Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ವಸ್ತ್ರಸಂಹಿತೆ ಜಾರಿ

ಹೊರನಾಡು:ಕಳೆದ ತಿಂಗಳು ಶೃಂಗೇರಿ ಶಾರದಮ್ಮನವರ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಕಡ್ಡಾಯ ಮಾಡಲಾಗಿತ್ತು. ಇದೀಗ ಜಿಲ್ಲೆಯ ಪ್ರಸಿದ್ಧ ದೇವಾಲಯ ಅನ್ನಪೂರ್ಣೇಶ್ವರಿ ದೇಗುಲದಲ್ಲೂ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ.
ಗಂಡಸರು ಶಲ್ಯ, ಪ್ಯಾಂಟ್, ಪಂಚೆ ಹಾಗೂ ಹೆಂಗಸರು ಸೀರೆ ಹಾಗೂ ಚೂಡಿದಾರ್ ಗಳಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವವರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವಿರುತ್ತದೆ. ಹೀಗಾಗಿ ಭಕ್ತಾದಿಗಳು ತಪ್ಪದೇ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ.