ಅಂಕಣಬಸವಭಕ್ತಿ

ಹೊಸ ವಚನ ಸಾಹಿತ್ಯ ಸಮ್ಮೇಳನಕ್ಕೆ ಹೊಸಮನಿ ಅಧ್ಯಕ್ಷ.!

ಆಧುನಿಕ ವಚನ ಸಾಹಿತ್ಯಕ್ಕೆ ಹೊಸಮನಿ ಸಾರಥ್ಯ

ವಚನ ಸಾಹಿತ್ಯದ ಪುಣ್ಯ ಭೂಮಿ ಬಸವಣ್ಣನ ಕಲ್ಯಾಣ ನಾಡು. ಸದ್ಯ ಭಾರತದಾದ್ಯಂತ ಗುರುತಿಸಿಕೊಂಡಿರುವುದು ವಚನ ಸಾಹಿತ್ಯದ ದಿವ್ಯಶಕ್ತಿಯಿಂದ. ಇಂತಹ ಶಕ್ತಿಯನ್ನು ಇಂದಿನ ಕವಿಗಳೂ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ. ಬೀದರ ಜಿಲ್ಲೆಯಲ್ಲಿ ಅನೇಕ ಆಧುನಿಕ ವಚನಕಾರರಿಂದ ವಚನಗಳು ಸೃಜಿಸಲ್ಪಟ್ಟಿವೆ. ಆಧುನಿಕ ವಚನ ಸಾಹಿತ್ಯವೂ ಸಂಪದ್ಭರಿತವಾಗಿ ಬೆಳೆದಿದೆ.

ಬಸವಕಲ್ಯಾಣದ ಸಸ್ತಾಪುರದ ಪೂಜ್ಯ ಲಿಂ. ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಶಿಕ್ಷಣ ಸಂಸ್ಥೆಯ ವತಿಯಿಂದ ಈವರೆಗೆ 7 ಬಾರಿ ಆಧುನಿಕ ವಚನ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 2013ರಿಂದ ಸತತವಾಗಿ ಪ್ರತಿವರ್ಷ ಸಮ್ಮೇಳನವನ್ನು ಆಯೋಜಿಸುತ್ತ ಬಂದಿದೆ.

ಸದ್ಯ 8 ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ|| ಸತೀಶ ಕುಮಾರ ಹೊಸಮನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಚನ ಸಾಹಿತ್ಯ, ಪ್ರವಾಸ ಕಥನಗಳು, ಜೀವನ ಚರಿತ್ರೆ, ಕವನಗಳು, ಇಂಗ್ಲೀಷ್ ಸಾಹಿತ್ಯ ಸೇರಿದಂತೆ ತಮ್ಮ ಬಿಡುವಿಲ್ಲದ ಸಮಯದಲ್ಲಿ ಈವರೆಗೆ ಒಟ್ಟು 10 ಕೃತಿಗಳನ್ನು ಹೊರತಂದಿದ್ದಾರೆ.

ಇನ್ನೂ ಮೂರು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಗೊಂಡಿದ್ದು, ಇತ್ತೀಚೆಗೆ ಡಾ|| ಹೊಸಮನಿಯವರು 50 ವಸಂತ ಪೂರ್ಣಗೊಳಿಸಿದ ಪ್ರಯುಕ್ತ “ಕಲ್ಯಾಣ ಪ್ರಭೆ” ಎಂಬ ಬೃಹತ್ ಅಭಿನಂದನ ಗ್ರಂಥ ಹೊರಬಂದಿದೆ.

ಡಾ|| ಹೊಸಮನಿಯವರು “ಶ್ರೀ ಶಿವಲಿಂಗೇಶ್ವರ” ಎಂಬ ಅಂಕಿತದಿಂದ “ಮನದ ವಚನಗಳು” ಎಂಬ ಕೃತಿಯಲ್ಲಿ 130 ವಚನಗಳನ್ನು ಬರೆದಿದ್ದಾರೆ. ಜಾತೀಯತೆ, ಧರ್ಮಸಹಿಷ್ಣುತೆ, ವಿಶ್ವಮಾನವತ್ವ, ಮುಂತಾದ ಸಮಕಾಲೀನ ಸಮಾಜದ ಆಗುಹೋಗುಗಳನ್ನು ಕುರಿತು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. “ಮನದ ವಚನಗಳು” ಕೃತಿಯಲ್ಲಿ ಒಂದು ವಚನ ಹೀಗಿದೆ.
ಮಾತು ಮನವ ಗುಡಿಯಾಗಿ
ಮೌನ ಅಂತರಂಗ ಬೆಳಕಾಗಿ
ಮಾತು-ಮೌನ ಬಂಗಾರವಾಗಿ
ನಿಂತೊಡನೆ ಅದು ತನ್ನತಾನೇ
ನಿಜದ ನೆಲೆ ಕಂಡು ಜಂಗಮಸ್ವರೂಪಿಯಾದೆ
ಶ್ರೀ ಶಿವಲಿಂಗೇಶ್ವರ
ಡಾ|| ಹೊಸಮನಿಯವರು ಹುಮನಾಬಾದ್ ತಾಲೂಕಿನ ಸ್ವಗ್ರಾಮ ಖೇರ್ಡಾ(ಬಿ) ಗ್ರಾಮದ ಆರಾಧ್ಯದೈವ, ಮನೆ ದೇವರು “ಶ್ರೀ ಶಿವಲಿಂಗೇಶ್ವರ” ಮಠದ ಪರಿಸರದಲ್ಲಿ ಬೆಳೆದುದರಿಂದ “ಶ್ರೀ ಶಿವಲಿಂಗೇಶ್ವರ” ಎಂದು ಅಂಕಿತವನ್ನು ಇಟ್ಟುಕೊಂಡಿದ್ದಾರೆ. ಈ ಬಾರಿಯ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ|| ಹೊಸಮನಿಯವರ ನೇತೃತ್ವದಲ್ಲಿ 2 ದಿನಗಳ ಕಾಲ ಜರುಗುತ್ತಿದ್ದು, ಆಧುನಿಕ ವಚನ ಚಿಂತನ ಗೋಷ್ಠಿ, ಆಧುನಿಕ ವಚನ ವಾಚನ ಗೋಷ್ಠಿ, ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು, ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಶ್ರೀ ಯಲ್ಲಾಲಿಂಗ ಪ್ರಶಸ್ತಿ ಪುರಸ್ಕಾರ: ಶ್ರೀ ಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಶ್ರೀ ಯಲ್ಲಾಲಿಂಗ ಪ್ರಶಸ್ತಿ ಪುರಸ್ಕಾರ ನೀಡುತ್ತಿದ್ದಾರೆ. ಪಿ.ಜಿ.ಹಿರೇಮಠ, ಡಾ|| ಶಿವರಾಜ ಪಾಟೀಲ, ಚಂದ್ರಪ್ಪ ಹೆಬ್ಬಾಳ್ಕರ್, ವಿಠ್ಠಲ್ ವಗ್ಗನ್, ಪ್ರಭಾಕರ ಜೋಶಿ, ಪುಷ್ಪಾ ಕನಕ, ಡಾ|| ಶಿವರಾಮ್ ಅಸುಂಡಿ ಸೇರಿದಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕಲಬುರ್ಗಿ, ವಿಜಯಪುರ, ಬೀದರ ಜಿಲ್ಲಾ ಉಪನಿರ್ದೇಶಕರಾದ ಅಜಯಕುಮಾರ ಡಿ.ರವರು ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಗೌರವ ಸನ್ಮಾನ: ಶ್ರೀ ಮಠದಿಂದ ಜರುಗುವ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕರೆತಂದು ಸನ್ಮಾನಿಸುವದು ವಿಶೇಷ. ಬೀದರ ಜಿಲ್ಲೆಯಲ್ಲಿ ಆಧುನಿಕ ವಚನ ಸಾಹಿತ್ಯ ಕೂಡ ಹೆಮ್ಮರವಾಗಿ ಬೆಳೆದು ಬರುತ್ತಿದೆ. ಬಿ.ಎಸ್.ಖೂಬಾ, ಜಗದೇವಿ ದುಬಲಗುಂಡಿ, ಶ್ರೀ ಶಿವಾನಂದ ಸ್ವಾಮಿಗಳು ಹುಲಸೂರು,ಡಾ|| ಎಂ.ಜಿ.ದೇಶಪಾಂಡೆ, ಡಾ|| ವಜ್ರಾ ಪಾಟೀಲ, ಹಂಶಕವಿ, ಮಾಣಿಕರಾವ್ ಬಿರಾದಾರ, ದೇಶಾಂಶ ಹುಡಗಿ, ಡಾ|| ಗವಿಸಿದ್ದಪ್ಪ ಪಾಟೀಲ, ವಿಜಯಶ್ರೀ ಸಬರದ ಸೇರಿದಂತೆ ಅನೇಕರು ಆಧುನಿಕ ವಚನ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪಾಟೀಲ ಬಸನಗೌಡ ಹುಣಸಗಿ.
ಗ್ರಂಥಾಲಯ ಸಹಾಯಕರು ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button