ಕಾಮಗಾರಿ ಗುಣಮಟ್ಟದಿಂದ ಕೂಡಿರಲಿಃ ಶಾಸಕ ಗುರು ಪಾಟೀಲ್
ಯಾದಗಿರಿಃ ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಮೊದಲು ಗುಣಮಟ್ಟದಿಂದ ಕೂಡಿರಬೇಕು. ಪದೆ ಪದೇ ದುರಸ್ತಿಗೆ ಬಾರದಂತೆ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಗುರು ಪಾಟೀಲ್ ಶಿರವಾಳ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಶಹಾಪುರ ನಗರದ ಇಂದಿರಾ ಬಡಾವಣೆಯಲ್ಲಿ ಸೋಮವಾರ 25 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಮಗಾರಿ ಗುಣಮಟ್ಟದಿಂದ ಯಾವುದೆ ತೊಂದರೆ ಇಲ್ಲದ ಹಾಗೇ ಸಮರ್ಪಕವಾಗಿ ನಡೆದರೆ. ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕಳಫೆ ಮಟ್ಟದ್ದಾದರೆ, ಬಹುಬೇಗನೆ ದುರಸ್ತಿಗೊಳಿಸುವ ಸಂದರ್ಭದಲ್ಲಿ ಸದುಪಯೋಗವಾಗುವದಿಲ್ಲ. ಜನರಿಗೆ ತೊಂದರೆಯಾಗುತ್ತದೆ. ಸರ್ಕಾರಿ ಹಣವು ಪೋಲಾಗುತ್ತದೆ. ಕಾರಣ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾವುದೇ ಕಾಮಗಾರಿಯಾಗಲಿ ಜನಪಯೋಗಿ ಕೆಲಸವನ್ನು ಒಮ್ಮೆ ಮಾಡಿದರೆ, ಶಾಶ್ವತ ಅಲ್ಲದಿದ್ದರೂ ಕನಿಷ್ಟ ಹತ್ತಾರು ವರ್ಷ ಬಾಳಿಕೆ ಬರಬೇಕು ಎಂದು ಕಿವಿ ಮಾತು ಹೇಳಿದರು.
ಎಚ್‍ಕೆಆರ್‍ಡಿಬಿ ಯಿಂದ 25 ಲಕ್ಷ ರೂ.ಅನುದಾನ ಬಿಡುಗಡೆಗೊಂಡಿದ್ದು, ಇಂದಿರಾ ನಗರ ಪ್ರವೇಶಿಸುವ ಮುಖ್ಯ ರಸ್ತೆಯಿಂದ ಹಳ್ಳದವರೆಗೂ ಸಿಸಿ ರಸ್ತೆಯಾಗಲಿದೆ. ಸಾರ್ವಜನಿಕರು ರಸ್ತೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಿದ್ದು ಆರಬೋಳ, ಸುಧೀರ ಚಿಂಚೋಳಿ, ಮೋನಪ್ಪ ಕಿಣ್ಣಿ, ಅಶೋಕ ಪಾಟೀಲ, ರಾಜು ಬಮ್ಮನಳ್ಳಿ, ವೆಂಕಟೇಶ ಸೇರಿದಂತೆ ಇಂದಿರಾ ಬಡಾವಣೆಯ ಹಿರಿಯರು, ಯುವ ಮುಖಂಡರು ಉಪಸ್ಥಿತರಿದ್ದರು.