ವಿನಯವಾಣಿಯಲ್ಲಿ ದಿನ ಭವಿಷ್ಯ ಓದಿ ಮುನ್ನಡೆಯಿರಿ
ಶ್ರೀ ವಜ್ರಕಾಯ ಆಂಜನೇಯ ಸ್ವಾಮಿ ನೆನೆಯುತ್ತ, ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಆಶ್ಲೇಷ
ಋತು : ಗ್ರೀಷ್ಮ
ರಾಹುಕಾಲ 10:42 – 12:18
ಗುಳಿಕ ಕಾಲ 7:30 – 09:06
ಸೂರ್ಯೋದಯ 05:23
ಸೂರ್ಯಾಸ್ತ 18 43
ತಿಥಿ : ಷಷ್ಠಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ವಿಚಾರಗಳನ್ನು ನಕಲು ಮಾಡುವ ಸಾಧ್ಯತೆಯಿದ್ದು ಆದಷ್ಟು ಹಣಕಾಸಿನ ಹಾಗೂ ಯೋಜನೆ ಬಗ್ಗೆ ಗೌಪ್ಯತೆ ಕಾಪಾಡಿ. ನಿಮ್ಮ ಮಾತುಗಳನ್ನು ಬೇರೆ ರೀತಿಯಾಗಿ ಅರ್ಥೈಸಿಕೊಂಡು ಸಮಸ್ಯೆ ಕೊಡಬಹುದು ಎಚ್ಚರ. ನಿರೀಕ್ಷಿತ ಕೆಲಸವು ವಿಳಂಬವಾಗುವ ಸಾಧ್ಯತೆ ಇದೆ. ಆರ್ಥಿಕ ದೃಷ್ಟಿಕೋನದಲ್ಲಿ ಮಂದಗತಿಯ ಬೆಳವಣಿಗೆ ಕಾಣಬಹುದು. ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು. ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಹಾಗೂ ಬಡ್ತಿ ನೀಡುವ ಸಾಧ್ಯತೆ. ನೀವು ನೀಡಿರುವ ಭರವಸೆಯನ್ನು ಕಾರ್ಯಗತ ಮಾಡಿ ತೋರಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ವೃಷಭ ರಾಶಿ
ಲವಲವಿಕೆಯಿಂದ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಅಂದುಕೊಂಡ ಕಾರ್ಯ ಯಶಸ್ವಿಯಾಗಿ ನಿರ್ವಹಿಸುತ್ತಿರಿ. ಇತಿಹಾಸ ತಜ್ಞರಿಗೆ ಕುತೂಹಲಕಾರಿ ಅಂಶಗಳು ಕಾಣಬಹುದು. ನಿಮ್ಮ ಸಂಪರ್ಕ ಮಾಧ್ಯಮ ಇನ್ನು ವಿಸ್ತಾರ ಗೊಳ್ಳುವ ಸಾಧ್ಯತೆ, ಇದರಿಂದ ಹೇರಳ ಅವಕಾಶ ಲಭ್ಯವಾಗಲಿದೆ. ವ್ಯವಹಾರ ಉದ್ಯೋಗದಲ್ಲಿ ತಂತ್ರಜ್ಞಾನದ ಅಳವಡಿಕೆ ಕಾಣಬಹುದು. ನಿಮ್ಮ ಯೋಜಿತ ಮೂಲಗಳಿಂದ ಸರಾಗವಾಗಿ ಧನಾಗಮನ ಆಗಲಿದೆ. ಪತ್ನಿಯ ಆಸಕ್ತಿಯಿಂದ ಉನ್ನತ ಮಟ್ಟದ ಜೀವನ ಸಾಗಿಸುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಿಥುನ ರಾಶಿ
ನೂತನ ಕಾರ್ಯ ಪ್ರಾರಂಭ ಮಾಡುವ ಮುನ್ನ ಸಂಪೂರ್ಣ ಕೆಲಸದ ಜ್ಞಾನ ತಿಳಿದುಕೊಳ್ಳಿ. ಹಣಕಾಸಿನಲ್ಲಿ ಹಿನ್ನಡೆ ಕಂಡರು ಸಕಾಲ ಸಹಾಯದ ನಿರೀಕ್ಷೆ ಬರಲಿದೆ. ನಿಮ್ಮ ಆತ್ಮದಲ್ಲಿ ಹೊಳೆದಿರುವ ವಿಷಯವು ತುಂಬಾ ಉನ್ನತವಾದದ್ದು ಅದರಿಂದ ನಿಮ್ಮ ಸಂಕಲ್ಪ ಸಿದ್ಧಿ ಯಾಗಲಿದೆ. ಕೆಲಸದ ಜಂಜಾಟವನ್ನು ಹೊರಗಡೆ ಬಿಟ್ಟು ಮನೆಯನ್ನು ಪ್ರವೇಶಿಸಿ. ಕುಟುಂಬದೊಡನೆ ಸಮಾಧಾನದಿಂದ ವರ್ತಿಸಿ. ಸುಳ್ಳಿನ ವಾದಗಳಿಂದ ಪ್ರಯೋಜನವಿಲ್ಲ ಆದಕಾರಣ ನಿಮ್ಮದೇ ಸರಿ ಎಂಬ ವಿತಂಡವಾದ ಬೇಡ. ಮರಳಿ ಯತ್ನವ ಮಾಡಿದರೆ ಇಂದಲ್ಲ ನಾಳೆ ಫಲ ಕೊಡಲಿದೆ ಎಂಬ ಮಾತು ನೆನಪಿಟ್ಟುಕೊಂಡು ಸಾಗಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕಟಕ ರಾಶಿ
ಹಿರಿಯರ ಮಾತುಗಳು ನಿಮಗೆ ಒಳ್ಳೆಯ ಫಲಿತಾಂಶ ನೀಡುತ್ತದೆ ಅದನ್ನು ಪಾಲಿಸುವಂತರಾಗಿ ಸಿಗುವ ಅವಕಾಶವನ್ನು ಕೈ ಚೆಲ್ಲದೆ ವಿನಮ್ರತೆಯಿಂದ ಸ್ವೀಕರಿಸಿ ಒಳ್ಳೆಯದಾಗಲಿದೆ. ನಿಮ್ಮಲ್ಲಿರುವ ಸದಾ ಸಪ್ಪೆ ಮೋರೆ ಹಾಕಿ ಕುಳಿತುಕೊಳ್ಳುವ ಸ್ವಭಾವನ್ನು ತೆಗೆದಿಡಿ. ಮಡದಿಯ ಪ್ರೇಮಕ್ಕೆ ನಿಮ್ಮದೊಂದು ಉಡುಗೊರೆ ನೀಡುವುದರಿಂದ ಅವರಿಗೆ ತುಂಬಾ ಸಂತೋಷವಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಇಂದು ನಿಮ್ಮ ಕುಟುಂಬದಲ್ಲಿ ಸಂತೋಷಕರ ಪ್ರಸಂಗಗಳು ನಡೆಯಲಿದೆ. ನಿಮ್ಮ ಕೆಲವು ಕೆಲಸಗಳಿಗೆ ಇಲ್ಲಸಲ್ಲದ ಆರೋಪ, ಅಪಹಾಸ್ಯ ಬರಬಹುದು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ಬಂಡವಾಳದ ಸಮಸ್ಯೆ ನಿಮಗೆ ಕಾಡಬಹುದು. ನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳು ನಿಮಗೆ ಸಹಾಯ ನೀಡಲಿದ್ದಾರೆ. ವಂಚನೆಯ ಮಾತುಗಳಿಗೆ ಮರಳಾಗಿ ಇದ್ದಿದ್ದನ್ನು ಕಳೆದುಕೊಂಡು ಹೋಗುವ ಸ್ಥಿತಿ ನಿಮ್ಮದಾಗಬಹುದು ಎಚ್ಚರವಿರಲಿ. ವ್ಯವಹಾರದಲ್ಲಿ ನಿಖರ ಲಾಭದ ಲೆಕ್ಕಾಚಾರ ಹಾಗೂ ಭವಿಷ್ಯದ ರೂಪರೇಷೆ ಎರಡನ್ನು ಸಿದ್ಧಪಡಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಮಾತುಗಳು ಅವಕಾಶ ಹಾಗೂ ಸಂಪರ್ಕ ಹೆಚ್ಚು ಮಾಡಲಿದೆ. ಹಳೆಯ ವ್ಯಾಜ್ಯಗಳು ನಿವಾರಣೆಯಾಗಲಿದೆ. ಪೂರ್ವಿಕರ ನೆಲೆ ಸಿರಿ ಸಂಪತ್ತು ರಕ್ಷಣೆ ಮಾಡುವುದು ನಿಮ್ಮ ಜವಾಬ್ದಾರಿ ಆದಕಾರಣ ಯಾವುದೇ ಒತ್ತಡವಿದ್ದರೂ ಕಳೆದುಕೊಳ್ಳುವಂತಹ ದುಸ್ಥಿತಿಗೆ ಹೋಗಬೇಡಿ. ಮಾಡುವ ಕೆಲಸದಲ್ಲಿ ವಿಚಾರವಂತಿಕೆ ಹಾಗೂ ಸಮಾಧಾನದ ವರ್ತನೆ ಅವಶ್ಯಕವಾಗಿದೆ. ಅಗತ್ಯವಿಲ್ಲದ ಕೆಲಸಕ್ಕೆ ಕೈ ಹಾಕಿ ಹಣಕಾಸಿನ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಚ್ಚರವಿರಲಿ.
ಶುಭಸಂಖ್ಯೆ 5
ಗಿರಿಧರ ಶರ್ಮ 9945098262
ತುಲಾ ರಾಶಿ
ನಿಮ್ಮ ಸ್ವಇಚ್ಛೆಯಿಂದ ಹಾಗೂ ಯೋಜನೆಯ ಸ್ಪಷ್ಟತೆಯಿಂದ ಆರ್ಥಿಕವಾಗಿ ಸಬಲಗೊಳ್ಳುವಿರಿ. ಅನಿರೀಕ್ಷಿತವಾಗಿ ನಡೆಯುವ ಪ್ರಮಾದಗಳು ನಿಮ್ಮ ಮನಃಸ್ಥಿತಿಯನ್ನು ಕುಗ್ಗಿಸಬಹುದು. ಒಡಹುಟ್ಟಿದವರಲ್ಲಿ ವಿರಸ ಹೆಚ್ಚಾಗುವ ಸಾಧ್ಯತೆ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಸೋತು ಗೆಲ್ಲಲು ಪ್ರಯತ್ನಿಸುವುದು ಜಾಣ್ಮೆಯ ನಡೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ನಿಮ್ಮ ಹೂಡಿಕೆಗಳು ಸಾಕಷ್ಟು ಲಾಭ ತಂದು ಕೊಡಲಿದೆ. ಕುಟುಂಬದಲ್ಲಿ ನಿಮ್ಮ ಮುತುವರ್ಜಿಯಿಂದ ಶುಭಕಾರ್ಯ ಜರುಗಬಹುದು. ಪತ್ನಿಯ ಪ್ರೇಮದಲ್ಲಿ ಅದ್ಭುತ ಹಾಗೂ ಸಂತೋಷದ ಕ್ಷಣಗಳು ಇಂದು ಅನುಭವಿಸುವಿರಿ. ಇನ್ನೂ ನಿಮಗೆ ಸಿಗಲಿರುವ ಹಣಕಾಸಿನಿಂದ ಅತ್ಯಂತ ಉಪಯುಕ್ತವಾದ ಕಾರ್ಯಗಳಿಗೆ ಕೈ ಹಾಕುವಿರಿ. ಕೆಲಸದ ಒತ್ತಡ ಹೆಚ್ಚಾಗಲಿದೆ ಇದರಿಂದ ಆರೋಗ್ಯದಲ್ಲಿ ಏರಿಳಿತ ಕಾಣಬಹುದು ಸೂಕ್ತ ವಿಶ್ರಾಂತಿ ಇದಕ್ಕೆ ಮದ್ದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಮಕ್ಕಳ ವಿದ್ಯೆಯಲ್ಲಿ ಉತ್ತಮ ನಿರ್ವಹಣೆ ನಡೆಯಲಿದೆ. ಪ್ರವಾಸ ಮಾಡುವ ಮನಸ್ಥಿತಿಯಲ್ಲಿ ನೀವು ಇರಬಹುದು. ಪರಿಣಿತರ ಸಹಾಯದ ಹೂಡಿಕೆ ಲಾಭಾಂಶ ಹೆಚ್ಚಿಸಲಿದೆ. ನಿಮ್ಮ ಕಾರ್ಯ ಬದ್ಧ ಯೋಜನೆ ಹಾಗೂ ವ್ಯವಸ್ಥಿತ ತಂತ್ರಗಾರಿಕೆ ಇತರರಿಗೆ ಅದ್ಭುತವಾಗಿ ಕಾಣಲಿದೆ. ನಿಮ್ಮ ಮಡದಿಯ ಸೂಕ್ಷ್ಮ ನೋಟ ನಿಮ್ಮಲ್ಲಿ ಪ್ರಣಯದ ಆಸಕ್ತಿ ಹೆಚ್ಚಿಸುತ್ತದೆ. ದಿಡೀರನೆ ನಿಮ್ಮ ಮನಸ್ಸಿನಲ್ಲಿ ಒಂದು ಸ್ವಾದಿಷ್ಟ ವಿಷಯ ಮನೆಮಾಡುತ್ತದೆ ಇದು ಲಾಭಕಾರಿ ಅಂಶ ಕೂಡ ಹೌದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬದ ಸಂತೋಷದ ಘಳಿಗೆಯನ್ನು ನೀವು ಸಹ ಸವಿಯುವುದು ಒಳ್ಳೆಯದು. ನಿಮ್ಮ ನಿರ್ದಿಷ್ಟ ಯೋಜನೆಯನ್ನು ಇತರರೊಡನೆ ಹಂಚಿಕೊಳ್ಳುವುದು ಬೇಡ. ಭೂಮಿಗೆ ಸಂಬಂಧಪಟ್ಟಂತ ವ್ಯಾಜ್ಯಗಳನ್ನು ನಿಮ್ಮಲ್ಲಿಯೇ ಬಗೆಹರಿಸಿಕೊಳ್ಳಿ. ಕೆಲಸದ ಚೈತನ್ಯವು ಇಂದು ದಿನವಿಡಿ ಇರಲಿದೆ, ಇದರಿಂದ ಉದ್ಯೋಗದಲ್ಲಿ ಕೊಟ್ಟಿರುವ ಜವಾಬ್ದಾರಿಯನ್ನು ಅನಾಯಾಸವಾಗಿ ಮಾಡಿಮುಗಿಸುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕುಂಭ ರಾಶಿ
ಸಮಾಜಮುಖಿ ಚಿಂತನೆಗಳು ಸ್ಥಾನಮಾನ ನೀಡಲಿದೆ. ಅನಿರೀಕ್ಷಿತವಾಗಿ ಭೇಟಿಯಾಗುವ ಸ್ನೇಹಿತರೊಡನೆ ಆನಂದದಾಯಕ ಕ್ಷಣಗಳು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ನೀವು ಮಾಡುತ್ತಿರುವ ಕೆಲಸದಲ್ಲಿ ಇಂದು ಲಾಭ ಗಳಿಕೆ ಹೆಚ್ಚಾಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ಚಂಚಲತೆಯನ್ನು ಬದಿಗಿಟ್ಟು ಕೆಲಸದ ಕಡೆ ಗಮನವಹಿಸಿ. ನಿಮ್ಮ ಉದ್ಯೋಗದಲ್ಲಿ ಗ್ರಾಹಕರ ಬದ್ಧತೆ ಹಾಗೂ ಯೋಜನೆಯ ವಿಸ್ತರಣೆ ಬಗ್ಗೆ ಚಿಂತಿಸುವ ಅಗತ್ಯವಿದೆ. ಆಲಸ್ಯದಿಂದ ನಿಮ್ಮ ಕೆಲಸ ಸ್ಥಗಿತಗೊಳ್ಳಬಹುದು ಎಚ್ಚರವಿರಲಿ. ನಿಮ್ಮ ನಿರೀಕ್ಷಿತ ವಹಿವಾಟು ಫಲಿತಾಂಶ ನೀಡುವುದಿಲ್ಲ. ಹಳೆಯ ಹೂಡಿಕೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262