ಪ್ರಮುಖ ಸುದ್ದಿ
BREAKING NEWS- ಡ್ರಗ್ಸ್ ದಂಧೆಃ ನಟಿ ರಾಗಿಣಿಗೆ ಸಿಸಿಬಿ ನೋಟಿಸ್ ಜಾರಿ
BREAKING NEWS- ಡ್ರಗ್ಸ್ ದಂಧೆಃ ನಟಿ ರಾಗಿಣಿಗೆ ಸಿಸಿಬಿ ನೋಟಿಸ್ ಜಾರಿ
ಬೆಂಗಳೂರಃ ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಗೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದ್ದು, ನಟಿ ರಾಗಿಣಿಗೆ ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಹೀಗಾಗಿ ಸ್ಯಾಂಡಲ್‌ವುಡ್ ನಲ್ಲಿ ಇದೀಗ ನಡುಕ ಶುರುವಾಗಿದ್ದು, ಡ್ರಗ್ಸ್ ದಂಧೆ ಪ್ರಕರಣ ದಡಿ ಮೊದಲ ಬಾರಿಗೆ ಬಹಿರಂಗವಾಗಿ ನಟಿ ರಾಗಿಣಿ ದ್ವಿವೇದಿ ಹೆಸರು ಹೊರ ಬಂದಿದ್ದು, ನಾಳೆ ಸಿಸಿಬಿ ಪೊಲೀಸರ ಮುಂದೆ ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕಿದೆ.
ನಟಿ ರಾಗಿಣಿಗೆ ಈಗ ಸಂಕಷ್ಟ ಎದುರಾಗಿದ್ದು, ಇನ್ನುಳಿದ ನಟ, ನಟಿಯರಿಗೆ ನಡುಕ ಶುರುವಾಗಿದೆ. ಈ ಡ್ರಗ್ಸ್ ಪ್ರಕರಣ ಹಗೆದಂತೆಲ್ಲ ಸಾಕಷ್ಟು ಕ್ರಿಮಿಕೀಟಗಳು ಗೋಚರವಾಗುವದು ಸಹಜವಾಗಿದೆ ಎನ್ನಲಾಗಿದೆ.