ಕೋಟೆನಾಡಿನಲ್ಲಿ ವಿಕೃತ ಕಾಮಿಯ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ಪೊಲೀಸರು!
ಚಿತ್ರದುರ್ಗ : ಜಿಲ್ಲೆಯ ಹೊಸದುರ್ಗ ಪಟ್ಟಣದ ಮಹಿಳೆಯರ ನೆಮ್ಮದಿ ಕೆಡಿಸಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಿವಾನಿ ಗ್ರಾಮದ ಕಲ್ಲೇಶ್ (27) ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕತ್ತಲಾದ ಬಳಿಕ ಕಲ್ಲೇಶ್ ಬೆತ್ತಲಾಗಿ ಹೊಸದುರ್ಗ ಪಟ್ಟಣದ ಮನೆಗಳ ಬಳಿ, ಹಾಸ್ಟಲ್ ಗಳಿಗೆ ನುಗ್ಗುತ್ತಿದ್ದನಂತೆ. ಕಿಟಕಿ ಮೂಲಕ ಮಹಿಳೆಯರ ಒಳ ಉಡುಪು ಕದ್ದು ಎಸ್ಕೇಪ್ ಆಗುತ್ತಿದ್ದನಂತೆ. ಕೆಲ ಸಂದರ್ಭದಲ್ಲಿ ವಿಕಾರ ದರ್ಶನ ಮಾಡಿ ಯುವತಿಯರನ್ನು ಗಾಬರಿಗೊಳಿಸಿ ಎಸ್ಕೇಪ್ ಆಗಿದ್ದಾನೆ.
ಹಾಸ್ಟಲ್ ವಾರ್ಡನ್ ಅವರ ದೂರಿನ ಮೇರೆಗೆ ಹೊಸದುರ್ಗ ಠಾಣೆಯ ಪೊಲೀಸರು ತನಿಖೆ ನಡೆಸಿದಾಗ ಕಲ್ಲೇಶನ ಆಟಾಟೋಪ ಬಯಲಾಗಿದೆ. ಹಾಸ್ಟಲ್ ನ ಸಿಸಿ ಕ್ಯಾಮರಾದಲ್ಲಿ ಕಲ್ಲೇಶನ ವಿಕೃತಿ ಸೆರೆ ಆಗಿದೆ. ಹೀಗಾಗಿ, ಆರೋಪಿಯ ಬೆನ್ನುಬಿದ್ದ ಪೊಲೀಸರು ಹಾಸ್ಟೆಲ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಕಲ್ಲೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕಲ್ಲೇಶ ವಿಕೃತಿ ಕಾಮಿ ಅಲ್ಲದೆ ಕೆಲವ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ. ಸದ್ಯ ಹೊಸದುರ್ಗದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.