Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಆರೋಗ್ಯ ಸಮಸ್ಯೆಗಳಿಗೆ ಅಲೋವೆರಾ ಪ್ರಯೋಜನ ಕೇಳಿದ್ರೆ ದಂಗಾಗ್ತೀರಾ!

ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ. ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು. ಹೀಗಾಗಿ ಅಲೋವೆರಾವು ತುಂಬಾ ಪರಿಣಮಕಾರಿ ಆಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆ ಮಾಡಲಾಗುತ್ತಾ ಇದೆ. ನೇರವಾಗಿ ಅಲೋವೆರಾ ಲೋಳೆಯನ್ನು ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುವುದು. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು.

ಬೇಸಗೆ ಕಾಲದಲ್ಲಿ ನೀವು ಮುಖಕ್ಕೆ ತುಂಬಾ ಜಿಡ್ಡಿನ ಕ್ರೀಮ್ ಬಳಸಿಕೊಂಡರೆ ಅದರಿಂದ ತುಂಬಾ ಸಮಸ್ಯೆ ಆಗಬಹುದು. ಯಾಕೆಂದರೆ ಉಷ್ಣತೆ ಹೆಚ್ಚಿರುವುದು ಮತ್ತು ಬೆವರುವುದು. ಹೀಗಾಗಿ ಮುಖಕ್ಕೆ ಈ ಸಮಯದಲ್ಲಿ ನೀವು ಜಿಡ್ಡಿನ ಕ್ರೀಮ್ ಬಳಸಬೇಡಿ. ರಾತ್ರಿ ಮಲಗಲು ಹೋಗುವ ಮೊದಲು ನೀವು ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಇದು ಚರ್ಮದಲ್ಲಿ ನಿಧಾನವಾಗಿ ಹೀರಿಕೊಳ್ಳುವುದು ಮತ್ತು ಚರ್ಮಕ್ಕೆ ಬೇಕಾಗುವಂತಹ ಮೊಶ್ಚಿರೈಸ್ ನ್ನು ಇದು ಒದಗಿಸುವುದು. ಈ ಲೋಳೆಯು ಚರ್ಮವನ್ನು ತುಂಬಾ ತಂಪಾಗಿಡಲು ನೆರವಾಗುವುದು. ಬಿಸಿಲಿಗೆ ಹೊರಗಡೆ ಹೋದರೆ ಆಗ ಚರ್ಮವು ಸುಡುವುದು ಖಚಿತ. ಹೀಗಾಗಿ ಬೇಸಗೆ ಕಾಲದಲ್ಲಿ ಹೊರಗಡೆ ಹೋದರೆ ಆಗ ಬಿಸಿಲಿನಿಂದಾಗಿ ಮುಖದ ಮೇಲೆ ಕಲೆಗಳು ಮೂಡಬಹುದು. ಇದರಿಂದ ಚರ್ಮವು ಕೆಂಪಾಗುವುದು, ಸುಡುವುದು ಮತ್ತು ಎದ್ದು ಬರಲು ಆರಂಭಿಸುವುದು. ಇದನ್ನು ತಡೆಯಲು ಅಲೋವೆರಾ ಹಚ್ಚಿಕೊಳ್ಳಬೇಕು. ಬಿಸಿಲಿನಿಂದ ಮನೆಗೆ ಬಂದ ಬಳಿಕ ನೀವು ಸಂಪೂರ್ಣ ಮೈಗೆ ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಇದು ನಿಮಗೆ ಶಮನ ನೀಡುವುದು.

ಇದರಿಂದ ಚರ್ಮಕ್ಕೆ ತಂಪು ಸಿಗುವುದು ಮತ್ತು ಕಲೆಗಳು ಮಾಯವಾಗುವುದು. ಅಲೋವೆರಾ ಚರ್ಮದಲ್ಲಿನ ತಾಪಮಾನ ಕಡಿಮೆ ಮಾಡಿ ತಂಪು ಉಂಟು ಮಾಡುವುದು. ಬೇಸಿಗೆ ಸಮಯದಲ್ಲಿ ಹೆಚ್ಚಿನ ಜನರಲ್ಲಿ ಮೊಡವೆ ಹಾಗೂ ಬೊಕ್ಕೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಯಾಕೆಂದರೆ ಗಾಳಿಯಲ್ಲಿ ಹೆಚ್ಚಿನ ಪ್ರಮಾಣ ಮೊಶ್ಚಿರೈಸರ್ ಇರುವ ಕಾರಣದಿಂದಾಗಿ ಹೀಗೆ ಆಗುವುದು ಇದೆ. ಮೊಡವೆಗಳು ಕೆಲವೊಂದು ಸಂದರ್ಭದಲ್ಲಿ ತುಂಬಾ ನೋವುಂಟು ಮಾಡುವುದು. ಇದರಿಂದ ಅಲೋವೆರಾವನ್ನು ಹಚ್ಚಿಕೊಂಡರೆ ಆಗ ಮೊಡವೆಗಳಿಂದ ಆಗುವಂತಹ ನೋವು ಹಾಗೂ ಕಿರಿಕಿರಿಗೆ ಪರಿಹಾರ ಒದಗಿಸುವುದು. ಇದು ಚರ್ಮಕ್ಕೆ ಶಮನ ನೀಡುವ ಕಾರಣದಿಂದಾಗಿ ಮೊಡವೆಗಳ ಗಾತ್ರವು ಕುಗ್ಗುವುದು. ಮೊಡವೆಗಳಿಂದಾಗಿ ನೋವು ಕಾಣಿಸಿಕೊಂಡರೆ ಆಗ ನೀವು ಈ ವಿಧಾನ ಅಳವಡಿಸಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button