ಪ್ರಮುಖ ಸುದ್ದಿ

ಇವತ್ತಿಲ್ಲ ನಾಳೆ ಸತ್ಯಕ್ಕೆ ಜಯ ಇರಲಿದೆ‌ – ರಾಗಾ

ನನ್ನ ಪರವಾಗಿ ಸಹಾಯ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು

ಇವತ್ತಿಲ್ಲ ನಾಳೆ ಸತ್ಯಕ್ಕೆ ಜಯ ಇರಲಿದೆ‌ – ರಾಗಾ

ನನ್ನ ಪರವಾಗಿ ಸಹಾಯ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು

ಶಹಾಪುರಃ ಮಾನನಷ್ಟ ಪ್ರಕರಣವೊಂದರಲ್ಲಿ ಗುಜರಾತ್ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆಗೆ ಆದೇಶ ನೀಡಿತ್ತು.
ಆದರೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿಗೆ ಸ್ಪಂಧಿಸಿದ ನ್ಯಾಯಾಧೀಶರು ಗುಜರಾತ್ ಹೈ ಕೋರ್ಟ್ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

2019 ರಲ್ಲಿ ಕರ್ನಾಟಕ ಕೋಲಾರನಲ್ಲಿ ಭಾರತ ಜೋಡೊ ಪಾದಯಾತ್ರ ವೇಳೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು, ಮೋದಿ ಎನ್ನುವ ಉಪನಾಮ ಹೊಂದಿದವರು ಕಳ್ಳರೆ ಆಗಿದ್ದಾರೆ ಏಕೆ..? ಎಂದು ಭಾಷಣದಲ್ಲಿ ಹೇಳಿರುವದು ಆಗ ಎಲ್ಲಡೆ ಖಂಡನೆಗೆ ಗುರಿಯಾಗಿತ್ತು.
ಬಿಜೆಪಿ ಮತ್ತು ಪ್ರಧಾನಿ ಮೋದಿ ಅಭಿಮಾನಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದವು.

ರಾಹುಲ್ ಗಾಂಧಿ ಹೇಳಿಕೆ ಪ್ರಶ್ನಿಸಿ ಗುಜರಾತ್ ನ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕ್ಕದ್ದಮೆ ದಾಖಲಾಗಿತ್ತು.
ಗುಜರಾತ್ ಪ್ರಕರಣದ‌ ವಿಚಾರಣೆ ನಡೆಸಿ ಸಂಸದರಾಗಿ ಈ ರೀತಿ ಅವಮಾನದ ಮಾತನಾಡುವದು ಸರೊಯಲ್ಲವೆಂದು ಅಲ್ಲಿನ ನ್ಯಾಯಾಧೀಶರು ಎರಡು ವರ್ಷ‌ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು.

ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಡಿಲೇರಿದ ರಾಗಾಗೆ ಪ್ರಸ್ತುತ ಗುಜರಾತ್ ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಇಂದಲ್ಲ ನಾಳೆ ಸತ್ಯಕ್ಕೆ‌ಜಯ‌- ರಾಗಾ
ಇಂದಲ್ಲ ನಾಳೆ ನಾಳೆಯಲ್ಲ‌ ನಾಡಿದ್ದು ಸತ್ಯಕ್ಕೆ ಜಯ ದೊರೆಯಲಿದೆ ಎಂಬುದು ನನಗೆ ತಿಳಿದಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ‌ನಿಡಿದ ತಡೆಯಾಜ್ಞೆ ಕುರಿತು ಜಯ ಯಾವಾಗಲು ಸತ್ಯದ ಪರವಾಗಿ ಇರಲಿದೆ.

ಆ ಸಮಯದಲ್ಲಿ‌ ನಮ್ಮ‌ ಪರವಾಗಿ ಸಹಾಯ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ ಅವರು, ನನಗೆ ನನ್ನ ಕೆಲಸವೇನು ನಾನೇನು ಮಾಡಬೇಕು ಅದನ್ನು‌ ಮುಂದುವರೆಸುವೆ ಎಂದರು.

Related Articles

Leave a Reply

Your email address will not be published. Required fields are marked *

Back to top button