ಬುಧನ ಸ್ಥಾನ ಪಲ್ಲಟ ಯಾವ್ಯಾವ ರಾಶಿಗೆ ಅದೃಷ್ಟ ಗೊತ್ತೆ.?
ಜೂನ್ 21ರ ನಂತರ ಬುಧನ ಸ್ಥಾನ ಬದಲಾವಣೆ ಮೂರು ರಾಶಿಗಳಿಗೆ ಬಂಪರ್
ಜೂನ್ 21ರ ನಂತರ ಮಿಥುನ ರಾಶಿ ಇಂದ ಕರ್ಕಾಟಕ ರಾಶಿಗೆ ಬುಧನು ಪ್ರವೇಶ ಮಾಡಲಿದ್ದಾನೆ ಇದರಿಂದ ದ್ವಾದಶ ರಾಶಿಗಳಲ್ಲಿ ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.
ಮಿಥುನ ರಾಶಿ
ರಾಶ್ಯಾಧಿಪತಿಯಾದ ಬುಧನು ಎರಡನೇ ಸ್ಥಾನದಲ್ಲಿ ಅಂದರೆ ಧನಸ್ಥಾನದಲ್ಲಿ ಇರುವನು ಆರ್ಥಿಕವಾಗಿ ಧನಲಾಭ ಆಗಲಿದೆ. ಸ್ವಂತ ಪರಿಶ್ರಮದಿಂದ ಸಂಪತ್ತು ಹೆಚ್ಚಲಿದೆ. ವ್ಯವಹಾರದಲ್ಲಿ ಬುದ್ಧಿವಂತಿಕೆ ನಿಮಗೆ ಲಾಭ ತಂದುಕೊಡಲಿದೆ. ನೀವು ಬಯಸದೆ ಇದ್ದರು ಭೋಗವಿಲಾಸಿ ವಸ್ತುಗಳು ಉಡುಗೊರೆಯಾಗಿ ಬರಲಿದೆ. ಪಂಡಿತರಿಗೆ ಕವಿಗಳಿಗೆ ಸೂಕ್ತ ವೇದಿಕೆ ಹಾಗೂ ಸನ್ಮಾನಗಳು ದೊರೆಯುವ ಅವಕಾಶವಿದೆ. ಕಡು ಹಸಿರು ವರ್ಣದ ಬಟ್ಟೆಗಳನ್ನು ಧರಿಸುವುದರಿಂದ ಯೋಜಿತ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಬರಲಿದೆ. ಪಚ್ಚೆ ರತ್ನಗಳ ಧರಿಸುವುದರಿಂದ ಸಮೃದ್ಧತೆ ಕಾಣಬಹುದಾಗಿದೆ.
ಕನ್ಯಾ ರಾಶಿ
ಬುಧನು ಕರ್ಕಾಟಕ ರಾಶಿಯಲ್ಲಿದ್ದು ಕನ್ಯಾ ರಾಶಿಯವರಿಗೆ ಹನ್ನೊಂದನೇ ಸ್ಥಾನ ಅಂದರೆ ಲಾಭ ಸ್ಥಾನದಿಂದ ಶುಭ ಗೋಚಾರ ಫಲಗಳನ್ನು ನೀಡಲಿದ್ದಾನೆ. ಕುಟುಂಬದಲ್ಲಿ ಸೌಖ್ಯದ ವಾತಾವರಣ ಇರಲಿದೆ. ಸಾಹಸ ಕಾರ್ಯದಲ್ಲಿ ಶೌರ್ಯದಿಂದ ಮುನ್ನಡೆಯುವಿರಿ. ಮಾತುಗಾರಿಕೆಯಿಂದ ಯೋಜನೆಗಳ ಲಾಭ ಪಡೆಯುವಿರಿ. ಅಧಿಕಾರಿಗಳ ಸಂಪರ್ಕ ಉತ್ತಮ ರೀತಿಯಲ್ಲಿ ಸಂಪಾದನೆ ಆಗುತ್ತದೆ. ಪಿತ್ರಾರ್ಜಿತ ಆಸ್ತಿಗಳು ಕೈಸೇರಲಿದೆ. ಆಭರಣಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಸಮಾಜದಲ್ಲಿ ಗೌರವ ಪ್ರಶಂಸೆಗೆ ಪಾತ್ರರಾಗುವರು. ಶ್ರೀ ಮಹಾವಿಷ್ಣುವನ್ನು ಧ್ಯಾನಿಸುವುದುರಿಂದ ನಿಮ್ಮ ರಾಜಕೀಯ ಸಾಮಾಜಿಕ ಜೀವನ ಉತ್ತಮಗೊಳ್ಳುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಬುಧನೂ ದಶಮ ಸ್ಥಾನದಲ್ಲಿ ಅಂದರೆ ಕರ್ಮ ಸ್ಥಾನದಲ್ಲಿ ಇರುವನು ಇದರಿಂದ ನಿಮ್ಮಲ್ಲಿ ದಾರಿದ್ರ್ಯ ನಿವಾರಣೆಯಾಗಿ ಶ್ರೀಮಂತಿಕೆ ಬರಲಿದೆ. ಕಲಾಕ್ಷೇತ್ರದ ಕರ್ಮಿಗಳಿಗೆ ಅವಕಾಶ ಹೆಚ್ಚಾಗಲಿದೆ. ಸ್ವಾಭಿಮಾನದ ಜೀವನ ನಡೆಸುವ ಅಭಿಲಾಷೆ ಪೂರ್ಣಗೊಳ್ಳುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಒಲವು ಹೆಚ್ಚಾಗಲಿದೆ. ಕುಟುಂಬದಲ್ಲಿ ಹಾಗು ವೃತ್ತಿ ಕ್ಷೇತ್ರದಲ್ಲಿ ಹಸನ್ಮುಖದಿಂದ ಇರುವಿರಿ. ಆರೋಗ್ಯಯುತ ಜೀವನ ಸಾಗಿಸುತ್ತೀರಿ. ವಂಶ ಪ್ರತಿಷ್ಠೆ ಕುಲಗೌರವ ಕೀರ್ತಿಯನ್ನು ಬೆಳೆಸುವಿರಿ. ಹೆಸರುಕಾಳನ್ನು ದಾನ ಮಾಡುವುದರಿಂದ ನಿಮ್ಮ ಮನದ ಇಚ್ಛೆಯ ಕಾರ್ಯಗಳು ಪೂರ್ಣಗೊಳ್ಳಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ
9945098262