ಕುಂಭ ರಾಶಿಗೆ ಧನಲಾಭ ಕನ್ಯಾ ರಾಶಿಗಿಲ್ಲ ಅದೃಷ್ಟ
ವಾರದ ದ್ವಾದಶ ರಾಶಿಗಳ ಫಲಾಫಲ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಉನ್ನತ ಮಟ್ಟದ ಆಲೋಚನೆಗಳಿಂದ ಶುಭಕಾರ್ಯಗಳನ್ನು ಪ್ರಾರಂಭ ಮಾಡುವಿರಿ. ಮನಸ್ಸಿಗೆ ಕಸಿ ವಿಸಿಯಾಗುವ ಘಟನೆಗಳು ಜರುಗಲು ಬಹುದು. ಕಲಿಕೆಯ ಆಸಕ್ತಿ ಹಿನ್ನಡೆ ಕಾಣಲಿದೆ, ಶ್ರದ್ಧೆ ಅಗತ್ಯವಾಗಿ ಬೇಕಾಗಿದೆ. ಕುಟುಂಬದಲ್ಲಿ ಶುಭಸಮಾರಂಭಗಳು ನಡೆಯುವ ಸಾಧ್ಯತೆ ಕಾಣಬಹುದು.
ಅದೃಷ್ಟ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ನಿಮ್ಮ ಆಲೋಚನಾ ಶಕ್ತಿಯಿಂದ ಸಕಾರತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ನೂತನ ಉದ್ಯೋಗದ ಭರವಸೆಗಳು ಈಡೇರುವ ಸಾಧ್ಯತೆ ಕಾಣಬಹುದು. ಕುಟುಂಬದವರು ನಿಮ್ಮ ಆಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಬಹುದು ಇದು ನಿಮ್ಮಲ್ಲಿ ಬೇಸರ ತರಲಿದೆ. ಮಕ್ಕಳ ಉದ್ಯೋಗಕ್ಕೆ ನೀವು ಸಹಾಯ ಮಾಡುವ ಮನಸ್ಸಿನಲ್ಲಿ ಇರುತ್ತೀರಿ. ಸಂಗಾತಿಯೊಡನೆ ಸಣ್ಣ ಮಾತಿಗೂ ಸಹ ಕಲಹ ಏರ್ಪಡುವ ಸಾಧ್ಯತೆಗಳು ಕಂಡು ಬರುತ್ತದೆ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ವ್ಯಾವಹಾರಿಕವಾಗಿ ಉತ್ತಮ ಮಟ್ಟದ ಸಾಧನೆಯಾಗಲಿದೆ. ಶತ್ರುಗಳಿಂದ ಉಪಟಳ ಹೆಚ್ಚಾಗಬಹುದು. ಮಾಡುವ ಕೆಲಸದಲ್ಲಿ ಜಾಗ್ರತೆ ಇರಲಿ. ದಾಖಲೆಗಳನ್ನು ಅತಿ ಹೆಚ್ಚು ಕಾಳಜಿಯಿಂದ ಕಾಪಾಡಿಕೊಳ್ಳಿ. ಪತ್ನಿಯಲ್ಲಿ ಸಂತೋಷದ ಭಾವನೆ ಮೂಡಿಸುವ ಪ್ರಯತ್ನ ಮಾಡುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಆದಾಯ ಸಮತೋಲನ ಕಾಪಾಡಿಕೊಳ್ಳಿ. ಬಂದಂತಹ ಹಣಕಾಸನ್ನು ಅನಗತ್ಯವಾಗಿ ಖರ್ಚು ಮಾಡುವುದು ಸರಿಯಲ್ಲ. ಮನರಂಜನೆಗೆ ಹೆಚ್ಚಿನ ಒತ್ತು ನೀಡಲಿದ್ದೀರಿ. ಮಕ್ಕಳೊಡನೆ ಸ್ವಲ್ಪ ಸಮಯ ಕಾಲ ಕಳೆಯುವುದನ್ನು ರೂಡಿಸಿಕೊಳ್ಳಿ. ನಿಮ್ಮ ವ್ಯವಹಾರಗಳಲ್ಲಿ ಹಿರಿಯರ ಮಾತುಗಳನ್ನು ಪಾಲಿಸುವುದು ಸೂಕ್ತ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯಾಗಲಿದೆ.
ಅದೃಷ್ಟ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ನಿರೀಕ್ಷಿತ ಆದಾಯ ಮೂಲಗಳು ಸಮಯದ ಪ್ರಮಾಣದ ಗತಿಯಲ್ಲಿ ಕೈಸೇರುತ್ತದೆ. ಬಂಧು ವರ್ಗದೊಡನೆ ಮನಸ್ತಾಪ ಹೆಚ್ಚಾಗಲಿದೆ. ಪ್ರೇಮಿಗಳಲ್ಲಿ ಅನಗತ್ಯವಾಗಿ ವಿವಾದ ಮೂಡಲಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡುವಲ್ಲಿ ಯಶಸ್ವಿಯಾಗಲಿದ್ದೀರಿ. ನಿರುದ್ಯೋಗದ ಸಮಸ್ಯೆಗೆ ಪರಿಹಾರ ದೊರಕಲಿದೆ. ಸ್ವತಂತ್ರ ವ್ಯವಹಾರಗಳಿಂದ ಆರ್ಥಿಕ ಅಭಿವೃದ್ಧಿ ಕಾಣಲಿದ್ದೀರಿ.
ಅದೃಷ್ಟ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಇತರರೊಡನೆ ತಾಳೆ ಹಾಕಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟುಬಿಡಿ. ಇರುವ ಭಾಗ್ಯವನ್ನು ಆನಂದದಿಂದ ಅನುಭವಿಸುವುದು ಒಳ್ಳೆಯದು. ಹೆಚ್ಚಿನ ಚಿಂತೆಗಳು ನಿಮ್ಮಲ್ಲಿ ಆವರಿಸಬಹುದು ಇದು ನಿಮಗೆ ಎಲ್ಲಾ ರಂಗದಲ್ಲೂ ಸಹ ಹಿನ್ನಡೆ ನೀಡಲಿದೆ. ಚೈತನ್ಯದಾಯಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಸಂಗಾತಿಯೊಡನೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಒಳಿತು.
ಅದೃಷ್ಟ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಪ್ರತಿಭೆಗೆ ಸೂಕ್ತ ಅವಕಾಶಗಳು ಸಿಗುವುದು ನಿಶ್ಚಿತ. ಸಿನಿಮಾ, ಕಲೆ, ಚಿತ್ರಕಲೆ, ಸಂಗೀತ ಇಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ ಕಾಣಬಹುದು. ಸಭೆ-ಸಮಾರಂಭಗಳಲ್ಲಿ ನೀವು ಮುಖ್ಯ ಪಾತ್ರ ವಹಿಸಲಿದ್ದೀರಿ. ನಿಮ್ಮ ಗಮನವು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಚ್ಚಿನದಾಗಿ ಇರಲಿದೆ ಇದರಿಂದ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಹಿನ್ನಡೆ ಆಗಬಹುದು. ಪ್ರೇಮಿಗಳಿಗೆ ಸ್ಪೂರ್ತಿದಾಯಕ ಕ್ಷಣಗಳು ಕಂಡುಬರುತ್ತದೆ. ನಿಮ್ಮ ಕೆಲವು ಯೋಜನೆಗಳು ದಾರಿ ತಪ್ಪಬಹುದು ಅಥವಾ ವಿರೋಧಿ ವರ್ಗಗಳಿಂದ ತೊಂದರೆ ಆಗಬಹುದು ಎಚ್ಚರವಿರಲಿ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಚಿಕ ರಾಶಿ
ಪರೋಪಕಾರಿ ಗುಣಗಳು ನಿಮ್ಮಲ್ಲಿ ಕಾಣಬಹುದು. ಬಂಧುಮಿತ್ರರ ಕಷ್ಟಗಳಿಗೆ ಸಹಾಯದ ಹಸ್ತ ಕ್ಷೇಪ ನೀಡುತ್ತೀರಿ. ಆದಾಯವು ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಕ್ರಯವಿಕ್ರಯಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಕಂಡುಬರುತ್ತದೆ. ಜಮೀನು ಮಾರಾಟದ ವಿಷಯ ಸರಾಗವಾಗಿ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿ ಕಂಡುಬರುವುದಿಲ್ಲ, ಆದಷ್ಟು ಕುಟುಂಬದ ಮಾತುಗಳನ್ನು ಪಾಲಿಸುವುದು ಕ್ಷೇಮ. ನಿಮ್ಮ ಹರಕೆ ಅಥವಾ ದೈವ ಸಂಕಲ್ಪಗಳನ್ನು ಈಡೇರಿಸುವ ಸಾಧ್ಯತೆಗಳು ಕಂಡು ಬರುತ್ತದೆ.
ಅದೃಷ್ಟ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಹೊಸತನದತ್ತ ಪ್ರಯಾಣವನ್ನು ಆರಂಭಿಸಲಿದ್ದೀರಿ. ಕೆಲವು ಕುತೂಹಲಕಾರಿಯಾದ ವಿಷಯಗಳು ನಿಮಗೆ ತಿಳಿಯಲಿದೆ. ಉದ್ಯೋಗದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳು ಕಂಡುಬರುತ್ತದೆ. ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ರೂಪಿಸಿಕೊಡಲಿದ್ದೀರಿ. ವಿವಾಹ ಸಂಬಂಧಗಳು ಕೂಡಿ ಬರುವ ಸಾಧ್ಯತೆಗಳಿವೆ. ಕುಟುಂಬದೊಡನೆ ದೈವ ಮಂದಿರಗಳ ಪ್ರವಾಸದ ಚಿಂತನೆಗೆ ಸಕಾರಾತ್ಮಕವಾಗಿ ಸ್ಪಂದನೆ ದೊರೆಯಲಿದೆ. ಮೇಲಾಧಿಕಾರಿಗಳಿಂದ ಕೆಲಸದಲ್ಲಿ ಕಿರುಕುಳ ಹೆಚ್ಚಾಗಬಹುದು ಆದಷ್ಟು ತಪ್ಪಾಗದಂತೆ ಕಾರ್ಯಗಳನ್ನು ನಿರ್ವಹಿಸಿ.
ಅದೃಷ್ಟ ಸಂಖ್ಯೆ 1
ಗಿರಿಧರ ಶರ್ಮ 9945098262
ಮಕರ ರಾಶಿ
ಗೊಂದಲಗಳ ಸರಮಾಲೆಗಳನ್ನು ಕಾಣಲಿದ್ದೀರಿ. ಒಳ್ಳೆಯದು ಅಥವಾ ಕೆಟ್ಟದ್ದು ನಿರ್ಣಯ ಮಾಡಲು ಬಹಳಷ್ಟು ಕಷ್ಟ ಪಡಲಿದ್ದೀರಿ. ಗೃಹ ಖರೀದಿಗೆ ಉತ್ತಮ ಯೋಗಗಳು ಮತ್ತು ಅವಕಾಶಗಳು ಕೂಡಿ ಬರಲಿದೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಸಹೋದರ ವರ್ಗದಿಂದ ಭೂಮಿಯ ಸಂಬಂಧಿತ ವ್ಯಾಜ್ಯಗಳು ಭುಗಿಲೇಳುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರು ಹೆಚ್ಚುವರಿ ಜವಾಬ್ದಾರಿಯನ್ನು ನಿಮಗೆ ನೀಡಲಿದ್ದಾರೆ. ಸಂಗಾತಿಯ ಮನಸ್ಥಿತಿ ಕೋಪಮಯ ವಾಗಿರಬಹುದು ಇವರನ್ನು ಸಮಾಧಾನಪಡಿಸಲು ನೀವು ಹರಸಾಹಸ ಪಡುತ್ತೀರಿ.
ಅದೃಷ್ಟ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ಸಂಶೋಧನೆಗಳಲ್ಲಿ ಪ್ರಗತಿದಾಯಕ ಹೆಜ್ಜೆಗಳು ಕಾಣಬಹುದು. ಆಕಸ್ಮಿಕವಾದ ಧನಲಾಭ ನಿಮಗೆ ಸಂತೋಷ ನೀಡಲಿದೆ. ಕಟ್ಟಡ ಕಾಮಗಾರಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತೀರಿ. ಪ್ರಗತಿದಾಯಕ ಯೋಜನೆಗಳನ್ನು ನಿಮ್ಮ ಸ್ವಾದಿನಕ್ಕೆ ಪಡೆದುಕೊಳ್ಳುವ ಕನಸು ನನಸಾಗಲಿದೆ. ಉತ್ತಮವಾದ ನಡೆ-ನುಡಿಗಳಿಂದ ಆತ್ಮೀಯರಲ್ಲಿ ಪ್ರಶಂಸೆ ಪಡೆಯಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ಸಹವರ್ತಿಗಳು ನಿಮ್ಮ ವಿರುದ್ಧವಾಗಿ ನಿಲ್ಲುವರು ಇದು ನಿಮಗೆ ಅಶಾಂತಿ ತರಬಹುದಾಗಿದೆ. ಸ್ವಂತ ಉದ್ಯಮದ ಕನಸು ನನಸಾಗಲು ಸುಸಂದರ್ಭ ಕಾಣಬಹುದು.
ಅದೃಷ್ಟ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ನಿಮ್ಮ ಸಂಕಷ್ಟಗಳಿಗೆ ಸ್ನೇಹಿತರಿಂದ ಬೆಂಬಲ ಮತ್ತು ಸಹಾಯ ನಿರೀಕ್ಷಿಸಬಹುದು. ಹಣಕಾಸಿನ ವ್ಯವಹಾರಗಳಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ ಎಚ್ಚರದಿಂದಿರಿ. ನಿರೀಕ್ಷಿಸಿದ ಕಾರ್ಯಗಳು ವಿಳಂಬವಾಗಬಹುದು ಆದಷ್ಟು ಸಕಾಲದಲ್ಲಿ ಕೆಲಸವನ್ನು ಮಾಡಿಮುಗಿಸುವ ಹಠ ನಿಮ್ಮಲ್ಲಿರಲಿ. ಸ್ನೇಹಿತರ ಸಹವಾಸದಿಂದ ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸುವ ಸಾಧ್ಯತೆ ಇದೆ ಆದಷ್ಟು ನೀವು ಕುಟುಂಬದ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಮಾನಸಿಕ ಗೊಂದಲವನ್ನು ನಿವಾರಣೆ ಪಡಿಸಲು ಕ್ರಿಯಾತ್ಮಕ ಚಟುವಟಿಕೆ ಅವಶ್ಯಕವಾಗಿದೆ. ಕ್ರೀಡಾಕೂಟಗಳಲ್ಲಿ ಗೆಲುವಿನ ನಗೆ ನಿಮ್ಮದಾಗಿದೆ. ಹೊಸ ವಾಹನ ಖರೀದಿಯ ಬಯಕೆ ಈಡೇರುವ ಸಾಧ್ಯತೆ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262