ಪ್ರಮುಖ ಸುದ್ದಿಮಹಿಳಾ ವಾಣಿ
ಕಾಡಾನೆಗೆ ಬಲಿಯಾದ ತಾಯಿ, ಮಗುವಿನ ಪ್ರಾಣ ರಕ್ಷಿಸಿದ್ದು ಪವಾಡ!
ಚಾಮರಾಜನಗರ : ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದು ತಾಯಿಯ ಸಮಯ ಪ್ರಗ್ನೆಯಿಂದಾಗಿ ಮಗು ಬಚಾವಾಗಿರುವ ಹೃದಯ ವಿದ್ರಾವಕ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಹಬ್ಬದಾಚರಣೆಗಾಗಿ ದೊಡ್ಡಾಣೆ ಗ್ರಾಮಕ್ಕೆ ತೆರಳಿದ್ದ ಹಳೆಯೂರು ಗ್ರಾಮದ ಗೌರಮ್ಮ(40) ಮಗುವನ್ನು ಎತ್ತಿಕೊಂಡು ಗ್ರಾಮಕ್ಕೆ ಹಿಂದಿರುಗುವ ವೇಳೆ ಕಾಡಾನೆ ಎದುರಾಗಿದೆ. ತಕ್ಷಣಕ್ಕೆ ಗೌರಮ್ಮ ತನ್ನ ಕಂಕುಳಲ್ಲಿದ್ದ ಹೆಣ್ಣು ಮಗುವನ್ನು ಬೇಲಿದಾಟಿ ಎಸೆದಿದ್ದಾಳೆ. ಅಷ್ಟರಲ್ಲೇ ಮಹಿಳೆ ಮೇಲೆ ದಾಳಿಯಿಟ್ಟ ಆನೆ ತುಳಿದು ಕೊಂದಿದೆ. ಬೇಲಿಯಲ್ಲಿ ಬಿದ್ದದ್ದು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.