬಾರದು ಈ ಕಠಿಣ ಕ್ರಮ ಅಗತ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ತಡೆಗೆ ಬ್ರೇಕ್ ಹಾಕಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಿಎಸ್ಐ ರಾಜಕುಮಾರ, ಪೊಲೀಸ್ ಸಿಬ್ಬಂದಿ ಇತರರಿದ್ದರು.