ವಿನಯ ವಿಶೇಷಸರಣಿ

ವಿನಯವಾಣಿ ಯಲ್ಲಿ ಓದಿ ದಿನ ಭವಿಷ್ಯ

ಶ್ರೀ ಮಹಾವಿಷ್ಣುವನ್ನು ಸ್ಮರಿಸುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ರೇವತಿ
ಋತು : ಗ್ರೀಷ್ಮ
ರಾಹುಕಾಲ 12:31 – 14:08
ಗುಳಿಕ ಕಾಲ 10:54 – 12:31
ಸೂರ್ಯೋದಯ 06:02:21
ಸೂರ್ಯಾಸ್ತ 19:00:02
ತಿಥಿ : ನವಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಜೀವನದಲ್ಲಿ ಮಹತ್ವದ ತಿರುವು ಸಿಗುವ ಅವಕಾಶ ಕಂಡುಬರುತ್ತದೆ. ಹೆಚ್ಚಿನ ಕೆಲಸಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಮೃದ್ಧ ಪಡಿಸಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ನಿಮ್ಮಿಂದ ನಡೆಯಲಿ. ಪ್ರೇಮಿಗಳಿಗೆ ನಿರೀಕ್ಷಿತ ಗೆಲುವು ಲಭಿಸುವುದು ಕಷ್ಟವಾಗಿದೆ. ಹೂಡಿಕೆ ಮಾಡುವಾಗ ಸ್ವಲ್ಪ ಸಮಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಶುಭ ಕಾರ್ಯ ನಡೆಸುವ ಮನಸ್ಥಿತಿ ನಿಮ್ಮಲ್ಲಿ ಬರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ವೃಷಭ ರಾಶಿ
ಸಾಂಪ್ರದಾಯಕ ಕಲೆಗಳಿಗೆ ಹಾಗೂ ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಲಭಿಸಲಿದೆ. ವೃತ್ತಿಪರತೆಯ ಕೆಲಸಗಳಿಂದ ಲಾಭಾಂಶ ಕಂಡುಬರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಬಹುದು. ವಿನಾಕಾರಣ ಬಂಧುಗಳಿಂದ ಸಮಸ್ಯೆ ಬರಬಹುದಾಗಿದೆ. ಉದ್ಯೋಗದಲ್ಲಿ ಮಾನಸಿಕ ಸಮಸ್ಯೆ ಕಾಡಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ಆತ್ಮೀಯರು ಇಟ್ಟಿರುವ ವಿಶ್ವಾಸವನ್ನು ನೀವು ಕಾಪಾಡಿಕೊಳ್ಳುತ್ತೀರಿ. ಶೈಕ್ಷಣಿಕ ಅಧ್ಯಯನದಲ್ಲಿ ಉತ್ತಮ ಮಟ್ಟದ ಸಾಧನೆಯಾಗಲಿದೆ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಹಾಡುಗಳಿಂದ, ಸಭಾ ಗೋಷ್ಠಿ ಗಳಿಂದ, ಪುಸ್ತಕ ಅಧ್ಯಯನದಿಂದ ಹೊಸತನವನ್ನು ಪಡೆಯಲಿದ್ದೀರಿ. ಬಂಧುಮಿತ್ರರ ಹಿತಾಸಕ್ತಿಗೆ ನೀವು ಶ್ರಮಪಡುವ ಸಾಧ್ಯತೆ ಕಾಣಬಹುದು, ಇದರಿಂದ ನಿಮ್ಮ ಮತ್ತು ಅವರ ನಡುವಿನ ವಿಶ್ವಾಸ ಹೆಚ್ಚಾಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿಮ್ಮ ಸ್ವಸಾಮರ್ಥ್ಯದಿಂದ ಬಹುದೊಡ್ಡ ಯೋಜನೆಯನ್ನು ಆಯ್ದುಕೊಳ್ಳಬಹುದು ಇದು ಮಹತ್ವದ ಬದಲಾವಣೆ ತರಲಿದೆ. ಶ್ರದ್ದೆ ಮತ್ತು ಸಂಯಮದಿಂದ ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಕೆಲವರು ನಿಮ್ಮ ಹಿತಾಸಕ್ತಿಗೆ ಧಕ್ಕೆ ತರಲು ಕಾಯುತ್ತಿರಬಹುದು ಆದಷ್ಟು ಎಚ್ಚರಿಕೆಯಿಂದಿರಿ. ನಿಮ್ಮ ವ್ಯಾಜ್ಯಗಳು ಇತ್ಯರ್ಥವಾಗುವ ಲಕ್ಷಣ ಗೋಚರಿಸುತ್ತಿದೆ. ಮಾನಸಿಕ ಚೈತನ್ಯ ಉತ್ತಮವಾಗಿರುತ್ತದೆ. ಪತ್ನಿಯೊಡನೆ ಪ್ರೀತಿಯ ಮಾತಿನ ಮೂಲಕ ಸಂತೋಷ ಕಂಡುಕೊಳ್ಳುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ನೀವು ವ್ಯಾಯಾಮದಂತಹ ಅಥವಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಆಸೆ ಆಮಿಷಗಳಿಗೆ ನೀವು ಸರಳವಾಗಿ ಹಳ್ಳಕ್ಕೆ ಬೀಳಬಹುದು ಎಚ್ಚರವಿರಲಿ. ಉದ್ಯೋಗದಲ್ಲಿ ಕಿರಿ-ಕಿರಿ ಅನುಭವಿಸಬೇಕಾದ ಸಂದರ್ಭವಿದೆ. ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನಿಮ್ಮ ವ್ಯಕ್ತಿತ್ವ ವಿಶೇಷವಾಗಿಸುತ್ತದೆ. ಜಮೀನು ಜಾಗದಲ್ಲಿ ಸಮಸ್ಯೆಗಳು ಬರಬಹುದಾದ ಸಾಧ್ಯತೆಯಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಭವಿಷ್ಯದ ಭದ್ರ ಬುನಾದಿಗೆ ನಿಮ್ಮ ನಡೆ ಉತ್ತಮವಾಗಿ ಸಾಗಲಿದೆ. ನಿಮ್ಮ ಕೆಲವು ಸ್ವಭಾವಗಳನ್ನು ಮಾರ್ಪಡಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಆತ್ಮೀಯರು ನಿಮ್ಮ ಯೋಜನೆಗಳಿಗೆ ಸಹಕಾರ ನೀಡಲಿದ್ದಾರೆ. ನಿಮ್ಮ ಕೆಲಸವನ್ನು ನೀವೇ ಮಾಡುವುದು ಉತ್ತಮ. ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಡಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ತುಲಾ ರಾಶಿ
ನವೀನ ಚಿಂತನೆಗಳ ನಿಮ್ಮ ಕಲ್ಪನೆಯು ಸಾಕಾರಗೊಳ್ಳುವ ಲಕ್ಷಣಗಳು ಗೋಚರಿಸುತ್ತವೆ. ಉದ್ಯೋಗ ವಲಯದಲ್ಲಿ ಶುಭಫಲಗಳನ್ನು ಈದಿನ ಕಾಣಬಹುದು.ದೂರದೂರಿನ ಪ್ರಯಾಣ, ವಿದೇಶ ಪ್ರವಾಸ ಇನ್ನಿತರ ನಿಮ್ಮ ಕಾರ್ಯಗಳಿಗೆ ವೇಗ ಸಿಗಲಿದೆ. ಬಂದಂತ ಹಣಕಾಸನ್ನು ಉಳಿತಾಯಕ್ಕೆ ಪ್ರೇರಣೆ ನೀಡಿ. ಪತಿ-ಪತ್ನಿಯರ ಅವಿನಾಭಾವ ಸಂಬಂಧವು ಹಾಲುಜೇನಿನಂತೆ ಪ್ರಜ್ವಲಿಸಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಚಿಕ ರಾಶಿ
ಮಾನಸಿಕವಾದ ಯೋಚನೆಗಳು ಹೆಚ್ಚಾಗಬಹುದು. ಭಯಗ್ರಸ್ಥ ವಾತಾವರಣ ನಿಮಗೆ ಕಾಡಲಿದೆ. ಅಂದುಕೊಂಡ ಕೆಲಸದಲ್ಲಿ ನಿರೀಕ್ಷಿತ ಫಲಿತಾಂಶ ಕಾಣಸಿಗುತ್ತದೆ. ಕೆಲಸದಲ್ಲಿ ವಿಶ್ವಾಸ ಮತ್ತು ಶ್ರದ್ಧೆ ಬೆಳೆಸಿಕೊಳ್ಳಿ. ಪ್ರೇಮಿಗಳು ಮಾತಿಗೆ ಮಾತು ಬೆಳೆಸುವುದರಿಂದ ಸಂದರ್ಭ ಕೈಮೀರಿ ಹೋಗಬಹುದು. ಆದಷ್ಟು ತಾಳ್ಮೆಯ ನಡೆ ಈ ದಿನ ಅವಶ್ಯಕತೆ ಇದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕೆಲಸದ ಆಸಕ್ತಿ ಕಡಿಮೆ ಆಗಬಹುದಾದ ಸಾಧ್ಯತೆ ಇದೆ. ದೈಹಿಕ ಸಮಸ್ಯೆಗಳು ನಿಮಗೆ ಕಾಡಬಹುದು. ಇಂದು ಲವಲವಿಕೆ ಮತ್ತು ಚೈತನ್ಯ ಬೆಳೆಸಿಕೊಳ್ಳಲು ಪ್ರಯತ್ನಪಡಿ. ನಿಮ್ಮ ಹಳೆಯ ಹೂಡಿಕೆಗಳು ಲಾಭ ತಂದು ಕೊಡಲಿದೆ. ಹಿರಿಯರು ನಿಮಗೆ ಕೆಲವು ಜವಾಬ್ದಾರಿಗಳನ್ನು ನೀಡಲಿದ್ದಾರೆ. ಕುಟುಂಬದವರೊಡನೆ ಶಾಂತಿ ರೀತಿಯ ವರ್ತನೆ ತೋರಿಸುವುದು ಸೂಕ್ತ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮಕರ ರಾಶಿ
ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ತಂತ್ರಗಾರಿಕೆ, ಚಾಣಕ್ಷತನ ಮೇಲುಗೈ ಸಾಧಿಸಲಿದೆ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕಷ್ಟದ ಕೆಲಸವನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ದಂಪತಿಗಳ ಸಮೇತ ಪ್ರವಾಸ ಅಥವಾ ದೇವಸ್ಥಾನಗಳ ಬೇಟಿ ಅಥವಾ ಸುಖಾಸುಮ್ಮನೆ ತಿರುಗಾಟ ನಡೆಸುವ ಆನಂದದಾಯಕ ಕ್ಷಣಗಳನ್ನು ಅನುಭವಿಸುತ್ತೀರಿ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ತೋರಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕುಂಭ ರಾಶಿ
ಕಷ್ಟದ ಸಮಯವನ್ನು ಪಾರುಮಾಡಿ ಇಂದು ನೆಮ್ಮದಿಯಿಂದ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವಿರಿ. ಭವಿಷ್ಯದ ಏಳಿಗೆಗಾಗಿ ನಿಮ್ಮ ಯೋಚನೆ ಹಾಗೂ ಯೋಜನೆ ತುಂಬಾ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಗೆಲುವು ಕಾಣಲಿದ್ದೀರಿ. ಕುಟುಂಬದಲ್ಲಿ ಸೌಖ್ಯದ ವಾತಾವರಣವಿದೆ. ಪ್ರೇಮ ನಿವೇದನೆ ಮಾಡುವ ಅವಕಾಶ ಸಿಗಲಿದೆ. ಕ್ರಯವಿಕ್ರಯ ಗಳಲ್ಲಿ ಲಾಭಾಂಶ ಕಾಣಬಹುದು. ಹಳೆಯ ಸಾಲಗಳನ್ನು ತೀರಿಸುವ ಅವಕಾಶ ಲಭ್ಯವಾಗುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಉತ್ಸಾಹದ ಕೆಲಸದಲ್ಲಿ ಇದ್ದಕ್ಕಿದ್ದಂತೆ ನಿರುತ್ಸಾಹ ಆವರಿಸಬಹುದು. ಕೆಲಸದಲ್ಲಿ ಮಾಡುವ ತಪ್ಪಿನಿಂದ ಸಮಸ್ಯೆ ಎದುರಾಗಲಿದೆ. ಅನ್ಯರ ವಾರ್ತೆಗಳನ್ನು ಹೆಚ್ಚಾಗಿ ಕೇಳುವುದು ಒಳ್ಳೆಯ ಲಕ್ಷಣವಲ್ಲ. ನಂಬಿಕಸ್ಥರಿಂದ ಅಪಮಾನ ಎದುರಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಸಾಧನೆ ಕಂಡು ಬರುತ್ತದೆ. ಸಂಗಾತಿಯೊಡನೆ ಸುಖಾಸುಮ್ಮನೆ ಬಿನ್ನಾಭಿಪ್ರಾಯ ಮಾಡಿಕೊಂಡು ಕೊರಗುತ್ತಾ ಕೂರಬೇಡಿ, ಸಮಸ್ಯೆ ಇತ್ಯರ್ಥ ಪಡಿಸಲು ಮುಂದಾಗಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯ ಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button