ಬಿ.ಎಸ್.ಯಡಿಯೂರಪ್ಪ ಭಾಷಣಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು?
ವಿಜಯಪುರ: ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯ ವೇದಿಕೆಯಲ್ಲಿ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣದ ವೇಳೆ ಬಿಜೆಪಿ ಕಾರ್ಯಕರ್ತರೇ ಭಾಷಣ ತಡೆದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಸಮಾವೇಶದಲ್ಲಿ ಸಾವಿರಾರು ಜನ ಸೇರಲು ಮಾಜಿ ಶಾಸಕ ರವಿಕಾಂತ ಪಾಟೀಲ್ ಕಾರಣ ಎಂದು ಬಿಎಸ್ ವೈ ಭಾಷಣ ಮಾಡುತ್ತಿದ್ದಾಗ ಇನ್ನುಳಿದ ಅಬ್ಯರ್ಥಿ ಆಕಾಂಕ್ಷಿಗಳ ಬೆಂಬಲಿಗರು ಗಲಾಟೆ ಶುರು ಮಾಡಿದ್ದಾರೆ. ವೇದಿಕೆ ಮೇಲೆ ತೆರಳಿ ಭಾಷಣಕ್ಕೆ ಅಡ್ಡಿ ಪಡಿಸಿದ್ದಾರೆ.
ಇಂಡಿ ಮತಕ್ಷೇತ್ರದ ಬಿಜೆಪಿ ಅಬ್ಯರ್ಥಿ ಆಕಾಂಕ್ಷಿಗಳಾದ ಬಿಜೆಪಿ ಮಂಡಲ ಅದ್ಯಕ್ಷ ಕಾಸುಗೌಡ ಬಿರಾದಾರ, ಮುಖಂಡರಾದ ಪಾಪು ಕಿತ್ತಲಿ, ದಯಾಸಾಗರ್ ಬೆಂಬಲಿಗರು ಗದ್ದಲವೆಬ್ಬಿಸಿ ಬಿಎಸ್ ವೈ ಮಾತನಾಡುತ್ತಿದ್ದ ಮೈಕ್ ಕೀಳಲು ಯತ್ನಿಸಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿದ್ದುದನ್ನು ಅರಿತ ಪೊಲೀಸರು ವೇದಿಕೆಗೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಬಳಿಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ ನಾನು ಇನ್ನೂ ಎಲ್ಲರ ಹೆಸರು ಹೇಳುವಷ್ಟರಲ್ಲಿ ಗಲಾಟೆ ಶುರು ಮಾಡಿದ್ದೀರಿ. ಟಿಕೆಟ್ ನನ್ನ ಕೈಯಲಿ ಇಲ್ಲ. ಮತಕ್ಷೇತ್ರಗಳಲ್ಲಿ ಸರ್ವೇ ಮಾಡಿಸಿದ ವರದಿ ಆಧಾರದ ಮೇಲೆ ಹೈಕಮಾಂಡ್ ಟಿಕೆಟ್ ನಿರ್ಧರಿಸುತ್ತದೆ ಎಂದು ಹೇಳಿ ಸಮಾಧಾನ ಪಡಿಸಿದ್ದಾರೆ. ಕೇವಲ 10ನಿಮಿಷದಲ್ಲಿ ಭಾಷಣ ಮುಗಿಸಿ ಬಿಎಸ್ ವೈ ನಿರ್ಗಮಿಸಿದ್ದಾರೆ.