E ದಿನದ ರಾಶಿ ಭವಿಷ್ಯ ಓದಿ
ಶ್ರೀ ಶಕ್ತಿ ಗಣಪತಿ ದೇವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಸ್ವಾತಿ
ಋತು : ವರ್ಷ
ರಾಹುಕಾಲ 12:33 – 14:08
ಗುಳಿಕ ಕಾಲ 10:59 – 12:33
ಸೂರ್ಯೋದಯ 06:14:13
ಸೂರ್ಯಾಸ್ತ 18:52:42
ತಿಥಿ : ಸಪ್ತಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಗೃಹ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಪಾವತಿಗಳ ವಸೂಲಿಯನ್ನು ಯಶಸ್ವಿಯಾಗಿ ಮಾಡುವಿರಿ. ಆರ್ಥಿಕ ಯೋಜನೆಯನ್ನು ಸದೃಡಗೊಳಿಸುವ ಪ್ರಯತ್ನ ಮಾಡುವುದು ಉತ್ತಮ. ನಿಮ್ಮ ಹಿನ್ನಡೆಗೆ ನಿಮ್ಮ ತಪ್ಪುಗಳು ಕಾರಣವಾಗಿವೆ ತಿದ್ದಿಕೊಳ್ಳಿ. ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ವಿವಾಹದ ಯೋಗ ಕೂಡಿಬರಲಿದೆ. ಶತ್ರುಗಳ ಉಪಟಳ ಹೆಚ್ಚಾಗಿ ಅನುಭವಿಸುತ್ತೀರಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ನಡೆದಿರುವ ವಿರುದ್ಧ ಘಟನೆಗಳನ್ನು ನೆನೆಯುತ್ತ ಕೊರಗದಿರಿ ಆದಷ್ಟು ಬದುಕಿನ ವಿಶ್ವಾಸ ಹಾಗೂ ಚೈತನ್ಯ ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಕೆಲವು ಸಮಸ್ಯೆಗಳಿಂದ ಮಾನಸಿಕವಾಗಿ ವಿಚಲಿತರಾಗುವ ಸಾಧ್ಯತೆ ಕಂಡುಬರುತ್ತದೆ. ಕುಟುಂಬದ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ. ಅದ್ಭುತ ಆಲೋಚನೆಗಳು ಹೊಳೆಯುವುದನ್ನು ಕಾಣಬಹುದು. ಅರ್ಥವ್ಯವಸ್ಥೆ ಸರಿಹೋಗುವ ಸಂದರ್ಭಗಳು ಬರಲಿದೆ. ಮಕ್ಕಳಿಂದ ಮನೆಯಲ್ಲಿ ಸಂತಸದ ವಾತಾವರಣ ಕಂಡುಬರುತ್ತದೆ. ಹಿರಿಯರು ನಿಮಗೆ ಜವಾಬ್ದಾರಿಗಳನ್ನು ದಯಪಾಲಿಸಲಿದ್ದಾರೆ.
ಶುಭಸಂಖ್ಯೆ 4
ಗಿರಿಧರ ಶರ್ಮ 9945098262
ಮಿಥುನ ರಾಶಿ
ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿದ್ದು ಹಿಡಿದ ಕೆಲಸವನ್ನು ಸಾಧಿಸುತ್ತೀರಿ. ಕೆಲಸದಲ್ಲಿ ಮಧ್ಯವರ್ತಿಗಳನ್ನು ದೂರವಿಡುವುದು ಒಳ್ಳೆಯದು. ಜಂಟಿ ವ್ಯವಹಾರಗಳು ನಷ್ಟ ಕೂಡಲಿವೆ. ಉತ್ತಮ ಹಣಕಾಸಿನ ಆದಾಯ ನಿರೀಕ್ಷಿಸಬಹುದು. ವಿನಾಕಾರಣ ದುಂದುವೆಚ್ಚ ಮಾಡುವ ಮನಸ್ಥಿತಿಯನ್ನು ತೆಗೆದುಹಾಕಿ. ಜಾಣ್ಮೆಯ ಮಾತುಗಳಿಂದ ಎದುರಾಳಿಗಳನ್ನು ಬಗ್ಗಿಸುವ ವ್ಯವಸ್ಥೆ ಕಾಣಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ವ್ಯವಹಾರದಲ್ಲಿ ಜಾಗ್ರತೆ ಇರಲಿ. ಖರೀದಿ ಪ್ರಕ್ರಿಯೆಗಳು ಇಂದು ಜೋರಾಗಿ ನಡೆಯಲಿದೆ ಇದು ನಿಮ್ಮ ಅರ್ಥವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡಬಹುದು. ಕೆಲಸದಲ್ಲಿ ಪ್ರಯತ್ನವಿರಲಿ ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಕೆಲಸದ ಒತ್ತಡದಿಂದ ಮಾನಸಿಕವಾಗಿ ಜರ್ಜರಿತರಾಗಲಿದ್ದೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಹಣ ಗಳಿಸುವ ಉದ್ದೇಶದಿಂದ ಮೋಸದ ವ್ಯವಹಾರಗಳಲ್ಲಿ ಪಾಲ್ಗೊಳ್ಳಬೇಡಿ. ಬಂಧುಬಳಗದೊಂದಿಗೆ ಸೌಜನ್ಯದಿಂದ ವರ್ತಿಸುವುದು ಸೂಕ್ತ. ನಿಮ್ಮನ್ನು ಅನಗತ್ಯ ಕಾರ್ಯಗಳಿಗೆ ಪ್ರೇರೇಪಣೆ ನೀಡುವ ವ್ಯವಸ್ಥೆ ಕಂಡುಬರುವುದು ಯಾವುದಕ್ಕೂ ಧೃತಿಗೆಡಬೇಡಿ. ಕದನ ಕಲಹಕ್ಕೆ ಆಸ್ಪದ ನೀಡುವ ವಿಷಯಗಳನ್ನು ದೂರವಿಡಿ. ನಾಯಕತ್ವ ಸ್ಥಾನದಿಂದ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯಲಿದ್ದೀರಿ. ಪತ್ನಿಯೊಡನೆ ಕಾಲಕಳೆಯುವುದರ ಬಗ್ಗೆ ಚಿಂತಿಸಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಪ್ರಯತ್ನದಿಂದ ಫಲ ಸಾಕಾರಗೊಳ್ಳಲಿದೆ. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರ ಮಾಡುವುದು ಸೂಕ್ತ. ಯೋಜನೆಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ದುಡುಕಿನ ನಿರ್ಧಾರಗಳು ಮಾರಕವಾಗಬಹುದು ಎಚ್ಚರವಿರಲಿ. ಬಂದಿರುವ ಕಾರ್ಯವನ್ನು ಮಾಡುವ ಮುನ್ನ ಅದರ ಬಗ್ಗೆ ಸೂಕ್ತ ತಿಳುವಳಿಕೆ ಪಡೆಯಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ತುಲಾ ರಾಶಿ
ನಿಮ್ಮ ಹಿಡಿತದಲ್ಲಿರುವ ಕೆಲಸಗಾರರನ್ನು ಕೈ ತಪ್ಪದಂತೆ ನೋಡಿಕೊಳ್ಳುವುದೂ ಕ್ಷೇಮ. ತಾಂತ್ರಿಕತೆಯನ್ನು ನಿಮ್ಮ ಕೆಲಸಗಳಲ್ಲಿ ಬಳಸಿಕೊಳ್ಳುವುದು ಒಳ್ಳೆಯದು ಇದರಿಂದ ಲಾಭಾಂಶ ಹೆಚ್ಚಾಗಬಹುದು. ಪ್ರೇಮಿಗಳಿಗೆ ಅದ್ಭುತ ದಿನವಾಗಿ ಕಂಡುಬರುತ್ತದೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೀರಿ ಇದು ನಿಮಗೆ ಹೊಸ ಜ್ಞಾನ ತಿಳಿಸಿ ಕೊಡಲಿದೆ. ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳುವುದು ಬಹುಮುಖ್ಯ. ನಿಮ್ಮಿಷ್ಟದಂತೆ ಸಂಗಾತಿ ಈ ದಿನ ನಡೆದುಕೊಳ್ಳುವರು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಅನಗತ್ಯ ಖರ್ಚುಗಳಿಂದ ಸಮಸ್ಯೆಯಲ್ಲಿ ಸಿಲುಕುವಿರಿ. ಕೆಲವರು ನಿಮ್ಮ ವಿಚಾರಗಳನ್ನು ದುರುಪಯೋಗಪಡಿಸಿಕೊಂಡು ನಿಮ್ಮನ್ನು ಮೋಸ ಗೊಳಿಸಬಹುದು ಎಚ್ಚರ. ಕೆಲಸದ ವಿಷಯದಲ್ಲಿ ಅಸಮಾಧಾನ ಹೆಚ್ಚಾಗಲಿದೆ. ಸಮಸ್ಯೆಗಳ ಚಿಂತೆಯಲ್ಲಿ ಕೊರಗದೆ ಅದರ ವಿರುದ್ಧ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಕೆಲವರು ತಮ್ಮ ಹಿತಾಸಕ್ತಿಗಾಗಿ ನಿಮ್ಮನ್ನು ಒತ್ತಾಯ ಮಾಡಬಹುದು ನೀವು ನಿಮ್ಮ ಯೋಚನೆಯಂತೆ ಮಾತ್ರ ನಡೆದುಕೊಳ್ಳುವುದು ಕ್ಷೇಮ. ಕೌಟುಂಬಿಕ ವ್ಯಾಜ್ಯಗಳನ್ನು ಆದಷ್ಟು ಮಾತುಕತೆಯ ಮೂಲಕ ಪರಿಹಾರ ಮಾಡಿಕೊಳ್ಳಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಮಾಡುವ ಕೆಲಸದಿಂದ ಪ್ರಶಂಸೆ ಸಿಗಲಿದೆ. ನಿಮ್ಮ ಸಹಕಾರವನ್ನು ಹಲವರು ಬಯಸಿ ಬರಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಜಾಗೃತೆ ಇರಲಿ. ನೀವು ಮಕ್ಕಳ ಬೆಳವಣಿಗೆಗೆ ನೀವು ಸಹ ಶ್ರಮ ಪಡಬೇಕಾಗಿದೆ. ಆತ್ಮೀಯರು ನಿಮ್ಮ ದೊಡ್ಡಮಟ್ಟದ ಕೆಲಸಗಳಿಗೆ ಸಹಾಯದ ಹಸ್ತ ನೀಡಲಿದ್ದಾರೆ. ಸೌಂದರ್ಯದ ಆರಾಧನೆಯನ್ನು ಮಾಡುವ ತವಕ ನಿಮ್ಮಲ್ಲಿ ಕಾಣಬಹುದು. ಯೋಜನೆಯ ವಿಷಯವಾಗಿ ಉತ್ತಮ ವಾದ ಮಂಡನೆ ಮಾಡಲಿದ್ದೀರಿ.
ಶುಭ ಸಂಖ್ಯೆ 1
ಗಿರಿದರ ಶರ್ಮ 9945098262
ಮಕರ ರಾಶಿ
ನಿಮ್ಮ ವಿಷಯದಲ್ಲಿ ಅನಗತ್ಯ ತೊಂದರೆ ನೀಡುವವರನ್ನು ಈ ದಿನ ನಿಮ್ಮಿಂದಲೇ ಮೆಚ್ಚುಗೆ ಮಾತನಾಡಿ ಇದು ನಿಮ್ಮ ಸಮಸ್ಯೆ ನಿವಾರಣೆ ಮಾಡುತ್ತದೆ. ಪ್ರವಾಸದ ಚಿಂತನೆ ಮಾಡುವ ಸಾಧ್ಯತೆ ಇದೆ. ನಿಮ್ಮ ನಯವಾದ ವ್ಯಕ್ತಿತ್ವದಿಂದ ಸಮಸ್ಯೆಗಳನ್ನು ಪರಿಹಾರ ಮಾಡುವಿರಿ. ಪ್ರೇಮದ ಬಗ್ಗೆ ಆಸಕ್ತಿ ನಿಮ್ಮಲ್ಲಿ ಮೂಡುವುದು ಕಂಡುಬರುತ್ತದೆ. ದೈನಂದಿನ ಜೀವನಕ್ಕೆ ಅಗತ್ಯವಿರುವ ಕೆಲವು ಶೈಕ್ಷಣಿಕ ತರಬೇತಿಗಳನ್ನು ಪಡೆಯಲು ಮುಂದಾಗುತ್ತೀರಿ. ಹೊಸದಾಗಿ ಬರುವ ಕೆಲಸಕ್ಕೆ ನೀವು ಆತುರದಿಂದ ವರ್ತಿಸುವುದು ಬೇಡ ಯೋಜನೆಯ ಸಮಗ್ರವಾಗಿ ಅಧ್ಯಯನ ಮಾಡಿ ಮತ್ತು ವಿಳಂಬಮಾಡದೆ ಪಡೆದುಕೊಳ್ಳಿ. ಈ ದಿನ ನಿಮ್ಮಿಂದ ಗೃಹ ಕಾರ್ಯಗಳು ನಡೆಯಲಿದೆ, ಇದು ಮಡದಿಯ ಮನಸ್ಸಿಗೆ ಸಂತೋಷ ನೀಡುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ಕುಟುಂಬದಲ್ಲಿ ಜೀವನದ ಏಳಿಗೆಗಾಗಿ ಚರ್ಚೆಗಳನ್ನು ನಡೆಸುವಿರಿ. ವ್ಯವಹಾರದಲ್ಲಿ ಉತ್ತಮ ಮಾತುಗಳು ಮತ್ತು ನೈಜತೆಯನ್ನು ಬೆಳೆಸಿಕೊಳ್ಳಿ. ಉದ್ಯೋಗ ಮಾಡಲು ಅವಕಾಶಗಳು ಹೆಚ್ಚಳವಾಗುತ್ತದೆ. ಈ ದಿನ ಸ್ನೇಹಮಯವಾಗಿದ್ದು ಹಲವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವಿರಿ. ನೆನೆಗುದಿಗೆ ಬಿದ್ದಿರುವ ಕಾರ್ಯವನ್ನು ಸಾಕಾರಗೊಳಿಸಲು ನಿಮ್ಮಿಂದ ಪ್ರಯತ್ನ ನಡೆಯಲಿದೆ. ಸಂಬಂಧಿಕರ ಭೇಟಿ ಹೊಸ ಹುಮ್ಮಸ್ಸು ಅಥವಾ ಆಲೋಚನೆ ತಂದುಕೊಡುತ್ತದೆ. ಹೊಗಳಿಕೆ ಮಾತುಗಳಿಗೆ ನೀವು ಗರ್ವ ಪಡೆಯುವುದು ಬೇಡ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ಸಣ್ಣ ಸಮಸ್ಯೆಯೆಂದು ಸುಮ್ಮನೆ ಕೂರುವುದು ತಪ್ಪಾಗುತ್ತದೆ. ಸಮಸ್ಯೆ ಉದ್ಭವವಾದರೆ ಅದರ ಪರಿಹಾರಕ್ಕೆ ಮುಂದಾಗಿ. ಹೊಸ ಹಣಕಾಸಿನ ಒಪ್ಪಂದಗಳು ಅನಾಯಾಸವಾಗಿ ನಡೆಯಲಿದೆ. ತೆಗೆದುಕೊಂಡಿರುವ ಸಾಲಗಳನ್ನು ಮರುಪಾವತಿ ಮಾಡಲಿದ್ದೀರಿ. ಸಂತೋಷದ ಸುದ್ದಿಯಿಂದ ನಿಮ್ಮಲ್ಲಿ ಹುಮ್ಮಸ್ಸು ಕಂಡುಬರುತ್ತದೆ. ಕೆಲವು ವೈಯಕ್ತಿಕ ವಿಷಯಗಳಿಂದ ಮಾನಸಿಕ ಚಿಂತೆ ಹೆಚ್ಚಾಗಬಹುದು. ಅಪರಿಚಿತರೊಡನೆ ನಿಮ್ಮ ಯೋಜನೆಗಳ ಬಗ್ಗೆ ಚರ್ಚಿಸುವುದು ಸರಿಯಲ್ಲ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262