ಬಿಜೆಪಿ ಅಧಿಕಾರ ದುರ್ಬಳಕೆ ಎಸ್‍ಡಿಪಿಐ ಪ್ರತಿಭಟನೆ
ಶಹಾಪುರಃ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೋರಾಟಗಾರರ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಇಲ್ಲಿನ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲೂ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಿ ಪ್ರಕರಣದಡಿ ಬಂಧಿಸುವ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಪೊಲೀಸ್ ಸೇರಿದಂತೆ ರಾಷ್ಟ್ರೀಯ ತನಿಖಾ ದಳ ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದು, ಸಾವಿರಾರು ಜನರ ವಿಚಾರಣೆ ನಡೆಸಿದ್ದಾರೆ.
ಆದಾಗ್ಯ ಬೆಂಗಳೂರಿನ ಎಸ್ಡಿಪಿಐ ಜಿಲ್ಲಾಧ್ಯಕ್ಷರ ಮೇಲೆ ಬಲವಾಗಿ ಆರೋಪವರಿಸಿ ಆತನನ್ನ ಬಂಧಿಸಲಾಗಿದೆ. ಅದರಂತೆ ನೂರಾರು ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ. ಇಂತಹ ಕೀಳು ಮಟ್ಟದ ರಾಜಕೀಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದ್ದು, ಈ ಕೂಡಲೇ ನಿರಪರಾಧಿ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಯಾವ ಷರತ್ತು ಬದ್ಧ ಜಾಮೀನು ಇಲ್ಲದೆ ಬಿಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದ್ದಾರೆ.
ಎಸ್ಡಿಪಿಐ ಸಂಘಟನೆ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಜನಸೇವೆಯಲ್ಲಿ ಮುಂದಿದ್ದು, ಕೊರೊನಾ ವೇಳೆ ನಾಗರಿಕರ ಹಿತ ಕಾಪಾಡುವಲ್ಲಿ ಸೇವೆ ಸಲ್ಲಿಸಿದೆ. ಕೊರೊನಾ ರೋಗಿಗಳು ಮೃತಪಟ್ಟವರನ್ನು ಸಂಸ್ಕಾರವನ್ನು ಸಹ ನಮ್ಮ ಕಾರ್ಯಕರ್ತರು ಮಾಡಿರುವದು ಶ್ಲಾಘನೀಯವಾಗಿದೆ. ಇಂತಹ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ಎಸ್ಡಿಪಿಐ ಸಂಘಟನೆ ಮೇಲೆ ಬಿಜೆಪಿ ಗೂಬೆ ಕೂಡಿಸುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಯ್ಯದ್ ಇಸಾಕಸಾಬ ಹುಸೇನ್, ಇಕ್ಬಾಲ್ ಅಹ್ಮದ್ ಜಾನಿ, ಬಂದೇನವಾಜ್, ಮಹ್ಮದ್ ಅಷ್ಪಾಕ್ ಸೇರಿದಂತೆ ಮಹಿಳೆಯರು, ಹಿರಿಯರು ಯುವಕರು ಭಾಗವಹಿಸಿದ್ದರು.