ಸಹಕಾರಿ ನಿಗಮದ ನೌಕರರಿಂದ ಬಸ್ ಸ್ಥಗಿತ ಪ್ರತಿಭಟನೆ-ಕೆಸ್ಆರ್ಟಿಸಿಯಿಂದ ಬಸ್ ಸೇವೆ ಲಭ್ಯ
ಬೆಂಗಳೂರಃ ಸಹಕಾರ ಸಾರಿಗೆ ನಿಗಮದ ನೌಕರರು ಬಸ್ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವದು ಒಂದಡೆಯಾದರೆ ಇತ್ತ ಕೆಎಸ್ಆರ್ ಟಿಸಿ ಜನರ ಅನುಕೂಲಕ್ಕಾಗಿ ಬಸ್ ಓಡಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 16 ರಿಂದ ಸಹಕಾರ ಸಾರಿಗೆ ಸಂಸ್ಥೆಯ ನೌಕರರು ಬಸ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸ್ಥೆಯ ನೆರವಿಗೆ ಸರ್ಕಾರ ಬರಲಿ ಎಂಬ ಬೇಡಿಕೆ ಪ್ರತಿಭಟನಾ ನಿರತ ನೌಕರರ ಪ್ರಮುಖ ಬೇಡಿಕೆಯಾಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಜನರಿಗೆ ತೊಂದರೆಯಾದ ಹಿನ್ನೆಲೆ ಕೆಎಸ್ಆರ್ಟಿಸಿಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ವತಿಯಿಂದ ವಿವಿಧ ಮಾರ್ಗದಲ್ಲಿ ಬಸ್ ಓಡಿಸಲಾಗುತ್ತದೆ ಎಂದು ಸ್ಪಷ್ಟ ಪಡಿಸಿದೆ.
ಕೊಪ್ಪದಿಂದ ಶಿವಮೊಗ್ಗ, ತೀರ್ಥಹಳ್ಳಿ, ಮೇಲ್ಪಾಲ್, ಬಾಳೆಹೊನ್ನೂರು, ಮೂಡಬೂರು, ಮಲ್ಲಂದೂರು, ಕಟ್ಟಿನಮನೆಗೆ ಬಸ್ ಓಡಿಸಲಾಗುತ್ತಿದೆ. ಮತ್ತು ಶೃಂಗೇರಿ-ಕೊಪ್ಪ-ಶಿವಮೊಗ್ಗ, ಉಡುಪಿ-ಶೃಂಗೇರಿ-ಬಾಳೆಹೊನ್ನೂರು, ಉಡುಪಿ-ಶೃಂಗೇರಿ-ಚಿಕ್ಕಮಗಳೂರು, ಕೊಲ್ಲೂರು-ಕುಂದಾಪುರ-ಶೃಂಗೇರಿ-ಕೊಪ್ಪ, ಉಡುಪಿ-ಕೊಪ್ಪ-ಬೀರೂರು ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ.
ಒಟ್ಟು 16 ಬಸ್ಗಳಿಂದ 56 ಟ್ರಿಪ್ ಬಸ್ಗಳನ್ನು ಓಡಿಸಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ಹೇಳಲಾಗುತ್ತಿದೆ.