ಪ್ರಮುಖ ಸುದ್ದಿ
ಯುವತಿ ಮೇಲೆ ಪಟಾಕಿ ಎಸೆತ-ಪುಂಡರಿಬ್ಬರ ದುಷ್ಕೃತ್ಯ
ಬೆಂಗಳೂರಃ ಇಲ್ಲಿನ ನೆಲಮಂಗಲ ಬಡಾವಣೆಯಲ್ಲಿ ರಸ್ತೆ ಮೇಲೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹೊರಟಿದ್ದ ಯುವತಿಯೋರ್ವಳ ಮೇಲೆ ಪುಂಡರಿಬ್ಬರು ಏಕಾಏಕಿ ಪಟಾಕಿ ಎಸೆದ ಪರಿಣಾಮ ಗಾಬರಿಗೊಂಡ ಯುವತಿ ಓಡಿದ್ದಾಳೆ ಹೋದ ಘಟನೆ ನಡೆದಿದೆ.
ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಯುವತಿ ಕಾಲಬುಡಕ್ಕೆ ಪಟಾಕಿಗೆ ಬೆಂಕಿ ಹಚ್ಚಿ ಎಸೆದಿದ್ದು, ಪಟಾಕಿ ಕಾಲಲ್ಲಿ ಬಿದ್ದು ಸಿಡಿಯುತ್ತಿದ್ದಂತೆ ಯುವತಿ ಗಾಬರಿಗೊಂಡು ಮುಂದ ಓಡಿದ್ದಾಳೆ. ಯುವತಿಯೋರ್ವಳನ್ನು ಈ ರೀತಿ ಚುಡಾಯಿಸಿ ಪುಂಡರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಪಟಾಕಿ ಎಸೆಯುವದರಲ್ಲಿ ಅನಾಹುತ ಸಂಭವಿಸಿ, ಯುವತಿಯ ಕಾಲಿಗೆ ಮೈಗೆ ಬೆಂಕಿಹಹೊತ್ತಕೊಂಡಿದ್ದರೆ ಯಾರು ಜವಬ್ದಾರರು.? ಹೀಗಾಗಿ ಈ ಘಟನೆ ಈಗಾಗಲೇ ವಿಡಿಯೋ ರಿಕಾರ್ಡ್ ಆಗಿದ್ದು, ಪುಂಡರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನೆಲ ಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣದಾಖಲಾಗಿದೆ. ಪುಂಡರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ತಿಳಿದು ಬಂದಿದೆ.