Homeಜನಮನಪ್ರಮುಖ ಸುದ್ದಿ

ಲಿಫ್ಟ್‌ನಲ್ಲಿ ಯುವಕನ ಕೈಯಲ್ಲಿದ್ದ ಲೀಥಿಯಂ ಬ್ಯಾಟರಿ ಸ್ಫೋಟಗೊಂಡು ಯುವಕ ಮೃತ್ಯು!

ಹೊಸದಿಲ್ಲಿ: ಇತ್ತೀಚಿನ ಕೆಲವು ದಿನಗಳಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಬ್ಯಾಟರಿ(Electric Scooter battery) ಸ್ಫೋಟಗೊಂಡು ಅನಾಹುತಗಳು ಸಂಭವಿಸುತ್ತಿರುವ ಬಗ್ಗೆ ಆಗಾಗ ವರದಿ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಲಿಫ್ಟ್‌ನಲ್ಲಿ ಲೀಥಿಯಂ ಬ್ಯಾಟರಿ(lithium battery) ಸ್ಫೋಟಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಲೀಥಿಯಂ ಬ್ಯಾಟರಿ ಹಿಡಿದು ಲಿಫ್ಟ್‌ ಒಳಗೆ ಹೋಗುತ್ತಾನೆ. ಲಿಫ್ಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ತಕ್ಷಣ ಸ್ಫೋಟವಾಗುತ್ತದೆ. ಇಡೀ ಲಿಫ್ಟ್‌ನಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಳ್ಳುತ್ತದೆ. ಲಿಫ್ಟ್‌ನ ಹೊರಗಿದ್ದವರು ಅಗ್ನಿ ಶಾಮಕ ಸಾಧನಗಳನ್ನು ಹಿಡಿದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕ್ಷಣಾರ್ಧದಲ್ಲಿ ಯುವಕ ಸುಟ್ಟು ಕರಕಲಾಗಿರುವ ಘಟನೆ ವರದಿಯಾಗಿದೆ.

ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್‌ ಸ್ಕೂಟರ್‌, ಕಾರು ಬಳಸುವವರಿಗೆ ಇದೊಂದು ದೊಡ್ಡ ಶಾಕ್‌ ಆಗಿದೆ. ಇಂತಹ ಅಪಾಯಕಾರಿ ಬ್ಯಾಟರಿಗಳ ಬಗ್ಗೆ ಜನ ಅತ್ಯಂತ ಎಚ್ಚರದಿಂದ ಇರಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಇಕ್ಕಟ್ಟಾದ ಸ್ಥಳಗಳಲ್ಲಿ ಇಂತಹ ಬ್ಯಾಟರಿಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button