ಸ್ವಾತಂತ್ರ್ಯ ಹೋರಾಟದಲ್ಲಿ ಘರ್ಜಿಸಿದ್ದ ಮಹಿಳೆಯರು…!!
ಸ್ವಾತಂತ್ರ ದಿನಾಚರಣೆ ವಿಶೇಷ
ಸ್ವಾತಂತ್ರ್ಯ ಹೋರಾಟದಲ್ಲಿ ಘರ್ಜಿಸಿದ ಮಹಿಳೆಯರು…!!
ಸ್ವಾತಂತ್ರ್ಯ ಎಂಬ ಮೂರು ಅಕ್ಷರಗಳು ಇದು ಕೇವಲ ಅಕ್ಷರವಲ್ಲಾ. ಇದು ಪ್ರತಿಯೊಬ್ಬರ ಹಕ್ಕು. ಸ್ವಾತಂತ್ರ್ಯ ಕೇವಲ ಒಬ್ಬ ವ್ಯಕ್ತಿಯಿಂದ ಸಿಕ್ಕಿಲ್ಲಾ. ಸ್ತ್ರೀ ಪುರುಷ ಎನ್ನುವ ಭೇದವಿಲ್ಲದೆ ಸ್ವಾತಂತ್ರ್ಯಕ್ಕಾಗಿ ಅನೇಕ ಬಲಿದಾನಗಳು ಆಗಿವೆ. ಅದರಲ್ಲೂ ವಿಶೇಷವಾಗಿ ಆದಿ ಕಾಲದಿಂದಲೂ ಮಹಿಳೆಯರು ತಮ್ಮ ಹಕ್ಕು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಇಂದಿಗೂ ಮಾಡುತ್ತಲಿದ್ದಾರೆ.
ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುವಳೆಂಬ ಹೇಳಿಕೆಯಂತೆ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿದ ಅನೇಕ ಮಹಿಳೆಯರ ಪಾತ್ರ ಸ್ಮರಣೀಯವಾಗಿದೆ. ನಾವು ಕೇವಲ ಬೆರಳು ಎಣಿಕೆಯಷ್ಟು ಮಹಿಳಾ ಹೋರಾಟಗಾರ್ತಿಯರನ್ನು ನೆನಪಿಸಿಕೊಳ್ಳುತ್ತೇವೆ.ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಎಲೆಮರೆ ಕಾಯಿಗಳಂತೆ ಜೀವತೇಯ್ದ ಸಾವಿರಾರು ಮಹಿಳೆಯರಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ಬೀಡಿ, ಅದೆಷ್ಟೋ ಮಂದಿಗೆ ಹೆಸರು ಸಹ ತಿಳಿದಿಲ್ಲ.
ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬೇಗಂ ಹಜರತ್‌ಮಹಲ್, ಲಕ್ಷ್ಮಿಸ್ವಾಮಿನಾಥನ್, ವಿಜಯಲಕ್ಷ್ಮಿ ಪಂಡಿತ್, ಅಕ್ಕಮ್ಮ ಚರಿಯನ್, ಅರುಣಾ ಅಸಫ್‌ಅಲಿ, ಕೇರಳದ ಕುಟ್ಟಮ್ಮಾಳಮ್ಮ, ದುರ್ಗಾಬಾಯಿ ಮುಂತಾದವರನ್ನು ನಾವು ಮರೆಯಬಾರದು.
ನಮ್ಮ ಅದೇಶದ ಸ್ವಾತಂತ್ರ್ಯ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ ಅದೊಂದು ಆರ್ಥಿಕ ಮತ್ತು ಸಾಮಾಜಿಕ ಹೋರಾಟವಾಗಿತ್ತು. ಬ್ರಿಟಿಷರ ಆಡಳಿತ ಅಳಿಯಲಿ, ನಮ್ಮ ದೇಶದ ಆಡಳಿತ ನಾವು ಮಾಡಬೇಕು, ರಾಜಕೀಯ ಅಧಿಕಾರ ನಮ್ಮ ಕೈಗೆ ಬರಬೇಕೆಂದು ಒಂದು ಕಡೆ ಹೋರಾಟ ನಡೆದರೆ, ಮತ್ತೊಂದು ಕಡೆ ಪಾಲುಗಾರಿಕೆ ಪದ್ಧತಿ ಹೋಗಬೇಕು ಎನ್ನುವ ಆರ್ಥಿಕ ಹೋರಾಟವೂ ನಡೆಯಿತು.
ಇದರ ಜೊತೆಜೊತೆಯಲ್ಲಿ ಸಾಮಾಜಿಕ ಅನಿಷ್ಟ ಪದ್ದತಿಗಳಾದ ಸತಿ ಸಹಗಮನ, ವರದಕ್ಷಿಣೆ, ಬಾಲ್ಯವಿವಾಹ , ಅಸ್ಪ್ರುಶ್ಯತೆ ಇತ್ಯಾದಿಗಳ ವಿರುದ್ದ ಸಾಮಾಜಿಕ ಹೋರಾಟವೂ ನಡೆಯಿತು. ಈ ಹೋರಾಟದಲ್ಲಿ ಎಲ್ಲಾ ಧರ್ಮದ, ಜಾತಿಯ, ಭಾಷೆಯ ಹಾಗು ವರ್ಗಗಳ ಜನರು ತೊಡಗಿಸಿಕೊಂಡಿದ್ದರು.
ಈ ಹೋರಾಟದಲ್ಲಿ ವಿಶೇಷವೆಂದರೆ ಅಲ್ಪಸಂಖ್ಯಾತರು, ದಲಿತರು ಮತ್ತು ಗಿರಿಜನರು ಧುಮುಕಿದ್ದದ್ದರು, ಮನೆಯಿಂದ ಹೊರಬರುವ ಸ್ವಾತಂತ್ರ್ಯವಾಗಲಿ, ಸಾಮಾಜಿಕ ಆಗುಹೋಗುಗಳಲ್ಲಿ ಭಾಗವಹಿಸುವ ಅವಕಾಶವಾಗಲಿ ಮಹಿಳೆಯರ ಪಾಲಿಗೆ ಇರಲಾರದ ಸಮಯದಲ್ಲಿ ಭಾರತೀಯ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
ಸ್ವಾತಂತ್ರ್ಯ ಹೋರಾಟ ಚಳುವಳಿಯಲ್ಲಿ ಗಾಂಧೀಜಿ ಪ್ರವೇಶಿಸಿದರು, ನಂತರದ ದಿನಗಳಲ್ಲಿ ತಮ್ಮ ಜೊತೆಗೆ ಮಹಿಳೆಯರನ್ನು ಇಳಿಸಿದರು. ದಂಡಿ ಸತ್ಯಾಗ್ರಹದಲ್ಲಿ ಮಹಿಳೆಯರನ್ನು ಬೃಹತ್ ಪ್ರಮಾಣದಲ್ಲಿ ಹೋರಾಟಕ್ಕೆ ಇಳಿಯುವಂತೆ ಮಾಡಿತು. ಫುಲೆ ಹಾಗೂ ಅಂಬೇಡ್ಕರ್ ರ ಪ್ರವೇಶ ಮಹಿಳೆಯರ ಪರ ಗಮನ ಹರಿಸುವಂತಾಯಿತು.
ಎಡಪಂಥಿಯ ಹೋರಾಟಗಳಾದ ತೆಲಂಗಾಣ ಹೋರಾಟ, ತೇಬಾಗ್ ಹೋರಾಟ, ಪುನ್ನಪ್ರ ವಯಲರ್ ಹೋರಾಟ, ಕಯ್ಯುರು ಹೋರಾಟ ಇತ್ಯಾದಿಗಳು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳುವಿಕೆಗೆ ಸಾಧ್ಯವಾಯಿತು. ಈ ಚಳುವಳಿಕೆಗಳು ಮಹಿಳೆಯರಿಗೆ ಪ್ರೇರಕ ಶಕ್ತಿಯನ್ನು ತುಂಬಿದವು.
ಅನ್ನಿಬೇಸೆಂಟ್, ನಿವೇದಿತಾ,ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ತಾರಾದೇವಿ ಸಿಂಧೆ, ವಿಜಯಲಕ್ಷ್ಮಿ ಪಂಡಿತ್, ವಿಮಲಾ ರಣದಿವೆ, ಅಹಲ್ಯ ರಂಗ್ಣೆಕರ್, ಲಕ್ಷ್ಮಿ ಸೆಹೆಗಲ್ ರಂತಹ ವೀರ ವನಿತೆಯರು ಮಹಿಳಾಪರ ಹೋರಾಟಗಾರ್ತಿಯರಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು.
೧೯೨೮ ರಲ್ಲಿ ನಡೆದ ಬಾರ್ಡೋಲಿ ಸತ್ಯಾಗ್ರಹದಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ‘ಸ್ವಾತಂತ್ರ್ಯದ ಗುರಿ ಸಾಧನೆಗೆ ತನ್ನ ಪ್ರಾಮಾಣಿಕತೆ, ಸರಳತೆ, ಚಿಂತನೆ, ನಿಖರತೆಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಮರ್ಥರು’. ಎಂದು ಸತ್ಯಾಗ್ರಹದ ಸಭೆಯನ್ನು ಉದ್ದೇಶಿಸಿ ಸರದಾರ್ ವಲ್ಲಬಾಯಿ ಪಟೇಲರು ಮಾತನಾಡಿದರು.
ಈಗಾಗಲೇ ಹೇಳಿದಂತೆ ಭಾರತದ ರಾಷ್ಟ್ರೀಯ ಚಳುವಳಿ ಕೇವಲ ರಾಜಕೀಯ ಚಳುವಳಿಯಾಗಿರದೆ ಅದೊಂದು ಸಾಮಾಜಿಕ ಚಳುವಳಿಯೂ ಆಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ, ಕ್ರೌರ್ಯ, ಹಿಂಸೆ ಎಲ್ಲ ರೀತಿಯ ಅಸಮಾನತೆಯ ವಿರುದ್ದ ಅನೇಕ ಮಹನೀಯರು ಮತ್ತು ಸಂಘ ಸಂಸ್ಥೆಗಳು ಧ್ವನಿ ಎತ್ತಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ಮಹಿಳೆಯರ ಬದುಕಿನ ಬೆಳಕಿನ ಸೂರ್ಯ ಮೂಡಿ ಬಂತು. ಬ್ರಿಟಿಷ್ ಸರ್ಕಾರ ಈ ಹೋರಾಟಗಳ ಒತ್ತಡಕ್ಕೆ ಮಣಿದು ಹೊಸ ಕಾನೂನುಗಳನ್ನು ರಚಿಸಿತು.
ಅವುಗಳಲ್ಲಿ ಪ್ರಮುಖವಾದವೆಂದರೆ: ಬಾಲೆಯರ ಬಲಿ ನಿಷೇಧ ಕಾಯಿದೆ, ಬೆಂಗಾಲ್ ಸತಿ ಪದ್ದತಿ ಸುಧಾರಣಾ ಕಾಯ್ದೆ ೧೮೨೯, ಹಿಂದೂ ವಿಧವೆಯರ ಮರುಮದುವೆ ಕಾಯ್ದೆ ೧೮೫೬, ಹಿಂದೂ ಮಹಿಳಾ ಆಸ್ತಿಯ ಹಕ್ಕು ಕಾಯ್ದೆ ೧೯೩೭, ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿವಾಹ ವಿಚ್ಹೆಧನ ಕಾಯ್ದೆ ೧೮೬೯, ಭಾರತೀಯ ವಾರಸುದಾರಿಕೆ ಕಾಯ್ದೆ ೧೯೩೬, ವರದಕ್ಷಿಣೆ ನಿಷೇಧ ಕಾಯ್ದೆ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ, ಮಹಿಳಾ ಜೇವನಾಂಶದ ಹಕ್ಕು ಕಾಯ್ದೆ, ಆನಂದ ವಿವಾಹ ಹಕ್ಕು ಕಾಯ್ದೆ ೧೯೦೯, ಮುಸ್ಲಿಂ ಮದುವೆ ವಿಚ್ಚ್ಧನ ಕಾಯ್ದೆ ೧೯೩೯, ಪಾರಸಿ ಮದುವೆ ಮತ್ತು ವಿಚ್ಹೇಧನ ಕಾಯ್ದೆ ೧೯೩೭, ವಿಶೇಷ ಮದುವೆ ಕಾಯ್ದೆ ೧೮೭೨, ಆರ್ಯ ಮದುವೆ ಊರ್ಜಿತ ಕಾಯ್ದೆ ೧೯೩೭, ಭಾರತೀಯ ಕ್ರೈಸ್ತ ಮದುವೆ ಕಾಯ್ದೆ ೧೮೭೨, ಮದುವೆ ಊರ್ಜಿತ ಕಾಯ್ದೆ ೧೮೯೨, ಭಾರತೀಯ ಪೀನಲ್ ಕೋಡ್ ೧೮೬೦, ಕ್ರಿಮಿನಲ್ ಪ್ರೋಸಿಜರ್ ಕೋಡ್, ಮಹಿಳಾ ಅಸಮಾನತೆ, ೧೯೪೨ರಲ್ಲಿ ಪ್ರಾರಂಭವಾದ ‘ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಅರುಣಾ ಆಸಫ್ ಅಲಿಯವರ ಪಾತ್ರ ಬಹುಮುಖ್ಯವಾದದ್ದು.
ಕಾಂಗ್ರೆಸ್ಸ್ ಪಕ್ಷ ಸ್ಥಾಪಿಸಿದ್ದ ರೇಡಿಯೋ ಪ್ರಸಾರದ ಹೊಣೆ ಹೊತ್ತ ಉಷಾ ಮೆಹತಾರವರು ನಾಲ್ಕು ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾದರು. ರಜಿಯಾ ಸುಲ್ತಾನ, ಲೇಡಿ ಸಾರತ್ ಜುಲೇಕ ಬೇಗಮ್, ನಿಶಾ ಬೇಗಂ, ಜುಬೇದ ದಾವುದಿ ಹಾಗೂ ಇನ್ನೂ ಅನೇಕ ಮುಸ್ಲಿಂ ಮಹಿಳೆಯರು ವಿವಿಧ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಇಂತಹ ಮಹತ್ವದ ಸಾಧನೆಗೈದ ವೀರ ವನಿತೆರನ್ನು ನಾವು ಮರೆಯಬಾರದು. ಪ್ರತಿದಿನ ಅಲ್ಲದೆ ಇದ್ದರು ವರ್ಷಕ್ಕೊಮ್ಮೆ ಆದರೂ ನೆನೆಯೋಣ. ನಮ್ಮ ಮಕ್ಕಳಿಗೆ ಇವರ ತ್ಯಾಗ ಬಲಿದಾನವನ್ನು ತಿಳಿಸೋಣ. ಇಂತಹ ಸ್ಪೂರ್ತಿ ನೀಡುವ ಧೀಮಂತ ಮಹಿಳೆಯರ ಇತಿಹಾಸವನ್ನು ಅರೀತು ಭವ್ಯ ಭಾರತದ ಇಂದಿನ ಅಭಿವೃದ್ಧಿಯಲ್ಲಿ ನಾವೆಲ್ಲ ಮಹಿಳೆಯರು ಶಕ್ತಿವಂತರಾಗುವವುದು ಅಗತ್ಯವಿದೆ.
-ಕಾಂಚನಾ. ಬಿ. ಪೂಜಾರಿ.
ಕ.ರಾ.ಅ.ಮ.ವಿವಿಯ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ
ದ್ವಿತೀಯ ವರ್ಷದ ವಿದ್ಯಾರ್ಥಿನಿ
ವಿಜಯಪುರ.
ಒಳ್ಳೆಯ ಮಾಹಿತಿಯ ಬರಹ. ಲೇಖಕಿಗೂ ಮತ್ತು ವಿನಯವಾಣಿ ಪತ್ರಿಕೆಗೆ ಅಭಿನಂದನೆಗಳು