ಪ್ರಮುಖ ಸುದ್ದಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ್ ವಿಧಿವಶ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ್ ವಿಧಿವಶ
ವಿನಯವಾಣಿ ಡೆಸ್ಕ್ಃ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ್ ಇಂದು ಬೆಳಗ್ಗೆ ವಿಧಿವಶವಾದರು ಎಂದು ತಿಳಿಸಲು ವಿನಯವಾಣಿ ವಿಷಾಧಿಸುತ್ತದೆ.
ನಾಡಿನ ಹಿರಿಯ ಸಾಹಿತಿ, ರಂಗಕರ್ಮಿ ಕನ್ನಡ ಸಾರತ್ವಲೋಕದ ಕಣ್ಮಣಿ ಗಿರೀಶ ಕಾರ್ನಾಡ ಅವರ ನಿಧನದಿಂದ ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಅವರ ಅನನ್ಯ ಸೇವೆ ಕನ್ನಡಿಗರು ಎಂದಿಗೂ ಮರೆಯಲಾರರು.
ನಾಡಿನ ಜನರ ವಾಸ್ತವಿಕ ಬದುಕಿನ ಚಿತ್ರಣ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗಾಧ ಕಾರ್ಯ ಸಾಹಿತ್ಯಕವಾದ ಹಲವು ಕೃತಿಗಳನ್ನು ರಚಿಸುವ ಮೂಲಕ ಜಾಗೃತಿ ಮೂಡಿಸಿದ್ದರು.
ಅವರ ಹಲವಾರು ಕೃತಿಗಳು ಶ್ರೇಷ್ಠ ಸ್ಥಾನ ಪಡೆದುಕೊಂಡಿವೆ. ಅವರು ಸಾಹಿತ್ಯಕವಾಗಿ ಜ್ಞಾನ ಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಹಿರಿಮೆ ಹೆಚ್ಚಿಸಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ವಿನಯವಾಣಿ ಶ್ರದ್ಧಾಂಜಲಿ ಸಲ್ಲಿಸುತ್ತಿದೆ