ಪ್ರಮುಖ ಸುದ್ದಿ

ಬಸ್‍ಗೆ ಸಿಲುಕಿ ಬಾಲಕ ಸಾವು ನಾಗರಿಕರ ಆಕ್ರೋಶ

ಜನಸಂದಣಿ ನಿಯಂತ್ರಣಕ್ಕೆ ನಾಗರಿಕರ ಆಗ್ರಹ

ಬಸ್ ನಿಲುಗಡೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಜನರ ಮನವಿ

ಜಿಲ್ಲಾ ಉಸ್ತುವಾರಿಗೆ ಕರೆ ಮಾಡಿದ ಬಿಜೆಪಿ ಮುಖಂಡ, ಅಪಘಾತ ನಿಯಂತ್ರಣಕ್ಕೆ ನಾಗರಿಕರ ಒತ್ತಾಯ, ತಾತ್ಕಲಿವಾಗಿ ನಿಲ್ದಾಣದೊಳಗೆ ಬಸ್ ನಿಲುಗಡೆ ವ್ಯವಸ್ಥೆಗೆ ಉಸ್ತುವಾರಿ ಸೂಚನೆ

ಯಾದಗಿರಿ,ಶಹಾಪುರಃ ಮಂಗಳವಾರ ಬೆಳಗ್ಗೆ ಹಳೇ ಬಸ್ ನಿಲ್ದಾಣ ಎದುರು ಹೆದ್ದಾರಿ ಮೇಲೆ ನಡೆದ ದುರ್ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ ಘಟನೆಗೆ ನಾಗರಿಕರ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಸಮರ್ಪಕ ಬಸ್ ನಿಲುಗಡೆ ಮತ್ತು ಟ್ರಾಫಿಕ್ ನಿಂದಾಗಿ ಇಂತಹ ದುರ್ಘಟನೆ ನಡೆಯುತ್ತಿವೆ. ಕೂಡಲೇ ಬಸ್ ನಿಲುಗಡೆಗೆ ನಿಲ್ದಾಣದೊಳಗಡೆ ಪ್ರವೇಶಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ನಾಗರಿಕರು ಒತ್ತಾಯಿಸಿದರು.

ಘಟನಾ ಸ್ಥಳದಲ್ಲಿ ಜಮಾಯಿಸಿದ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು, ಕೂಡಲೇ ಹಳೇ ಬಸ್ ನಿಲ್ದಾಣದ ಎದುರಗಡೆ ಹಾಕಲಾದ ರಸ್ತೆ ವಿಭಜಕವನ್ನು ಹೊಡೆದು ಹಾಕಿ, ಬಸ್‍ಗಳು ಬಸ್ ನಿಲ್ದಾಣದೊಳು ಹೋಗುವಂತೆ ತಾತ್ಕಲಿಕ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಈ ವ್ಯವಸ್ಥೆ ಕಲ್ಪಿಸುವದರಿಂದ ಅಪಘಾತ, ಅವಘಡ ತಡೆಯಲು ಸಾಧ್ಯವಿದೆ. ಅತಿಯಾದ ಟ್ರಾಫಿಕ್ ಮತ್ತು ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ಅವಘಡಗಳು ನಿತ್ಯ ನಿರಂತರವಾಗಿ ನಡೆಯುತ್ತಿವೆ. ಹೀಗಾಗಿ ಕೂಡಲೇ ಅಧಿಕಾರಿಗಳು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು. ಮತ್ತು ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ನಾಗರಿಕರು ಮನವಿ ಮಾಡಿದರು.

ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ ಜಗನ್ನಾಥರಡ್ಡಿ, ನಾಗರಿಕರ ಮನವಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ಸಹಕರಿಸುವದಾಗಿ ತಿಳಿಸಿದರು. ಆದರೆ ಬಸ್ ನಿಲ್ದಾಣದೊಳಗೆ ಬಸ್‍ಗಳನ್ನು ನಿಲುಗಡೆ ಮಾಡಲು ಕಷ್ಟವಿದೆ. ಇನ್ನೂ ನೂತನ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಈಗಲೇ ನಿಲ್ದಾಣದೊಳು ಬಸ್ ನಿಲ್ಲಿಸಲು ಆಗುವದಿಲ್ಲ. ಬಸ್ ನಿಲ್ದಾಣ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಸಂಬಂಧಿಸಿದ ಅಧಿಕಾರಿಗಳ ಸುಪರ್ದಿಗೆ ನಿಲ್ದಾಣ ಒಪ್ಪಿಸುವವರೆಗೂ ಬಸ್ ನಿಲುಗಡೆ ಮಾಡಲು ಬರುವದಿಲ್ಲ ಎಂದಿದ್ದಾರೆ.

ಆಗ ಸ್ಥಳದಲ್ಲಿಯೇ ಇದ್ದ ಬಿಜೆಪಿ ಮುಖಂಡ ಗುರು ಕಾಮಾ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಭು ಚವ್ಹಾಣ ಅವರಿಗೆ ಕರೆ ಮಾಡಿ ಸ್ಥಳೀಯ ಸಮಸ್ಯೆ ಕುರಿತು ಗಮನ ಸೆಳೆದಿದ್ದಾರೆ. ತಕ್ಷಣ ಉಸ್ತುವಾರಿ ಮಂತ್ರಿಯವರು, ತಹಶೀಲ್ದಾರರಿಗೆ ಫೋನ್ ಕೊಡಿ ಎಂದು ಈ ಕುರಿತು ಮಾತನಾಡಿದರು.

ನಿಲ್ದಾಣದಲ್ಲಿ ನಡೆದ ಕಾಮಗಾರಿಗೆ ತೊಂದರೆಯಾಗದಂತೆ. ಸದ್ಯದ ಸ್ಥಿತಿ ನಿವಾರಣೆಗೆ ಬಸ್‍ಗಳು ನಿಲ್ದಾಣದ ಪ್ರದೇಶದೊಳಕ್ಕೆ ಹೋಗಿ ಬರುವಂತೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಅಲ್ಲದೆ ಶೀಘ್ರದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸುವದಾಗಿ ಉಸ್ತುವಾರಿ ಮಂತ್ರಿ ನಾಗರಿಕರಿಗೆ ಭರವಸೆ ನೀಡಿದರು. ಆಗ ನಾಗರಿಕರೊಂದಿಗೆ ಮಾತನಾಡಿದ ತಹಶೀಲ್ದಾರರು, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಾದಗಿ ತಿಳಿಸಿದರು. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಗುರು ಕಾಮಾ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಗಂಗಾಧರ ಮಠ, ಅಪ್ಪಣ್ಣ ದಶವಂತ, ಸೂಗಯ್ಯ ಹಿರೇಮಠ, ಶಿವಕುಮಾರ ತಳವಾರ, ಮಹ್ಮದ ಖಾಲಿದ್, ಸಯ್ಯದ್ ಖಾದ್ರಿ, ರಾಘು ಯಕ್ಷಿಂತಿ, ಅಶೋಕ, ಅಬ್ದುಲ್, ಕರಿಬಸವ ಅಣಬಿ, ಅಮೃತ ಹೂಗಾರ ಸೇರಿದಂತೆ ಇತರರು ಇದ್ದರು.

———————-
ಕೂಡಲೇ ಹಳೇ ಬಸ್ ನಿಲ್ದಾಣದ ಎದುರುಗಡೆ ಹಾಕಲಾದ ರಸ್ತೆ ವಿಭಜಕ ಹೊಡೆದು ಬಸ್‍ಗಳು ನಿಲ್ದಾಣದೊಳಗೆ ಬರುವಂತೆ ವ್ಯವಸ್ಥೆ ಮಾಡಿಕೊಡಲು ಕೆಎಸಆರ್‍ಟಿಸಿ ಮತ್ತು ನಗರಸಭೆ ಅಧಿಕಾರಿಗಳಿಗೆ ತಿಳಿಸಲಾಗುವದು. ಮತ್ತು ರಸ್ತೆ ಮೇಲೆ ನಿಲ್ಲುತ್ತಿರುವ ಆಟೋಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವದು. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವದು.

ಹನುಮರಡ್ಡೆಪ್ಪ. ಸಿಪಿಐ ಶಹಾಪುರ ಠಾಣೆ.

——————-
ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಭು ಚವ್ಹಾಣ ಅವರು ನೀಡಿದ ಸೂಚನೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವದು, ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಬಸ್ ನಿಲುಗಡೆಗೆ ನಿಲ್ದಾಣದೊಳಗೆ ಪ್ರವೇಶ ನೀಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಪೂರಕ ಕ್ರಮಕೈಗೊಳ್ಳಲಾಗುವದು.

ಜಗನ್ನಾಥರಡ್ಡಿ. ತಹಶೀಲ್ದಾರರು.ಶಹಾಪುರ,

Related Articles

Leave a Reply

Your email address will not be published. Required fields are marked *

Back to top button