ಕ್ಯಾಂಪಸ್ ಕಲರವ
ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟೂ ಏರ್ ಮಿಸೈಲ್ ಪರೀಕ್ಷೆ ಯಶಸ್ವಿ!
ದೆಹಲಿ: ಭಾರತೀಯ ಸೇನೆಗಾಗಿ ಡಿಆರ್ಡಿಓ( ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್(QRSAM) ಇಂದು ಪರೀಕ್ಷಾರ್ಥ ಪ್ರಯೋಗ ನಡೆದಿದ್ದು ಯಶಸ್ವಿಯಾಗಿದೆ. ಬೆಳಗ್ಗೆ 11 ಗಂಟೆಗೆ ಒಡಿಶಾದಲ್ಲಿ ಪರೀಕ್ಷೆ ಮಾಡಲಾಗಿದ್ದು ಯಾವುದೇ ಹವಾಮಾನ ಹಾಗೂ ಎಲ್ಲಾ ಭೂ ಪ್ರದೇಶಗಳಲ್ಲಿ ಬಳಸಬಲ್ಲ ಕ್ಷಿಪಣಿ ಇದಾಗಿದೆ. ಟ್ರಕ್ನಲ್ಲಿ ಹೊತ್ತುಕೊಂಡು ಹೋಗಬಹುದಾಗಿದ್ದು ರಡಾರ್ಗಳಿಂದ ಜಾಮ್ ಆಗದಂತೆ ತಡೆಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ. ಇದು 25 ರಿಂದ 30 ಕಿ.ಮೀ ದೂರದ ಗುರಿಯನ್ನು ತಲುಪ ಬಲ್ಲದಾಗಿದೆ ಎಂದು ತಿಳಿದುಬಂದಿದೆ.