ಪ್ರಮುಖ ಸುದ್ದಿ
ವಿಮಾನ ಅಪಘಾತ 180 ಪ್ರಯಾಣಿಕರ ಮರಣ
ಟೆಹ್ರಾನ್ಃ 180 ಪ್ರಯಾಣಿಕರಿದ್ದ ಉಕ್ರೇನ್ ನ ವಿಮಾನವೊಂದು ಬುಧವಾರ ಟೇಕ್ಅಪ್ ಆದ ಕೆಲ ಸಮಯದಲ್ಲಿಯೇ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಇರಾನ್ ಮೂಲದ ಮಾಧ್ಯಮ ವರದಿ ಬಿತ್ತರಿಸಿದೆ.
ಇಮಾಮ್ ಖೊಮೈನಿ ಎಂಬ ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ವಿಮಾನ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.
ಟೆಹ್ರಾನ್ ನ ನೈರುತ್ಯ ಭಾಗದಲ್ಲಿ ಅಪಘಾತ ಸಂಭವಿಸಿದ್ದು, ತನಿಖಾ ತಂಡವೊಂದು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ವಕ್ತಾರ ರೆಜಾ ಜಾಫರ್ಜಾಡೆ ತಿಳಿಸಿದ್ದಾರೆ.
ಉಕ್ರೇನ್ ನ 737-800 ವಿಮಾನ ಇಂದು ಬೆಳಗ್ಗೆ ಟೇಕ್ ಅಪ್ ಆದ ಸ್ವಲ್ಪ ಹೊತ್ತಿನಲ್ಲಿಯೇ ಸಂದೇಶ ರವಾನಿಸುವದನ್ನು ನಿಲ್ಲಿಸಿತ್ತು ಎಂದು ಫೈಟ್ ರಾಡಾರ್24/ ವೆಬ್ ಸೈಟ್ ವರದಿ ಮಾಡಿದೆ.