ಚಿಕ್ಕಮಗಳೂರು: NRI ವೈದ್ಯೆ ಮೇಲೆ ಯೋಗ ಗುರುವಿನಿಂದ ಅತ್ಯಾಚಾರ

ಚಿಕ್ಕಮಗಳೂರು: ಅಮೇರಿಕಾದಲ್ಲಿ ಪೌರತ್ವ ಪಡೆದಿರುವ NRI ವೈದ್ಯೆ ಮೇಲೆ ಯೋಗ ಗುರುವೊಬ್ಬ ಅತ್ಯಾಚಾರ ಎಸಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಅತ್ಯಾಚಾರ ಎಸಗಿರುವ ಯೋಗ ಗುರು.
ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಕೇವಲ ಎಂಬ ಆಶ್ರಮದಲ್ಲಿ ಈ ಘಟನೆ ನಡೆದಿದ್ದು, ಪಂಜಾಬ್ ಮೂಲದ ನವನೀತಾ ಕೌರ್ ಎಂಬ NRI ವೈದ್ಯೆಯ ಮೇಲೆ ಯೋಗ ಗುರು ಪ್ರದೀಪ್ ಅತ್ಯಾಚಾರ ಎಸಗಿದ್ದಾನೆ.
ಅಮೇರಿಕಾದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತ ಅಲ್ಲಿನ ಪೌರತ್ವ ಪಡೆದಿದ್ದ ನವನೀತಾ, ಕಳೆದ ಮೂರು ತಿಂಗಳ ಹಿಂದೆ ಕೇವಲ ಆಶ್ರಮಕ್ಕೆ ಯೋಗ, ಧ್ಯಾನಕ್ಕಾಗಿ ಬಂದಿದ್ದರು. ವಿದೇಶಿ ಮಹಿಳೆಯರಿಗೆ ಯೋಗ, ಧ್ಯಾನ ಕಲಿಸುತ್ತಿದ್ದ ಪ್ರದೀಪ್ ಇದೀಗ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದು, ಯೋಗ ಗುರುವಿನ ನೀಚ ಕೃತ್ಯ ಬೆಳಕಿಗೆ ಬಂದಿದೆ.
ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೈದ್ಯೆ ಪ್ರದೀಪ್ ವಿರುದ್ಧ ದೂರು ದಾಖಲಿಸಿದ್ದು, ಯೋಗ ಗುರುವಿನ ವಿರುದ್ಧ ಟ್ವಿಟರ್ X ನಲ್ಲಿ ಎನ್.ಆರ್.ಐ ವೈದ್ಯೆ ಪೋಸ್ಟ್ ಮಾಡಿದ್ದಾರೆ. ಇದೀಗ ಪೊಲೀಸರು ಅರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.