Homeಜನಮನಪ್ರಮುಖ ಸುದ್ದಿ

‘ಎಫ್‌ಐಆರ್ ಆದ ಕೂಡಲೇ ಸಿಎಂ ರಾಜೀನಾಮೆ ನೀಡಬೇಕು’- ಆರ್.ಅಶೋಕ್

ಬೆಂಗಳೂರು: ಎಫ್‌ಐಆರ್ ಆದ ಕೂಡಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎಫ್‌ಐಆರ್ ಆದ ತಕ್ಷಣ ನಿಮ್ಮ ಪೊಲೀಸರ ಮುಂದೆ ನೀವು ನಿಂತುಕೊಳ್ಳಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಹೈಕೋರ್ಟ್‌ನಿಂದ ಸಿಎಂ ವಿರುದ್ಧ ತೀರ್ಪು ಬಂದ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಮಹತ್ತರ ತಿರುವಿನ ದಿನವಾಗಿದೆ. ರಾಜ್ಯ ನಡೆಸುವ ಮುಖ್ಯಮಂತ್ರಿ ಮೇಲೆ ಆಪಾದನೆ ಬಂದು ಹೈಕೋರ್ಟ್ ಆದೇಶ ಆಗಿದೆ. ಜನ ಪ್ರತಿನಿಧಿಗಳ ಕೋರ್ಟ್ ಎಫ್‌ಐಆರ್ ಆಗಲಿ ಎಂದು ಹೇಳಿದೆ. ಬಿಜೆಪಿ, ಎನ್‌ಡಿಎ ಅವರು ರಾಜೀನಾಮೆ ಕೇಳುತ್ತಾ ಇದ್ದೇವೆ. ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದ್ದಾರೆ.

ನಮ್ಮ ಮೇಲೆ ಆಪಾದನೆ ಇಲ್ಲ. ಇದು ಬಿಜೆಪಿ ಪ್ರೇರಿತ ಎಂದು ರಾಜಕೀಯ ದಾಳ ಹೂಡಿದ್ದರು. ರಾಜಭವನ ಅನುಮತಿ ಕೊಟ್ಟ ತಕ್ಷಣ ರಾಜಭವನ ಕಡೆ ಕಾಂಗ್ರೆಸ್ ಅವರು ತಿರುಗಿಬಿಟ್ಟರು. ರಾಜಭವನವನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಸ್ಫೋಟಿಸುತ್ತೀವಿ ಎಂದು ಕಾಂಗ್ರೆಸ್ ಅವರು ವಿಜೃಂಭಣೆ ಮಾಡಿದ್ದರು. ಈಗ ತನಿಖೆಗೆ ಸೂಕ್ತ ಎಂದು ಆದೇಶವಾಗಿದೆ ಎಂದರು.

ಒರಿಜಿನಲ್ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇತ್ತು. ಈಗ ಜನಪ್ರತಿನಿಧಿಗಳ ನ್ಯಾಯಾಲಯ ಸ್ಟೇಟ್‌ಮೆಂಟ್ ಕೊಟ್ಟಿದೆ. ಗರ್ವನರ್ ಹೇಳಿದ್ದರಲ್ಲಿ ಸತ್ಯಾಂಶ ಕಾಣುತ್ತಿದೆ ಎಂದು ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಅವರು ಇನ್ನೂ ಯಾವುದಕ್ಕೇ ಕಾಯುತ್ತಿದ್ದಾರೆ. ಬಿಜೆಪಿ ಕೇಸ್ ಹಾಕಿಲ್ಲ. ಕೇಸ್ ಹಾಕಿರುವುದು ಆರ್‌ಟಿಐ ಕಾರ್ಯಕರ್ತರು. ಬಿಜೆಪಿಯದ್ದು ಸೇಡಿನ ರಾಜಕಾರಣ. ಗರ್ವನರ್ ಅವರು ಬಿಜೆಪಿ ಕೇಂದ್ರ ಎಂದಿದ್ದರು. ಈಗ ಎರಡೂ ನ್ಯಾಯಾಲಯ ಹೇಳಿದೆ ಏನು ಹೇಳ್ತೀರಾ ಎಂದು ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button