ಪ್ರಮುಖ ಸುದ್ದಿ
ಮಾಜಿ ಸಚಿವ ಅಸ್ನೋಟಿಕರ್ ಪೊಲೀಸರ ವಶಕ್ಕೆ ಯಾಕೆ ಗೊತ್ತಾ.?
ಮಾಜಿ ಸಚಿವ ಅಸ್ನೋಟಿಕರ್ ಪೊಲೀಸರ ವಶಕ್ಕೆ ಯಾಕೆ ಗೊತ್ತಾ.?
ಬೆಂಗಳೂರಃ ಗೋವಾಗೆ ತೆರಳಲು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಬ್ಯಾಗ್ ನಲ್ಲಿ ಪಿಸ್ತೂಲ್ ಇರುವದನ್ನು ಪತ್ತೆ ಮಾಡಿದ ನಿಲ್ದಾಣದ ಪೊಲೀಸರು ಮಾಜಿ ಸಚಿವ ಅಸ್ನೋಟಿಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮಿಅಇದ ಸಂದರ್ಭದಲ್ಲಿ ಬ್ಯಾಗ್ ಚಕ್ ಮಾಡುವ ವೇಳೆ ಪಿಸ್ತೂಲ್ ದೊರೆತಿದ್ದು, ಪೊಲೀಸರು ಅಸ್ನೋಟಿಕರರನ್ನು ವಿಚಾರಣೆ ನಡೆಸಲಾಗಿ, ಅಸ್ನೋಟಿಕರ ಹೇಳಿಕೆ ಪ್ರಕಾರ ಪಿಸ್ತೂಲ್ ಗೆ ಪರವಾನಿಗೆ ಇದ್ದು, ಯಾವುದೇ ಅಕ್ರಮ ಪಿಸ್ತೂಲ್ ಹೊಂದಿರುವದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದು, ಪರವಾನಿಗೆ ಪಡೆದ ಪ್ರತಿ ಇತರೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಪೊಲೀಸರು ತಮ್ಮ ಕರ್ತವ್ಯವನ್ನು ತಾವೂ ಮಾಡಿದ್ದಾರೆ.