ಸಿಎಂ ಹುದ್ದೆಯ ಖುಷಿಯಲ್ಲಿದ್ದ ಉದ್ಧವ್ ಠಾಕ್ರೆಗೆ ‘ಶಾಕ್’
ಮುಂಬೈಃ ಮಹಾರಾಷ್ಟ್ರದಲ್ಲಿನ ರಾಜಕೀಯ ಚಟುವಟಿಕೆ ಕಂಡು ಜನತೆ ಮಾತ್ರವಲ್ಲದೆ ಸ್ವತಃ ಕೆಲ ರಾಜಕೀಯ ನಾಯಕರಿಗೂ ಬೇಸರ ತರಿಸಿದೆ. ಈಗಾಗಲೇ ಎರಡೆರಡು ಬಾರಿ ದೇವಿಂದ್ರ ಫಡ್ನಾವಿಸ್ ಸಿಎಂ ಆಗಿ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ದಾಯಿತು.
ಎನ್ಸಿಪಿಯ ಅಜಿತ್ ಕುಮಾರ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅದರ ಬೆನ್ನಲ್ಲೆ ಮತ್ತೆ ನಡೆದ ನಾಟಕೀಯ ಬೆಳವಣಿಗೆಯಿಂದ ರಾಜೀನಾಮೆ ನೀಡದ್ದಾಯಿತು. ಮತ್ತೆ ಘರ್ ವಾಪಸಿ ಬಂದಿದ್ದಾಯಿತು.
ಇದೀಗ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೂರು ಪಕ್ಷ ಸೇರಿಕೊಂಡ ಇನ್ನೇನು ಅಧಿಕಾರದ ಚುಕ್ಕಾಣಿ ಹಿಡಿಯುವ ಸಂತಸದಲ್ಲಿ ಮುಳುಗಿರುವಾಗಲೇ, ಇದೇ ಡಿ.1 ರಂದು ಶೀವಸೇನೆಯ ಉದ್ಧವ್ ಠಾಕ್ರೆ ಸಿಎಂ ಪ್ರಮಾಣ ವಚನ ಸಮಾರಂಭ ನಿಗದಿಯಾಗಿರುವಾಗಲೇ, ಮತ್ತೊಂದು ಬೆಳವಣಿಗೆ ನಡೆದಿದೆ. ಈ ಘಟನೆ ಎಲ್ಲಿಗೆ ಕೊಂಡೊಯ್ಯಲಿದೆ ಕಾದು ನೋಡಬೇಕು.
ಏನಪಾ ಅಂತಹ ಘಟನೆ ಎಂದು ಗಾಬರಿ, ಬೇಸರ ಕುತುಹಲ ವ್ಯಕ್ತಪಡಿಸದಿರಿ, ಯಾಕಂದ್ರೆ ಯಾವಾಗ್ ಏನ್ ನಡೆಯುತ್ತದೆ ಯಾರಿಗೆ ಗೊತ್ತು. ಹೌದು ಸಧ್ಯ ಮಹಾರಾಷ್ಟ್ರ ಶಿವಸೇನೆ, ಎನ್ ಸಿಪಿ, ಕಾಂಗ್ರೆಸ್ ಸೇರಿ ಸರ್ಕಾರ ರಚಿಸಲು ಮುಂದಾಗಿವೆ. ಇಂತಹ ಸಮಯದಲ್ಲಿ ಶಿವಸೇನೆಯೆ ಮುಖಂಡ ರಮೇಶ ಸೋಲಂಕಿ ತಮ್ಮ ರಾಜೀನಾಮೆ ಪತ್ರವನ್ನು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಅವರಿಗೆ ರವಾನಿಸಿದ ಘಟನೆ ಜರುಗಿದೆ.
ರಮೇಶ ಸೋಲಂಕಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕವಾಗಿ ಒಂದುಷ್ಟು ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ನನ್ನ ಕೆಲವೊಂದು ಸಿದ್ಧಾಂತ ಕಾಂಗ್ರೆಸ್ನೊಂದಿಗೆ ಕೆಲಸ ಮಾಡಲು ತಡೆಯುತ್ತಿವೆ. ಹೀಗಾಗಿ ಪಕ್ಷವನ್ನು ಬಿಡುತ್ತಿದ್ದೇನೆ ಎಂದು ಟ್ವಿಟ್ ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಇಷ್ಟು ವರ್ಷ ನನಗೆ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಕೃತಜ್ಞತೆಯನ್ನು ಅವರು ಅರ್ಪಿಸಿದ್ದಾರೆ.