ಪ್ರಮುಖ ಸುದ್ದಿ
ಕರ್ತವ್ಯ ಲೋಪ : ಓರ್ವ ಪಿಎಸ್ಐ ಮತ್ತು ಇಬ್ಬರು ಪೇದೆಗಳು ಅಮಾನತ್ತು!
ಯಾದಗಿರಿ: ಅಕ್ರಮ ಸಂಭಂಧ ಹೊಂದಿರುವ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿ ಹತ್ಯೆ ಮಾಡಿದ ಅಮಾನವೀಯ ಕೃತ್ಯ ನಡೆದಿತ್ತು. ನವೆಂಬರ್ 24ರಂದು ಇಸಾಕ್ ನನ್ನು ಯೇಸು ಮಿತ್ರ ಮತ್ತಿತರರು ಸೇರಿ ಹತ್ಯೆ ಮಾಡಿದ್ದರು. ಈ ಬಗ್ಗೆ ಗುರುಮಿಠ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಯೇಸು ಮಿತ್ರನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಈ ಅಮಾನುಷ ಕೃತ್ಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿರುವ ಆರೋಪದ ಮೇಲೆ ಗುರುಮಿಠ್ಕಲ್ ಠಾಣೆಯ ಪಿಎಸ್ಐ ಗುಂಡುರಾವ್ ಹಾಗೂ ಪೇದೆಗಳಾದ ದಾವಲ್ ಸಾಬ್, ಭೀಮಾಶಂಕರ್ ಅವರನ್ನು ಅಮಾನತ್ತುಗೊಳಿಸಲಾಗಿದೆ. ಯಾದಗಿರಿ ಎಸ್ಪಿ ಯಡಾ ಮಾರ್ಟಿನ್ ಅವರು ಪಿಎಸ್ಐ ಹಾಗೂ ಇಬ್ಬರು ಪೇದೆಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.