ಪ್ರಮುಖ ಸುದ್ದಿ
ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್

ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿ ಇರುವ ಜಯದೇವ ಆಸ್ಪತ್ರೆ 24 ಗಂಟೆಗಳ ಓಪನ್ ಇರಲಿದ್ದು, ಸಿಎಂ ಸೂಚನೆ ಮೇರೆಗೆ 24 ಗಂಟೆ ತೆರೆಯಲಿದೆ.
ಅಂಜಿಯೋಗ್ರಾಂ, ಅಂಜಿಯೋಷ್ಲಾಸ್ಟಿ ಚಿಕಿತ್ಸೆಗೆ 24 ಗಂಟೆ ಸಿಗಲಿದೆ. ಜಯದೇವ ಆಸ್ಪತ್ರೆ ಓಪನ್ ಆಗಿ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತಿದೆ. ಆದರೆ ಸಂಜೆ ನಾಲ್ಕು ಗಂಟೆಗೆ ಕ್ಲೋಸ್ ಆಗಿ, ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ 24 ಗಂಟೆ ಓಪನ್‌ಗೆ ಸೂಚಿಸಿದ್ದರು. ಹೀಗಾಗಿ ಇಂದಿನಿಂದ 24 ಗಂಟೆ ಜಯದೇವ ಆಸ್ಪತ್ರೆ ಓಪನ್ ಇರಲಿದೆ.