ಪ್ರಮುಖ ಸುದ್ದಿ

ಸಿಸಿಬಿ ಕಚೇರಿಗೆ ಆಗಮಿಸಿದ ರಾಗಿಣಿ‌ ಡ್ರಸ್ ಕೋಡ್ ಹೇಗಿದೆ ಗೊತ್ತಾ.?

ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆ ತಂದ ಪೊಲೀಸರು.!
ವಿಚಾರಣೆಗೆ ಆಗಮಿಸಿದ ರಾಗಿಣಿ‌ ಡ್ರಸ್ ಕೋಡ್ ಹೇಗಿದೆ ಗೊತ್ತಾ.?

ವಿವಿ‌ ಡೆಸ್ಕ್ಃ ಚಂದನವನದಲ್ಲಿ ಡ್ರಗ್ಸ್ ಮಾಫಿಯಾ ಅಲ್ಲೋಕಲ್ಲೋಲ ಸೃಷ್ಟಿಸಿದ್ದು, ಕಳೆದ ವಾರದಿಂದ ಡ್ರಗ್ಸ್ ಮಾಫಿಯಾ‌ ಚಂದನವನದ ನಟ, ನಟಿಯರನ್ನ ತಲ್ಲಣಗೊಳಿಸಿದ್ದು,‌ ಮುಂದೆ ಯಾವ ಹಂತ ತಲುಪಲಿದೆ ಎಂಬುದು ಸದ್ಯಕ್ಕೆ ತಿಳಿಯುತ್ತಿಲ್ಲ.

ಮೊದಲ ಹಂತದ ಆರೋಪ ಹೊತ್ತ ರಾಗಿಣಿ ಇಂದು ಸಿಸಿಬಿ ಕಚೇರಿಗೆ ಕರೆ ತಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಗಿಣಿಗೆ ಸಿಸಿಬಿ‌ ನೊಟೀಸ್ ಜಾರಿಯಾಗುತ್ತಲ್ಲೆ‌ ಎಚ್ವೆತ್ತುಕೊಂಡ ನಟಿ ರಾಗಿಣಿ‌ ಸಾಮಾಜಿಕ ಜಾಲತಾಣದಲ್ಲಿ ನೋಟಿಸ್ ನನಗೆ ತಲುಪಿಲ್ಲ. ಹಾಗೇ ಹೀಗೆ ಸಂದೇಶ ನೀಡಿದರೂ, ಆದರೆ ಇದೀಗ ಬೆಂಬಿಡದ ಸಿಸಿಬಿ ತಂಡ ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ನಂತರ‌ ಇನ್ಯಾರು ಹೆಸರುಗಳು ಹೊರಬರಲಿವೆ ಕಾದು ನೋಡಬೇಕು.

ಈಗಾಗಲೇ ಇಂದ್ರಜಿತ್‌ ಲಂಕೇಶ ಅವರು ಡ್ರಗ್ಸ್ ದಂಧೆ ಚಂದನವನಕ್ಕೆ ಕೆಟ್ಟ ಹೆಸರು ತರುತ್ತಿದೆ.‌ಇದನ್ನು ತೆಗೆದು ಹಾಕಬೇಕಿದೆ ಎಂದು ಪಣತೊಟ್ಟಂತೆ ಕಾಣುತ್ತಿದೆ. ಧೈರ್ತವಾಗಿ‌ ಈ ಮಾದಕ ಪಿಡುಗನ್ನು ವಿರೋಧಿಸಿ ಸಿಸಿಬೆ ಪೊಲೀಸರಿಗೆ ಹಲವು ಸಾಕ್ಷಿ, ಮಾಹಿತಿ ನೀಡುವ ಮೂಲಕ ದಂಧೆಕೋರರಿಗೆ ಎದೆ ನಡುಗುವಂತೆ ಮಾಡಿದ್ದಾರೆ.

ಇಂತಹ ಡ್ರಗ್ಸ್ ಲೋಕದಲ್ಲಿ ನಟಿ ತುಪ್ಪದ ಬೆಡಗಿ ರಾಗಿಣಿ ಮತ್ತು ಇನ್ನೋರ್ವ ನಟಿ ಸಂಜನಾ ಹೆಸರು ತಳಕಾಕುಗೊಂಡಿದ್ದು,‌ ಸಿಸಿಬಿ ಪೊಲೀಸರ ವಿಚಾರಣೆ ತನಿಖೆ ನಂತರವೇ ಸತ್ಯಾಸತ್ಯತೆ ಬಯಲಾಗಲಿದೆ.

ಸೀರೆ‌ ತೊಟ್ಟು ಸಿಸಿಬಿ ಕಚೇರಿಗೆ ಬಂದ ರಾಗಿಣಿ.! ಇದೇನಿದು ಸಾಚಾ ಅವತಾರವಾ.? ಎಂದು ಕೇಳಿದಲ್ಲಿ
ಹೌದು ಎನ್ನುತ್ತದೆ ಪ್ರಗಿತಪರ ಚಿಂತಕರ ಛಾವಡಿ.‌ ಡ್ರಗ್ಸ್ ಮಾಫಿಯಾದಲ್ಲಿ ಹೆಸರು ತಳಕಾಕಿಕೊಂಡಿದ್ದು, ಅಮಲಿನಲ್ಲಿ ಹಿಂದೆ ಜಗಳ‌ ಮಾಡಿ‌ ಹಳೇ ಬಾಯ್ ಫ್ರೆಂಡ್ ಬಿಟ್ಟು ಹೊಸ್ ಬಾಯ್ ಫ್ರೆಂಡ್ ಜೊತೆ ಕುಣಿದಿದ್ದು, ಗಲಾಟೆಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವದು ಗೊತ್ತಿರುವ ವಿಷಯ.

ಇದೀಗ ಎಲ್ಲವೂ ಬಹಿರಂಗ ವಾಗುತ್ತಿದೆ. ಬೆಂಕಿ ಇಲ್ಲದೆ ಹೊಗೆ ಆಡಲಾರದು ಎಂಬಂತೆ‌ ನಟಿ ರಾಗಿಣಿ‌ ಕುರಿತು ತೀವ್ರತರದ‌ ಚಿಂತನೆ ನಡೆಸಿದಾಗ, ಆಕೆಯ ಬಗ್ಗೆ ಹೊರಜಗತ್ತಿಗೆ ಗೊತ್ತಿರದ ಸಂಗತಿಗಳು ಗೋಚರಗೊಳ್ಳುತ್ತವೆ. ಅಷ್ಟಕ್ಕೂ ತನಿಖೆ ನಂತರವೇ ಆಕೆಯ ಮೇಲಿನ‌ ಆರೋಪಗಳಿಗೆ‌ ಪುಷ್ಠಿ ನೀಡಬಲ್ಲವು ಅಸತ್ಯವಾದಲ್ಲಿ ಆರೋಪಗಳು ಸೊರಗಿ ಹೊರಬರಹುದು.

ಆದರೆ‌ ಇಂತಹ ದೊಡ್ಡ ಡ್ರಗ್ಸ್ ಮಾಫಿಯಾದ‌ ಕಳಂಕ‌ ಹೊತ್ತು, ಕಂದು ಬಣ್ಣದ ಸೀರೆ ಅದರ ಮೇಲೆ‌ ಕಪ್ಪುಬಣ್ಣದ‌ ಹೂವಿನ ಚಿತ್ತಾರ, ಕಪ್ಪು ರವೀಕೆ,‌ ಕಪ್ಪು ಚುಕ್ಕೆಯಿರುವ ಮುಖ ಕವಚ ಧರಿಸಿ‌ ನಗುಮುಖ‌ ಹೊತ್ತು ಬಂದಿರುವದು ನೋಡಿದರೆ ಇವಳೇನಾ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವದು ಎಂದು ನಾಚುವಂತೆ ಮಾಡುವದು ಸುಳ್ಳಲ್ಲ.

Related Articles

Leave a Reply

Your email address will not be published. Required fields are marked *

Back to top button