ಮನೆ ಬಾಡಿಗೆದಾರರಿಗೆ ತೊಂದರೆ ಕೊಟ್ಟರೆ ಕ್ರಮ – ಆರ್.ಅಶೋಕ
ಮನೆ ಬಾಡಿಗೆದಾರರಿಗೆ ತೊಂದರೆ ಕೊಟ್ಟರೆ ಕ್ರಮ – ಆರ್.ಅಶೋಕ
ಬೆಂಗಳೂರಃ ಕೊರೊನಾ ವೈರಸ್ ಹಾವಳಿಯಿಂದ ದೇಶ ತಲ್ಲಣಗೊಂಡಿದೆ. ವೈರಸ್ ಹರಡುವಿಕೆಯನ್ನು ತಡೆಯಲು 21 ದಿನ ರಾಜ್ಯ ಲಾಕ್ ಡೌನ್ ಮಾಡಲಾಗಿದೆ. ಇಂತಹ ಸಂದರ್ಭ ಮಧ್ಯಮರ ಆರ್ಥಿಕ ಸ್ಥಿತಿ ಗಂಭೀರವಿದೆ. ಬಡವರದು ತೀರ ಗಂಭೀರ ಅದಕ್ಕೆ ಬೇಕಾದ ಸೌಕರ್ಯ ಸರ್ಕಾರ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಸಚಿವರ ಫೋನ್ ಇನ್ ಕಾರ್ಯಕ್ರಮದಲ್ಲಿ ಜನ ಸಾಮಾನ್ಯರೊಬ್ಬರು ಫೋನಾಯಿಸಿ ಮಧ್ಯಮಸ್ಥರು, ಹಿಂದುಳಿದವರ ಇಂತಹ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ತಿನ್ನಲು ಕಷ್ಟವಿದೆ. ಇಂತಹ ಸಂದರ್ಭದಲ್ಲಿ ತಿಂಗಳ ಬಾಡಿಗೆ ಕಟ್ಟಲು ಪರದಾಡುವ ಸ್ಥಿತಿ ಇದೆ. ಬಾಡಿಗೆಯನ್ನು ಸರ್ಕಾರ ಭರಿಸಿದ್ರೆ ಅನುಕೂಲವಾಗಲಿದೆ ಎಂಬ ಪ್ರಶ್ನೆ ಮಾಡಿದಾಗ,
ಸಚಿವ ಅಶೋಕ ಅವರು, ಮಾನವೀಯತೆಯಿಂದ ಮನೆ ಮಾಲೀಕರು ಕನಿಷ್ಠ ಪಕ್ಷ ಒಂದು ತಿಂಗಳ ಬಾಡಿಗೆಯನ್ನು ಪಡೆಯಬಾರದು. ಅಲ್ಲದೆ ಮನೆ ಬಾಡಿಗೆ ನೀಡಿಲ್ಲವೆಂದು ತೊಂದರೆ ಕೊಟ್ಟರೆ ಬಾಡಿಗೆದಾರರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದರೆ ತಕ್ಷಣ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ಅಲ್ಲದೆ ಹಲವಡೆ ಈ ಸಂದರ್ಭದಲ್ಲಿ ಫೋನಾಯಿಸಿ ನಮ್ಮ ಮನೆ ಮಾಲೀಕರು ಒಂದು ತಿಂಗಳ ಮತ್ತು ಕೆಲವೊಬ್ಬರು ಎರಡು ತಿಂಗಳ ಬಾಡಿಗೆ ಕೊಡಬೇಡಿ ನಿಮ್ಮ ಸ್ಥಿತಿ ಅರ್ಥವಾಗುತ್ತದೆ ಎಂದಿದ್ದಾರೆ ಎಂದು ತಿಳಿಸಿದಾಗ, ಸಚಿವರು ಆ ಮಹಾನುಭಾವರಿಗೆ ಎರಡು ಕೈಗಳಿಂದ ಕೃತಜ್ಞತೆ ಯನ್ನು ಅರ್ಪಿಸಿದರು.
ಇದನ್ನೆ ಮಾನವೀಯತೆ ಎನ್ನುವದು. ಎಲ್ಲಾ ಕಡೆ ಬಾಡಿಗೆ ಕೊಡಿ ಇಲ್ಲಾ ಬಿಟ್ಟು ಹೋಗಿ ಅನ್ನೋರಿಲ್ಲ ಎಲ್ಲೋ ಇರ್ತಾರೆ ಕೆಲವೊಂದು ಜನ. ಸದ್ಯದ ವಿಷಮ ಸ್ಥಿತಿ ಅರಿತು ಒಬ್ಬರಿಗೊಬ್ಬರು ಮಾನವೀಯತೆ ಯಿಂದ ಸಹಾಯ ಸಹಕಾರ ನೀಡಿದರೆ ಉತ್ತಮ ಎಂದರು. ಈಗಾಗಲೇ ಬಹುಯೇಕ ಕಡೆ ಜನರ ಮನಸ್ಸು ಮಿಡಿಯುತ್ತಿದೆ.
ನಿರಾಶ್ರಿತರಿಗೆ, ಕಾರ್ಮಿಕರಿಗೆ ಬಡವರಿಗೆ ಅನ್ನ, ನೀರು, ದವ ಧಾನ್ಯಗಳನ್ನು ಸ್ವಿಚ್ಛೆಯಿಂದ ವಿತರಿಸುತ್ತಿರುವದು ಕಾಣಬಹುದು ಎಂದರು.